ಆ್ಯಪ್ನಗರ

ರಾಜಧಾನಿ ಎಕ್ಸ್‌ಪ್ರೆಸ್ ರೈಲು ದರದಲ್ಲಿ ಏರ್ ಇಂಡಿಯಾ ವಿಮಾನ ಪ್ರಯಾಣ ಸಾಧ್ಯ!

ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗಿಂತಲೂ ಕಡಿಮೆ ದರದಲ್ಲಿ ಪ್ರಯಾಣಿಸಲು ಏರಿ ಇಂಡಿಯಾ ವಿಶೇಷ ಕೊಡುಗೆ ನೀಡುತ್ತಿದೆ.

ಏಜೆನ್ಸೀಸ್ 9 Jul 2016, 4:32 pm
ಹೊಸದಿಲ್ಲಿ: ಹೆಚ್ಚು ಪ್ರಯಾಣಿಕರು ಓಡಾಡದ ಈ ಸಮಯದಲ್ಲಿ ವಿಮಾನ ಕಂಪನಿಗಳು ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗಿಂತಲೂ ಕಡಿಮೆ ದರದಲ್ಲಿ ಪ್ರಯಾಣಿಸಲು ಏರಿ ಇಂಡಿಯಾ ವಿಶೇಷ ಕೊಡುಗೆ ನೀಡುತ್ತಿದೆ.
Vijaya Karnataka Web air india offers same fare as rajdhani delhi mum tickets may cost as low as rs 2870
ರಾಜಧಾನಿ ಎಕ್ಸ್‌ಪ್ರೆಸ್ ರೈಲು ದರದಲ್ಲಿ ಏರ್ ಇಂಡಿಯಾ ವಿಮಾನ ಪ್ರಯಾಣ ಸಾಧ್ಯ!


ದಿಲ್ಲಿಯಿಂದ ಮುಂಬೈ ನಡುವೆ ಪ್ರಯಾಣಿಸಲು ರಾಜಧಾನಿ ಎಕ್ಸ್‌ಪ್ರೆಸ್‌‌ನ ಸೆಕೆಂಡ್ ಎಸಿ ದರ 2,870 ರೂ.ಗೆ ಸಮನಾಗಿ ಸರಕಾರಿ ಸ್ವಾಮ್ಯದ ವಿಮಾನ ಕಂಪನಿಯೂ ಪ್ರಯಾಣ ದರ ನಿಗದಿಗೊಳಿಸಿದೆ. ಆದರೆ, ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಬುಕ್ ಮಾಡಿ, ಅಂತಿಮ ಕ್ಷಣದವರೆಗೂ ಟಿಕೆಟ್ ಖಚಿತಗೊಳ್ಳದ ಪ್ರಯಾಣಿಕರಿಗೆ ಮಾತ್ರ ಈ ದರ ಅನ್ವಯವಾಗಲಿದೆ.

ಈ ಟೆಕೆಟ್‌ಗಳನ್ನು ಏರ್‌ಪೋರ್ಟ್ ಟಿಕೆಟ್ ಕೌಂಟರ್ ಅಥವಾ ಏರ್ ಇಂಡಿಯಾ ವೆಬ್‌ಸೈಟ್‌ ಮೂಲಕ ಕಾಯ್ದಿರಿಸಬಹುದು.

'ದಿಲ್ಲಿ-ಮುಂಬಯಿ (2,870 ರೂ.), ದಿಲ್ಲಿ-ಚೆನ್ನೈ (3,905 ರೂ.), ದಿಲ್ಲಿ-ಬೆಂಗಳೂರು (4020 ರೂ.) ಮತ್ತು ದಿಲ್ಲಿ-ಕೊಲ್ಕತ್ತಾ (2890 ರೂ.) ನಡುವೆ ಪ್ರಯಾಣಿಸುವವರಿಗೆ ಈ ಸೌಲಭ್ಯ ಲಭ್ಯ,' ಎಂದು ಹೆಸರು ಹೇಳಲಿಚ್ಛಿಸದ ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ಹಾರಾಟಕ್ಕೆ ನಾಲ್ಕು ಗಂಟೆಗಳ ಮುಂಚೆ ಈ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿದ ರೈಲ್ವೆ ಪ್ರಯಾಣಿಕರಿಗೆ ವಿಮಾನ ಪ್ರಯಾಣ ಸೌಲಭ್ಯದ ಯೋಜನೆಯ ವಿಸ್ತರಣೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ