ಆ್ಯಪ್ನಗರ

ಅಮೆಜಾನ್‌ನ ಅತಿ ದೊಡ್ಡ ಕ್ಯಾಂಪಸ್‌ ಆರಂಭ

ಅಮೆರಿಕ ಮೂಲದ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ನ ಹೊಸ ಕ್ಯಾಂಪಸ್‌ನ ಉದ್ಘಾಟನೆಯು ಬುಧವಾರ ನಡೆಯಿತು. ಇದು ಅಮೆಜಾನ್‌ನ ದೊಡ್ಡ ಕ್ಯಾಂಪಸ್‌ ಆಗಿದ್ದು, ಇಲ್ಲಿ ಕಂಪನಿಯ 15,000 ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ.

THE ECONOMIC TIMES 22 Aug 2019, 5:00 am
ಹೈದರಾಬಾದ್‌ :ಅಮೆರಿಕ ಮೂಲದ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ನ ಹೊಸ ಕ್ಯಾಂಪಸ್‌ನ ಉದ್ಘಾಟನೆಯು ಬುಧವಾರ ನಡೆಯಿತು. ಇದು ಅಮೆಜಾನ್‌ನ ದೊಡ್ಡ ಕ್ಯಾಂಪಸ್‌ ಆಗಿದ್ದು, ಇಲ್ಲಿ ಕಂಪನಿಯ 15,000 ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ಭಾರತದಲ್ಲಿ ಇವರೂ ಸೇರಿದಂತೆ 62,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಮೆಜಾನ್‌ ಹೊಂದಿದಂತಾಗಿದೆ.
Vijaya Karnataka Web amazons hyderabad campus is biggest
ಅಮೆಜಾನ್‌ನ ಅತಿ ದೊಡ್ಡ ಕ್ಯಾಂಪಸ್‌ ಆರಂಭ


30 ಲಕ್ಷ ಚ.ಅಡಿಯ ಪ್ರದೇಶದಲ್ಲಿ 18 ಲಕ್ಷ ಚ.ಅಡಿಯ ಕಚೇರಿ ರೂಪುಗೊಂಡಿದೆ. ಒಟ್ಟು ಪ್ರದೇಶದ ನೆಲೆಯಲ್ಲಿ ಇದು ವಿಶ್ವದಲ್ಲಿಯೇ ಅಮೆಜಾನ್‌ನ ಏಕೈಕ ಬೃಹತ್‌ ಕಟ್ಟಡವಾಗಿದೆ ಎಂದು ಅಮೆಜಾನ್‌ನ ಗ್ಲೋಬಲ್‌ ರಿಯಲ್‌ ಎಸ್ಟೇಟ್‌ ಆ್ಯಂಡ್‌ ಫೆಸಿಲಿಟಿಸ್‌ ವಿಭಾಗದ ಉಪಾಧ್ಯಕ್ಷ ಜಾನ್‌ ಸ್ಕೋಯೆಟ್ಲರ್‌ ಹೇಳಿದ್ದಾರೆ.

ಭಾರತದ ಇ-ಕಾಮರ್ಸ್‌ ಮಾರುಕಟ್ಟೆಯಲ್ಲಿ ನಂ.1 ಸ್ಥಾನಕ್ಕಾಗಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಜೊತೆ ಅಮೆಜಾನ್‌ ಕಾದಾಡುತ್ತಿದೆ. ಹೊಸ ಕ್ಯಾಂಪಸ್‌ ಮೂಲಕ ಭಾರತದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಅಮೆಜಾನ್‌ ಮುಂದಾಗಿದೆ.

* 2016ರಲ್ಲಿ ಇಲ್ಲಿನ ಕ್ಯಾಂಪಸ್‌ಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಈ ಕ್ಯಾಂಪಸ್‌ ಕಟ್ಟಡಕ್ಕಾಗಿ ಐಫೆಲ್‌ ಟವರ್‌ಗೆ ಬಳಸಲಾದ ಉಕ್ಕಿಗಿಂತಲೂ ಎರಡೂವರೆಪಟ್ಟು ಹೆಚ್ಚಿನ ಉಕ್ಕನ್ನು ಬಳಸಲಾಗಿದೆ.

* ಪ್ರತಿ ದಿನ ಸರಾಸರಿ 2,000 ಕೆಲಸಗಾರರು ದುಡಿದು 39 ತಿಂಗಳಲ್ಲಿ ಈ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ 18 ಲಕ್ಷ ಮಾನವ ಗಂಟೆಗಳು ಬಳಕೆಯಾಗಿವೆ.

* ಅಮೆರಿಕ ಹೊರತಾಗಿ ಅಮೆಜಾನ್‌ ರೂಪಿಸಿರುವ ಬೃಹತ್‌ ಕ್ಯಾಂಪಸ್‌ ಇದಾಗಿದೆ. ಭಾರತದಲ್ಲಿನ ಪ್ರತಿಭಾವಂತರನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಮೆಜಾನ್‌ ನಡೆ ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ