ಆ್ಯಪ್ನಗರ

ಇನ್ನು ನಿಮ್ಮ ಮೊಬೈಲ್ ಡಾಟಾ ವ್ಯರ್ಥವಾಗಲ್ಲ; ಏರ್‌ಟೆಲ್ ಹೊಸ ಯೋಜನೆ

ಏರ್‌ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಶುಭಸುದ್ದಿ. ನೀವು ರೀಚಾರ್ಜ್ ಮಾಡಿಕೊಂಡ ಡಾಟಾ ನಿರ್ದಿಷ್ಟ ಕಾಲಮಿತಿಯಲ್ಲಿ ಬಳಸದಿದ್ದರೆ...ಅದು ವ್ಯರ್ಥವಾಗುತ್ತದೆಂದು ಇನ್ನು ಮುಂದೆ ಕೊರಗಬೇಕಾಗಿಲ್ಲ. ಗಡುವು ಮುಗಿಯುತ್ತಿದೆ ಎಂದೂ, ಇನ್ನೂ ಡಾಟಾ ಉಳಿಯಿತಲ್ಲಾ ಎಂದುಕೊಂಡು ಕೊನೆಯ ದಿನ ಮನಬಂದಂತೆ ಇರೋಬರೋ ಡಾಟಾನೆಲ್ಲಾ ಮುಗಿಸಬೇಕಾದ ಅಗತ್ಯವಿಲ್ಲ.

ET Online 10 Jul 2017, 6:09 pm
ಹೊಸದಿಲ್ಲಿ: ಏರ್‌ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಶುಭಸುದ್ದಿ. ನೀವು ರೀಚಾರ್ಜ್ ಮಾಡಿಕೊಂಡ ಡಾಟಾ ನಿರ್ದಿಷ್ಟ ಕಾಲಮಿತಿಯಲ್ಲಿ ಬಳಸದಿದ್ದರೆ...ಅದು ವ್ಯರ್ಥವಾಗುತ್ತದೆಂದು ಇನ್ನು ಮುಂದೆ ಕೊರಗಬೇಕಾಗಿಲ್ಲ. ಗಡುವು ಮುಗಿಯುತ್ತಿದೆ ಎಂದೂ, ಇನ್ನೂ ಡಾಟಾ ಉಳಿಯಿತಲ್ಲಾ ಎಂದುಕೊಂಡು ಕೊನೆಯ ದಿನ ಮನಬಂದಂತೆ ಇರೋಬರೋ ಡಾಟಾನೆಲ್ಲಾ ಮುಗಿಸಬೇಕಾದ ಅಗತ್ಯವಿಲ್ಲ.
Vijaya Karnataka Web airtel postpaid customers carry forward unused data
ಇನ್ನು ನಿಮ್ಮ ಮೊಬೈಲ್ ಡಾಟಾ ವ್ಯರ್ಥವಾಗಲ್ಲ; ಏರ್‌ಟೆಲ್ ಹೊಸ ಯೋಜನೆ


ಯಾಕೆಂದರೆ ಆ ರೀತಿ ಬಳಸದ ಡಾಟಾವನ್ನು ಶೀಘ್ರದಲ್ಲೇ ಮುಂದಿನ ತಿಂಗಳಿಗೆ ಕ್ಯಾರಿ ಫಾರ್ವಡ್ ಮಾಡುವ ಹೊಸ ಯೋಜನೆಯನ್ನು ಏರ್‌ಟೆಲ್ ಪರಿಚಯಿಸಿದೆ. ಬಳಕೆದಾರರಿಗೆ ನೀಡಲಾದ ಡಾಟಾದಲ್ಲಿನ ಕೊನೆಯ ಬೈಟ್‍ವರೆಗೂ ಯಾವಾಗ ಬೇಕಾದರೂ ಬಳಸಿಕೊಳ್ಳುವ ಅವಕಾಶ ಈ ಯೋಜನೆ ಮೂಲಕ ಲಭ್ಯವಾಗುತ್ತಿದೆ.

'ಪ್ರಾಜೆಕ್ಟ್ ನೆಕ್ಸ್ಟ್'ನ ಭಾಗವಾಗಿ ಈ ಯೋಜನೆಯನ್ನು ಏರ್‌ಟೆಲ್ ಪರಿಚಯಿಸುತ್ತಿದೆ. ಆಗಸ್ಟ್‌ನಿಂದ ಇದು ಜಾರಿಗೆ ಬರಲಿದೆ. ಬಳಕೆ ಮಾಡದ ಡಾಟಾ ಮುಂದಿನ ತಿಂಗಳ ಬಿಲ್‍ಗೆ ಜಮೆ ಆಗುತ್ತಿರುತ್ತದೆ. ಇದರ ಮೂಲಕ ಇನ್ನು ಡಾಟಾ ವ್ಯರ್ಥವಾಗುತ್ತದೆ ಎಂಬ ಮಾತೇ ಇರಲ್ಲ ಎಂದು ಕಂಪೆನಿ ಹೇಳಿದೆ.

ಬಳಕೆದಾರರು ತಾವು ಬಳಸಿದ ಡಾಟಾ, ಉಳಿದ ಡಾಟಾವನ್ನು 'ಮೈ ಏರ್‌ಟೆಲ್' ಆ್ಯಪ್‌ ಮೂಲಕ ಆಗಿಂದಾಗ್ಗೆ ಪರೀಕ್ಷಿಸಿಕೊಳ್ಳಬಹುದು ಎಂದು ಕಂಪೆನಿ ಪ್ರತಿನಿಧಿಗಳು ಸೋಮವಾರ ನಡೆಸಿದ ಮಾಧ್ಯಮ ಸಮಾವೇಶದಲ್ಲಿ ತಿಳಿಸಿದ್ದಾರೆ. ಆ್ಯಪ್‌, ವೆಬ್‌ಸೈಟ್, ಇನ್‍ಸ್ಟೋರ್ ಎಕ್ಸ್‌ಪೀರಿಯನ್ಸ್‌ಗಳಲ್ಲಿ ತಂದಿರುವ ಹೊಸ ಬದಲಾವಣೆಗಳ ಬಗ್ಗೆ ವಿವರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ