ಆ್ಯಪ್ನಗರ

ಜೊಮ್ಯಾಟೊ ಬಳಿಕ 10 ನಿಮಿಷಗಳಲ್ಲಿ ಆಹಾರ ಡೆಲಿವರಿಗೆ ಮುಂದಾದ ಓಲಾ, ಧಾವಂತಕ್ಕೆ ಬಿದ್ದ ಕಂಪನಿಗಳು!

10 ನಿಮಿಷಗಳಲ್ಲಿ ಆಹಾರ ಡೆಲಿವರಿ ಸೇವೆ ಆರಂಭಿಸುವುದಾಗಿ ರೆಸ್ಟೋರೆಂಟ್‌ ಅಗ್ರಿಗೇಟರ್‌ ಜೊಮ್ಯಾಟೊ ಕಳೆದ ತಿಂಗಳು ಹೇಳಿದ ನಂತರ, ಇದೀಗ ಪ್ರತಿಸ್ಪರ್ಧಿ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಓಲಾ ಇದನ್ನೇ ಅನುಸರಿಸುತ್ತಿದ್ದು, ಖಿಚಡಿ, ಪಿಜ್ಜಾ, ರೋಲ್‌ನಂತಹ ತಿನಿಸು ಓಲಾ ಡ್ಯಾಶ್‌ ಮೂಲಕ ಕ್ಷಿಪ್ರ ರವಾನೆಯಾಗುತ್ತಿವೆ.

ETtech 14 Apr 2022, 10:20 am
ಬೆಂಗಳೂರು: 10 ನಿಮಿಷಗಳಲ್ಲಿ ಆಹಾರ ಡೆಲಿವರಿ ಸೇವೆ ಆರಂಭಿಸುವುದಾಗಿ ರೆಸ್ಟೋರೆಂಟ್‌ ಅಗ್ರಿಗೇಟರ್‌ ಜೊಮ್ಯಾಟೊ ಕಳೆದ ತಿಂಗಳು ಹೇಳಿದ ನಂತರ, ಪ್ರತಿಸ್ಪರ್ಧಿ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಓಲಾ ಇದನ್ನೇ ಅನುಸರಿಸುತ್ತಿವೆ.
Vijaya Karnataka Web food delivery


ಓಲಾ ತನ್ನ ತ್ವರಿತ ವಾಣಿಜ್ಯ ದಿನಸಿ ವಿತರಣಾ ಸಹಸಂಸ್ಥೆ 'ಓಲಾ ಡ್ಯಾಶ್‌' ಮೂಲಕ 10 ನಿಮಿಷಗಳಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಯ್ದ ಆಹಾರ ಪದಾರ್ಥಗಳನ್ನು ಡೆಲಿವರಿ ನೀಡಲು ಪ್ರಾರಂಭಿಸಿದೆ. ಮೆನುವಿನಲ್ಲಿ ಖಿಚಡಿ, ಪಿಜ್ಜಾ ಮತ್ತು ರೋಲ್‌ಗಳು ಒಳಗೊಂಡಿವೆ. ಇದನ್ನು ಓಲಾ 'ಈಗ ತಾನೇ ತಯಾರಿಸಿದ ಆಹಾರ' ಎಂದು ಉಲ್ಲೇಖಿಸಿದೆ.

ಸ್ವಿಗ್ಗಿ ವೇಗವಾದ ಆಹಾರ ವಿತರಣಾ ಕ್ರಮಗಳನ್ನು ಅನ್ವೇಷಿಸುತ್ತಿದೆ. ಆದರೂ 10 ನಿಮಿಷಗಳಲ್ಲಿ ಡೆಲಿವರಿ ಸಾಧ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

10 ನಿಮಿಷದಲ್ಲಿ ಫುಡ್‌ ಡೆಲಿವರಿ, ಜೊಮ್ಯಾಟೋ ನಡೆಗೆ ಭಾರೀ ವಿರೋಧ; ಹೀಗಿದ್ದೂ ಪಟ್ಟು ಬಿಡದ ಕಂಪನಿ
ಕುತೂಹಲಕರ ವಿಷಯವೆಂದರೆ, ಓಲಾ ಸಂಸ್ಥೆಯು ಫುಡ್‌ ರೋಬೋಟಿಕ್ಸ್‌ ಸ್ಟಾರ್ಟ್‌ಅಪ್‌ ಸಂಸ್ಥೆ 'ಮುಕುಂದ ಫುಡ್ಸ್‌'ನ ಸೌಲಭ್ಯಗಳನ್ನು ಬಳಸಿಕೊಳ್ಳಲಿದೆ. ಇದೇ ಮುಕುಂದ ಫುಡ್ಸ್‌ ಜೊಮ್ಯಾಟೊದಿಂದ 5 ಮಿಲಿಯನ್‌ ಡಾಲರ್‌ ಆರ್ಥಿಕ ನೆರವನ್ನು ಪಡೆದಿದೆ!

''ಕಂಪನಿಯು ಜೊಮ್ಯಾಟೊದೊಂದಿಗೆ ಯಾವುದೇ ವಿಶೇಷ ಷರತ್ತು ಹೊಂದಿಲ್ಲ ಮತ್ತು ಎಲ್ಲಾ ಮೂರು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಕಂಪನಿಯು ಚೀನೀ ಮತ್ತು ಭಾರತೀಯ ಭಕ್ಷ್ಯಗಳ ತಯಾರಿಕಾ ಸಮಯವನ್ನು ಶೇ. 20-50ರಷ್ಟು ಕಡಿಮೆ ಮಾಡುವ ಯಂತ್ರಗಳನ್ನು ತಯಾರಿಸುತ್ತಿದೆ. ಸ್ವಿಗ್ಗಿಯು ತನ್ನ ಕ್ಲೌಡ್‌ ಕಿಚನ್‌ಗಳಲ್ಲಿ ಆಹಾರ ತಯಾರಿಕೆಯನ್ನು ಸ್ವಯಂಚಾಲಿತಗೊಳಿಸಲು ನಮ್ಮ ಸ್ಮಾರ್ಟ್‌ ರೋಬೋಟಿಕ್‌ ಉಪಕರಣಗಳನ್ನು ಬಳಸಲು ನಮ್ಮ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ," ಎಂದು ಮುಕುಂದ ಫುಡ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್‌ ತಿಳಿಸಿದ್ದಾರೆ.

Zomatoಗೆ 10 ನಿಮಿಷದ ಡೆಲಿವರಿ ಆಟ: ಟ್ರಾಫಿಕ್‌ ಪೊಲೀಸರಿಗೆ ಪೀಕಲಾಟ!
ಬಳಕೆದಾರರ ಸಣ್ಣ ಗುಂಪಿಗೆ 10 ನಿಮಿಷಗಳಲ್ಲಿ ಆಹಾರ ವಿತರಿಸಲು ಈಗಾಗಲೇ ಗುರುಗ್ರಾಮದಲ್ಲಿ ಒಂದು ಆಹಾರ ಕೇಂದ್ರವನ್ನು ಜೊಮ್ಯಾ ಟ ಆರಂಭಿಸಿದೆ. ಅಡುಗೆ ತಯಾರಿಕೆಗೆ ಮುಕುಂದ ಪುಡ್ಸ್‌ನಿಂದ ಹಲವು ಯಂತ್ರಗಳನ್ನು ಜೊಮ್ಯಾಟೊ ಆರ್ಡರ್‌ ಮಾಡಿದೆ. ಒಂದು ಯಂತ್ರದ ಸರಾಸರಿ ಬೆಲೆ ಸುಮಾರು 1.5 ಲಕ್ಷ ರೂ. ಇದೆ ಎಂದು ಮೂಲಗಳು ತಿಳಿಸಿವೆ.

ಆದರೆ ಜೊಮ್ಯಾಟೊದ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜಕಾರಣಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಜನ ಕಿಡಿಕಾರಿದ್ದರು. ಇದು ಡೆಲಿವರಿ ಬಾಯ್‌ಗಳ ಜೀವವನ್ನು ಅಪಾಯಕ್ಕೆ ಒಡ್ಡುವ ನಡೆ ಎಂಬ ಆಕ್ಷೇಪ ಕೇಳಿ ಬಂದಿತ್ತು. ಹೀಗಿದ್ದೂ ಜೊಮ್ಯಾಟೋ ತನ್ನ ನಡೆಯಿಂದ ಹಿಂದೆ ಸರಿದಿಲ್ಲ. ಜತೆಗೆ ಇದೀಗ ಇತರ ಕಂಪನಿಗಳೂ ಇದೇ ಅಪಾಯಕಾರಿ ನಡೆ ಅನುಸರಿಸುತ್ತಿವೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ