ಆ್ಯಪ್ನಗರ

ರಿಲಯನ್ಸ್‌ಗೆ ಎಡಿಐಎಯಿಂದ 5,512 ಕೋಟಿ ರೂ. ಹೂಡಿಕೆ

ಮುಕೇಶ್‌ ಅಂಬಾನಿ ನೇತೃತ್ವದ ಆರ್‌ಆರ್‌ವಿಎಲ್ ಅಬುಧಾಬಿ ಇನ್ವೆಸ್ಟ್‌ ಮೆಂಟ್‌ ಅಥಾರಿಟಿ 5,512.50 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಇದು ರಿಲಯನ್ಸ್‌ ರಿಟೇಲ್‌ನ ಈಕ್ವಿಟಿ ಮೌಲ್ಯವನ್ನು ಹೆಚ್ಚಿಸಿದೆ.

Vijaya Karnataka Web 7 Oct 2020, 11:39 am
ಮುಂಬಯಿ: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ರೀಟೇಲ್‌ ವೆಂಚರ್ಸ್‌ ಲಿಮಿಟೆಡ್‌ನಲ್ಲಿ(ಆರ್‌ಆರ್‌ವಿಎಲ್‌), ಅಬುಧಾಬಿ ಇನ್ವೆಸ್ಟ್‌ ಮೆಂಟ್‌ ಅಥಾರಿಟಿ(ಎಡಿಐಎ) 5,512.50 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಈ ಹೊಸ ಹೂಡಿಕೆಯು ರಿಲಯನ್ಸ್‌ ರಿಟೇಲ್‌ನ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಹೂಡಿಕೆ ಮೂಲಕ ರಿಲಯನ್ಸ್‌ ರೀಟೇಲ್‌ ವೆಂಚರ್ಸ್‌ನ 1.20% ಈಕ್ವಿಟಿ ಪಾಲು ಖರೀದಿಯನ್ನು ಎಡಿಐಎ ಮಾಡಿದಂತಾಗುತ್ತದೆ.
Vijaya Karnataka Web Reliance


ಈಗಿನ ವ್ಯವಹಾರವೂ ಸೇರಿಕೊಂಡಂತೆ ಸಿಲ್ವರ್‌ ಲೇಕ್‌, ಕೆಕೆಆರ್‌, ಜನರಲ್‌ ಅಟ್ಲಾಂಟಿಕ್‌, ಮುಬದಾಲ, ಜಿಐಸಿ, ಟಿಪಿಜಿ ಹಾಗೂ ಎಡಿಐಎ ಈ ಎಲ್ಲವೂ ಸೇರಿ ಕಳೆದ ನಾಲ್ಕು ವಾರದೊಳಗೆ 37,710 ಕೋಟಿ ರೂಪಾಯಿ ಹೂಡಿಕೆಯನ್ನು ರಿಲಯನ್ಸ್‌ ಸಂಗ್ರಹಿಸಿದಂತಾಗಿದೆ. ರಿಲಯನ್ಸ್‌ ರಿಟೇಲ್‌ ಲಿಮಿಟೆಡ್‌ ಎಂಬುದು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಹೊಸ ಹೂಡಿಕೆಗಳಿಂದ ರಿಲಯನ್ಸ್‌ ರಿಟೇಲ್‌ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಹೇಳಿದ್ದಾರೆ.

ಎಐಡಿಎಯ ಈಗಿನ ಹೂಡಿಕೆಯಿಂದ ಬಹಳ ಸಂತೋಷವಾಗಿದೆ. ರಿಲಾಯನ್ಸ್ ಸಂಸ್ಥೆಗೆ ಎಐಡಿಎ ಬೆಂಬಲ ಮುಂದುವರಿಸುತ್ತಿರುವುದು ಹರ್ಷ ತಂದಿದೆ. ಜಾಗತಿಕವಾಗಿ ನಾಲ್ಕು ದಶಕಗಳಿಂದ ಮೌಲ್ಯ ವೃದ್ಧಿಸುವ ಕೆಲಸ ಮಾಡುತ್ತಿರುವ ಎಐಡಿಎ ಸಂಸ್ಥೆಯ ಈ ಹೂಡಿಕೆಯಿಂದ ಬಹಳ ಪ್ರಯೋಜನ ಆಗುತ್ತದೆಂದು ನಂಬಿದ್ದೇನೆ ಎಂದು ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಸೋನಿಯೊಂದಿಗೆ ವಯೋಕಾಮ್‌18 ವಿಲೀನದಿಂದ ಹಿಂದೆ ಸರಿದ ಮುಕೇಶ್ ಅಂಬಾನಿ

ADIA ಆರಂಭವಾದದ್ದು 1976ರಲ್ಲಿ. ಜಾಗತಿಕ ಮಟ್ಟದಲ್ಲಿ ವಿವಿಧ ಹೂಡಿಕೆ ಸಂಸ್ಥೆಗಳಲ್ಲಿ ಅಬುಧಾಬಿ ಸರ್ಕಾರದ ಪರವಾಗಿ ಹೂಡಿಕೆ ಮಾಡಿಕೊಂಡು ಬಂದಿದೆ. ದೀರ್ಘಕಾಲದಲ್ಲಿ ಮೌಲ್ಯವನ್ನು ಸೃಷ್ಟಿಸುವಂತೆ ಮಾಡುವ ಕಡೆಗೆ ಎಡಿಐಎ ಗಮನ ನೆಟ್ಟಿರುತ್ತದೆ. ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಎಐಡಿಎ ಜೊತೆಗಿನ ಈ ಒಪ್ಪಂದ ಸಾಕಾರಗೊಳ್ಳಲು ರಿಲಾಯನ್ಸ್ ರೀಟೇಲ್ಗೆ ಹಣಕಾಸು ಸಲಹೆಗಾರನಾಗಿ ಕೆಲಸ ಮಾಡಿದ್ದು ಮಾರ್ಗನ್ ಸ್ಟಾನ್ಲೀ ಎಂಬ ಹಣಕಾಸು ಸಲಹಾ ಸಂಸ್ಥೆ. ಹಾಗೆಯೇ, ಸೈರಿಲ್ ಅಮರ್ಚಂದ್ ಮಂಗಲದಾಸ್ ಮತ್ತು ಡೇವಿಡ್ ಪೋಲ್ಕ್ ಅಂಡ್ ವಾರ್ಡ್ವೆಲ್ ಸಂಸ್ಥೆಗಳು ಕಾನೂನು ಸಲಹೆಗಾರನಾಗಿ ಮಾರ್ಗದರ್ಶನ ನೀಡಿದೆ. ಎಐಡಿಎ ಸಂಸ್ಥೆ ಈ ಮುಂಚೆಯೂ ರಿಲಾಯನ್ಸ್ ಇಂಡಸ್ಟ್ರೀಸ್ನ ಇತರ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ