ಆ್ಯಪ್ನಗರ

ಕಚ್ಚಾತೈಲ ಬೆಲೆ ಏರಿಕೆ: ಆಮದು ಕಡಿತಗೊಳಿಸಲು ಕೇಂದ್ರ ಚಿಂತನೆ

ಪ್ರಸ್ತುತ ಕಚ್ಚಾತೈಲ ಬ್ಯಾರೆಲ್‌ಗೆ ಸೋಮವಾರ ಶೇ. 2 ಏರಿಕೆಯಾಗುವುದರೊಂದಿಗೆ 80 ಡಾಲರ್‌ಗೆ ತಲುಪಿದೆ. ವರ್ಷಾಂತ್ಯಕ್ಕೆ ಪ್ರತಿ ಬ್ಯಾರೆಲ್ ಕಚ್ಚಾತೈಲಕ್ಕೆ 100 ಡಾಲರ್ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

Vijaya Karnataka Web 25 Sep 2018, 6:33 pm
ಹೊಸದಿಲ್ಲಿ: ತೈಲ ಬೆಲೆ ದಿನವೂ ಏರಿಕೆಯಾಗುತ್ತಿದ್ದು, ಮುಂಬಯಿಯಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್‌ಗೆ 90 ರೂ. ಗಡಿದಾಟಿದೆ. ಇದರ ಬೆನ್ನಲ್ಲೇ ದೇಶವು ಆಮದು ಮಾಡಿಕೊಳ್ಳುತ್ತಿರುವ ಕಚ್ಚಾಲದ ಪ್ರಮಾಣದಲ್ಲಿ ಇಳಿಕೆ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
Vijaya Karnataka Web An employee pumps fuel into a car at a Shell petrol station in Nairobi


ಪ್ರಸ್ತುತ ಕಚ್ಚಾತೈಲ ಬ್ಯಾರೆಲ್‌ಗೆ ಸೋಮವಾರ ಶೇ. 2 ಏರಿಕೆಯಾಗುವುದರೊಂದಿಗೆ 80 ಡಾಲರ್‌ಗೆ ತಲುಪಿದೆ. ವರ್ಷಾಂತ್ಯಕ್ಕೆ ಪ್ರತಿ ಬ್ಯಾರೆಲ್ ಕಚ್ಚಾತೈಲಕ್ಕೆ 100 ಡಾಲರ್ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ತೈಲ ಬೆಲೆ ಇಳಿಕೆಯಾಗುವವರೆಗೂ ಪ್ರಸ್ತುತ ದಾಸ್ತಾನು ಇರುವ ಕಚ್ಚಾತೈಲವನ್ನು ಬಳಸಿಕೊಳ್ಳಲು ಸೂಚಿಸಲಾಗುತ್ತದೆ.

ತೈಲ ಬೆಲ ಏರಿಕೆ ಗ್ರಾಹಕರಿಗೆ ಸಂಕಷ್ಟ ತಂದೊಡ್ಡುವ ಜತೆಗೆ ತೈಲ ರಿಫೈನರಿಗಳಿಗೆ, ಹೂಡಿಕೆದಾರರಿಗೆ ಸಮಸ್ಯೆಯಾಗಿದೆ. ರೂಪಾಯಿ ದರ ಡಾಲರ್ ಎದುರು ಕುಸಿತ ಕಂಡಿದ್ದು, ಷೇರು ಪೇಟೆಯಲ್ಲಿನ ಇಳಿಕೆ ಕೂಡ ಪರಿಣಾಮಕ್ಕೆ ಕಾರಣವಾಗಿದೆ.

ಭಾರತ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದು, ರೂಪಾಯಿ ಮೌಲ್ಯ ಕುಸಿದಿರುವುದರಿಂದ ಹೆಚ್ಚಿನ ಮೊತ್ತ ಕಚ್ಚಾತೈಲಕ್ಕೆ ಪಾವತಿಸಬೇಕಿದೆ. ಆದರೆ ಕಚ್ಚಾತೈಲ ಆಮದು ಪ್ರಮಾಣದಲ್ಲಿ ಇಳಿಕೆ ಮಾಡುವಂತೆ ಸರಕಾರ ತೈಲ ಶುದ್ಧೀಕರಣಗಾರ ಮತ್ತು ಸಂಗ್ರಹಣಗಾರಗಳಿಗೆ ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ