ಆ್ಯಪ್ನಗರ

ವ್ಯಾಲೆಟ್‌ ಕದ್ದ ಏರ್‌ ಇಂಡಿಯಾದ ಕಮಾಂಡರ್‌ ಅಮಾನತು

ಸಿಡ್ನಿ ಏರ್‌ಪೋರ್ಟ್‌ನ ಸುಂಕಮುಕ್ತ ಮಳಿಗೆಯೊಂದರಲ್ಲಿ ವ್ಯಾಲಟ್‌ ಕಳವು ಮಾಡಿದ ಆರೋಪದನ್ವಯ ಏರ್‌ ಇಂಡಿಯಾದ ಹಿರಿಯ ಕಮಾಂಡರ್‌ ರೋಹಿತ್‌ ಭಾಸಿನ್‌ ಅವರನ್ನು ಅಮಾನತುಗೊಳಿಸಲಾಗಿದೆ...

PTI 24 Jun 2019, 5:00 am
ಹೊಸದಿಲ್ಲಿ: ಸಿಡ್ನಿ ಏರ್‌ಪೋರ್ಟ್‌ನ ಸುಂಕಮುಕ್ತ ಮಳಿಗೆಯೊಂದರಲ್ಲಿ ವ್ಯಾಲಟ್‌ ಕಳವು ಮಾಡಿದ ಆರೋಪದನ್ವಯ ಏರ್‌ ಇಂಡಿಯಾದ ಹಿರಿಯ ಕಮಾಂಡರ್‌ ರೋಹಿತ್‌ ಭಾಸಿನ್‌ ಅವರನ್ನು ಅಮಾನತುಗೊಳಿಸಲಾಗಿದೆ.
Vijaya Karnataka Web air india suspends its regional director
ವ್ಯಾಲೆಟ್‌ ಕದ್ದ ಏರ್‌ ಇಂಡಿಯಾದ ಕಮಾಂಡರ್‌ ಅಮಾನತು


ಏರ್‌ ಇಂಡಿಯಾದ ಪೂರ್ವ ವಿಭಾಗದ ಪ್ರಾದೇಶಿಕ ನಿರ್ದೇಶಕ ರೋಹಿತ್‌ ಅವರು, ದಿಲ್ಲಿಗೆ ವಿಮಾನ ಹಾರಾಟದ ಕಾರ್ಯಾಚರಣೆ ನಡೆಸುವ ಮುನ್ನ ಸಿಡ್ನಿ ಏರ್‌ಪೋರ್ಟ್‌ನಲ್ಲಿ ಶಾಪಿಂಗ್‌ ಮಾಡಿದ್ದರು. ಆ ಸಂದರ್ಭದಲ್ಲಿ ಕಳವು ಮಾಡಿದ ಆರೋಪವಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ವಿಚಾರಣೆಯು ಬಾಕಿ ಇದೆ ಎಂದು ಏರ್‌ ಇಂಡಿಯಾದ ನಿರ್ದೇಶಕ ಅಮೃತ್‌ ಶರಣ್‌ ಹೇಳಿದ್ದಾರೆ.

''ನಾನು ತಾತನಾದೆ ಎನ್ನುವ ಸುದ್ದಿಯು ಮನೆಯಿಂದ ಬಂದಿತ್ತು. ನನ್ನ ಸೊಸೆಗೆ ಉಡುಗೊರೆ ನೀಡುವ ಸಲುವಾಗಿ ಶಾಪಿಂಗ್‌ ಮಾಡಲು ಹೋಗಿದ್ದೆ. ಆಯ್ಕೆ ಮಾಡುವುದು ತಡವಾಯಿತು. ವಿಮಾನ ಸೇವೆಗೆ ಸಮಯವಾಗಿದ್ದು ಅರಿವಿಗೆ ಬಂದ ತಕ್ಷಣ, ತರಾತುರಿಯಲ್ಲಿ ಅಲ್ಲಿಂದ ಹೊರಟೆ. ವಿಮಾನ ಹತ್ತಿದಾಗಲೇ, ನಾನು ಬಿಲ್‌ ಪಾವತಿಸಿಲ್ಲ ಎನ್ನುವ ವಿಷಯ ಅರಿವಿಗೆ ಬಂತು,'' ಎಂದು ರೋಹಿತ್‌ ಹೇಳಿದ್ದಾರೆ.

ಇದೇನು ಹೊಸತಲ್ಲ!
ಏರ್‌ ಇಂಡಿಯಾ ಸಿಬ್ಬಂದಿ ಕಳವಿನ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದ ಉದಾಹರಣೆಗಳೂ ಸಾಕಷ್ಟಿವೆ. ಏರ್‌ ಇಂಡಿಯಾದಲ್ಲಿ ವಿತರಣೆಯಾಗದೆ ಉಳಿದ ಆಹಾರ ಪದಾರ್ಥಗಳು ಮತ್ತು ಡ್ರೈ ರೇಷನ್‌ ಕದ್ದಿದ್ದ ಆರೋಪದಲ್ಲಿ 4 ಉದ್ಯೋಗಿಗಳ ವಿರುದ್ಧ ಕಳೆದ ಜನವರಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಹೊಸದಿಲ್ಲಿ-ಸಿಡ್ನಿ ಮಾರ್ಗದ ಏರ್‌ ಇಂಡಿಯಾ ವಿಮಾನದ ಇಬ್ಬರು ಅಧಿಕಾರಿಗಳೂ ಆಹಾರ ಕಳವಿನ ಆರೋಪ ಹೊತ್ತಿದ್ದು, ಅವರಿಗೆ ಇಲಾಖೆಯು ಎಚ್ಚರಿಕೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ