ಆ್ಯಪ್ನಗರ

ದಕ್ಷಿಣ ಭಾರತದಲ್ಲಿ ಅಮೆಜಾನ್‌ನಿಂದ ಬೃಹತ್‌ ಡಾಟಾ ಸೆಂಟರ್‌, 20,761 ಕೋಟಿ ರೂ. ಹೂಡಿಕೆ

ಅಮೆಜಾನ್‌ ಜೊತೆಗಿನ ಸರಣಿ ಸಭೆಗಳ ಬಳಿಕ ಅಂತಿಮವಾಗಿ ಕಂಪನಿಯು ರಾಜ್ಯದಲ್ಲಿ 20,761 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿ ಹಲವು ಡಾಟಾ ಸೆಂಟರ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್‌ ಹೇಳಿದ್ದಾರೆ.

Agencies 7 Nov 2020, 3:05 pm
ಹೈದರಾಬಾದ್‌: ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತೆಲಂಗಾಣ ರಾಜ್ಯದಲ್ಲಿ ಹಲವು ಡೇಟಾ ಸೆಂಟರ್‌ಗಳನ್ನು ಆರಂಭಿಸಲು ನಿರ್ಧರಿಸಿದ್ದು, ಅಮೆಜಾನ್‌ ವೆಬ್‌ ಸರ್ವೀಸಸ್‌ 2.77 ಬಿಲಿಯನ್‌ ಡಾಲರ್‌ (20,761 ಕೋಟಿ ರೂ.) ಹಣ ಹೂಡಿಕೆ ಮಾಡಲಿದೆ ಎಂದು ಐಟಿ ಮತ್ತು ಕೈಗಾರಿಕೆ ಸಚಿವ ಕೆಟಿ ರಾಮರಾವ್‌ ಹೇಳಿದ್ದಾರೆ.
Vijaya Karnataka Web Amazon


ರಾಜ್ಯದ ಇತಿಹಾಸದಲ್ಲಿಯೇ ಇದು ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ ಎಂದು ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸಚಿವ ಕೆಟಿ ರಾಮರಾವ್‌, ಅಮೆಜಾನ್‌ ಜೊತೆಗಿನ ಸರಣಿ ಸಭೆಗಳ ಬಳಿಕ ಅಂತಿಮವಾಗಿ ಕಂಪನಿಯು ರಾಜ್ಯದಲ್ಲಿ 20,761 ಕೋಟಿ ರೂ. ಹಣ ಹೂಡಿಕೆ ಮಾಡಿ ಹಲವು ಡಾಟಾ ಸೆಂಟರ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ. 2022ರ ಮಧ್ಯ ಭಾಗದಲ್ಲಿ ಇದಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ದಾವೋಸ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ಅಮೆಜಾನ್‌ನ ಅಧಿಕಾರಿಗಳನ್ನು ಸಚಿವರು ಭೇಟಿಯಾಗಿದ್ದರು. ಇದಾದ ಬಳಿಕ ಈ ಹೂಡಿಕೆ ಪ್ರಸ್ತಾಪ ಬಂದಿತ್ತು. ಇದೀಗ ಪ್ರಸ್ತಾವ ಅಂತಿಮ ಹಂತಕ್ಕೆ ಬಂದಿದ್ದು, ಹಣ ಹೂಡಲು ಅಮೆಜಾನ್‌ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ