ಆ್ಯಪ್ನಗರ

ಇದೀಗ ಅಮಿತ್ ಶಾ ಎಂಟ್ರಿ: ಸಮಸ್ಯೆ ನಿವಾರಣೆಗೆ ಎಲ್ಲಾ ಪ್ರಯತ್ನ ನಡೆಸಿದ್ದೇವೆ ಎಂದ ಅಮಿತ್ ಶಾ

ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಘೋಷಿಸಿರುವ ಎರಡನೇ ಹಂತದ ವಿನಾಯ್ತಿ ನೀತಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಬಲಿಸಿದ್ದಾರೆ. ಆರ್‌ಬಿಐ ನಿರ್ಧಾರಗಳು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳಿಗೆ ಪೂರಕ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 17 Apr 2020, 6:57 pm
ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸೈಲೆಂಟಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ,ಇಡೀ ಪೊಲೀಸ್ ಬಲವನ್ನು ಸಜ್ಜುಗೊಳಿಸಿ ಕೊರೊನಾ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.
Vijaya Karnataka Web amit shah (1)​
ಸಂಗ್ರಹ ಚಿತ್ರ


ಲಾಕ್‌ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ ಅಮಿತ್ ಶಾ, ಇದಕ್ಕಾಗಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಸದ್ಯ ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಆರ್‌ಬಿಐ ಘೋಷಿಸಿರುವ ಎರಡನೇ ಹಂತದ ವಿನಾಯ್ತಿ ನೀತಿಯನ್ನು ಅಮಿತ್ ಶಾ ಬಹುವಾಗಿ ಮೆಚ್ಚಿಕೊಂಡಿದ್ದು, ಆರ್‌ಬಿಐ ನಿರ್ಧಾರದಿಂದ ದೇಶದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಕಾರಣ: ಎರಡನೇ ಸುತ್ತಿನ ವಿನಾಯ್ತಿ ಘೋಷಿಸಿದ ಆರ್‌ಬಿಐ!

ಆರ್‌ಬಿಐ ನಿರ್ಧಾರಗಳು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳಿಗೆ ಪೂರಕವಾಗಿದ್ದು, ಇಂದು ಘೋಷಣೆ ಮಾಡಲಾದ ವಿನಾಯ್ತಿಗಳಿಂದ ಜನರಿಗೆ ಲಾಭವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.


ಇದೇ ವೇಳೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಭಾರತವನ್ನು ಸೋಲಲು ನಾವು ಬಿಡುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.



#ThankYouCoronaWarriors: ವೈದ್ಯಲೋಕದ ನಿಸ್ವಾರ್ಥ ಸೇವೆಗೆ ಶಾ ಸಲಾಂ..

ಈ ಹೋರಾಟದಲ್ಲಿ ಇಡೀ ದೇಶ ಒಂದಾಗಿದ್ದು, ಈ ಒಗ್ಗಟ್ಟಿನ ಬಲದ ಮೂಲಕವೇ ನಾವು ಮಾರಕ ವೈರಾಣುವನ್ನು ಈ ನೆಲದಿಂದ ಒದ್ದೊಡಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ