ಆ್ಯಪ್ನಗರ

ಐಕಿಯಾದ ಬೃಹತ್‌ ಮಳಿಗೆಯಲ್ಲಿ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ - ಬಸವರಾಜ ಬೊಮ್ಮಾಯಿ

ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯಲ್ಲಿರುವ ಸ್ವೀಡನ್‌ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ 'ಐಕಿಯಾ'ದ ಅತಿದೊಡ್ಡ ಮಳಿಗೆಯನ್ನು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Vijaya Karnataka Web 23 Jun 2022, 10:35 am
ಬೆಂಗಳೂರು: ಸ್ವೀಡನ್‌ ಮೂಲದ ಐಕಿಯಾ ಪೀಠೋಪಕರಣ ಮಳಿಗೆಯಲ್ಲಿ ಶೇ. 75 ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Vijaya Karnataka Web Ikea Basavaraj Bommai


ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಬುಧವಾರ ಸ್ವೀಡನ್‌ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ 'ಐಕಿಯಾ'ದ ಅತಿದೊಡ್ಡ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ದಾವೋಸ್‌ನಲ್ಲಿ ಅಂತಾರಾಷ್ಟ್ರೀಯ ಐಕಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಸುಮಾರು 3,000 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನ ಮಾಡಿದ್ದಾರೆ," ಎಂದು ಹೇಳಿದರು.

Ikea Bengaluru: 12.2 ಎಕರೆಯ ಬೃಹತ್‌ ಐಕಿಯಾ ಶೋರೂಂಗೆ ವಿಧ್ಯುಕ್ತ ಚಾಲನೆ

''ಐಕಿಯಾದಿಂದ ಸ್ಥಳೀಯ ಕುಶಲಕರ್ಮಿಗಳು, ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಶೇ. 27 ರಷ್ಟು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅದನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಲಾಗಿದೆ. ಒಂದು ಮಳಿಗೆಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ನೀಡಲಾಗುತ್ತಿದೆ. ಬೆಂಗಳೂರು ದಕ್ಷಿಣದಲ್ಲೂ ಒಂದು ಮಳಿಗೆ ತೆರೆಯಲು ತಿಳಿಸಲಾಗಿದೆ," ಎಂದರು.

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಇರುವ ಐಕಿಯಾ ಬೃಹತ್‌ ಮಳಿಗೆ


''ಐಕಿಯಾದಲ್ಲಿ ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಸಾಮಾನ್ಯ ಜನರಿಗೆ, ಮಧ್ಯಮ ವರ್ಗದವರ ಕನಸು ನನಸಾಗಿಸಲು ಇದು ಸಹಕಾರಿಯಾಗಿದೆ. ಉದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶಗಳು ಹೆಚ್ಚಬೇಕು ಎಂದಾದರೆ ನಾವು ಇಂತಹ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲೇಬೇಕು," ಎಂದು ಸಿಎಂ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಸ್ವೀಡನ್‌ ರಾಯಭಾರಿ ಕ್ಲಾಸ್‌ ಮೊಲಿನ್‌, ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್‌ ಪುಲ್ವೇಲರ್‌, ಐಕಿಯಾ ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪಕರಾದ ಆಂಜೆ ಹಿಮ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ