ಆ್ಯಪ್ನಗರ

ಟ್ವಿಟರ್‌ ಮೂಲಕ ರೈಲು ಏರಿದ ಅಮುಲ್‌

ಹೈನುಗಾರಿಕೆ ದೈತ್ಯ ಅಮುಲ್‌ ಇಂಡಿಯಾ ತನ್ನ ಶೀತಲೀಕೃತ ಬೆಣ್ಣೆಯನ್ನು ದೇಶಾದ್ಯಂತ ಸಾಗಿಸಲು ಭಾರತೀಯ ರೈಲ್ವೆ ಜತೆ ಒಪ್ಪಂದ ಮಾಡಿಕೊಂಡಿದೆ.

Vijaya Karnataka Web 11 Nov 2017, 8:17 pm
ದೇಶಾದ್ಯಂತ ಅಮುಲ್‌ ಬೆಣ್ಣೆ ಸಾಗಣೆಗೆ ರೈಲ್ವೆ ಸಹಯೋಗ
Vijaya Karnataka Web amul boards indian railways via twitter
ಟ್ವಿಟರ್‌ ಮೂಲಕ ರೈಲು ಏರಿದ ಅಮುಲ್‌


ಹೊಸದಿಲ್ಲಿ: ಹೈನುಗಾರಿಕೆ ದೈತ್ಯ ಅಮುಲ್‌ ಇಂಡಿಯಾ ತನ್ನ ಶೀತಲೀಕೃತ ಬೆಣ್ಣೆಯನ್ನು ದೇಶಾದ್ಯಂತ ಸಾಗಿಸಲು ಭಾರತೀಯ ರೈಲ್ವೆ ಜತೆ ಒಪ್ಪಂದ ಮಾಡಿಕೊಂಡಿದೆ.

'ಈ ಒಪ್ಪಂದದ ಅನ್ವಯ 17 ಮೆಟ್ರಿಕ್‌ ಟನ್‌ ತೂಕದ ಮೊದಲ ಅಮುಲ್‌ ಬಟರ್‌ ಸರಕು ಹೊತ್ತ ನಮ್ಮ ರೈಲು ಪಾಲನ್‌ಪುರದಿಂದ ದಿಲ್ಲಿಗೆ ಇಂದು ಹೊರಟಿದೆ. ರೈಲ್ವೆ ಸಚಿವಾಲಯಕ್ಕೆ ಧನ್ಯವಾದಗಳು' ಎಂದು ಅಮುಲ್‌ ಟ್ವೀಟ್‌ ಮಾಡಿದೆ.

ಈ ವ್ಯವಸ್ಥೆಗಾಗಿ ಅಕ್ಟೋಬರ್‌ 23ರಂದು ಅಮುಲ್‌ ಇಂಡಿಯಾ ತನ್ನ ಟ್ವಿಟರ್‌ ಹ್ಯಾಂಡಲ್‌ ಮೂಲಕ ರೈಲ್ವೆ ಸಚಿವಾಲಯವನ್ನು ಸಂಪರ್ಕಿಸಿತ್ತು. ಶೀತಲೀಕೃತ ಅಮುಲ್‌ ಬಟರ್‌ (ಬೆಣ್ಣೆ)ಯನ್ನು ದೇಶಾದ್ಯಂತ ಸಾಗಿಸಲು ರೈಲ್ವೆಯ ಶೀತಲೀಕೃತ ಪಾರ್ಸೆಲ್‌ ವ್ಯಾನ್‌ಗಳನ್ನು ಬಳಸಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ತಿಳಿಸಿತ್ತು.

First refrigerator van with 17 MT #Amul Butter being flagged off from Palanpur to Delhi with our milk train. Thanks @RailMinIndia for the prompt action. pic.twitter.com/ERC5Fh0CNo — Amul.coop (@Amul_Coop) November 11, 2017 ಟ್ವಿಟರ್‌ ಮೂಲಕ ಮುಂದಿಟ್ಟ ಈ ಪ್ರಸ್ತಾವಕ್ಕೆ ತ್ವರಿತವಾಗಿ ಸ್ಪಂದಿಸಿದ ರೈಲ್ವೆ ಇಲಾಖೆ 'ದೇಶಾದ್ಯಂತ ಅಮುಲ್‌ ಉತ್ಪನ್ನಗಳ ಸಾಗಿಸಿ ಪ್ರತಿಯೊಬ್ಬ ಭಾರತೀಯನ ಮನೆ ಮನೆಗೆ ತಲುಪಿಸಲು ನಾವು ಸಂತಸಪಡುತ್ತೇವೆ' ಎಂದು @RailMinIndia ಟ್ವಿಟರ್‌ ಹ್ಯಾಂಡಲ್‌ ಮೂಲಕ ಪ್ರತಿಕ್ರಿಯಿಸಿತು.

ಪ್ರಯಾಣಿಕರ ಸಂಕಷ್ಟಗಳ ನಿವಾರಣೆಗೆ ರೈಲ್ವೆ ಇಲಾಖೆ ಟ್ವಿಟರ್‌ ಅನ್ನು ವ್ಯಾಪಕವಾಗಿ ಬಳಸುತ್ತಿದೆ. ಆದರೆ ಉದ್ಯಮ ಸಹಯೋಗಕ್ಕಾಗಿ ಇದನ್ನು ಬಳಸಿಕೊಂಡಿದ್ದು ಇದೇ ಮೊದಲು.

ಭಾರತೀಯ ರೈಲ್ವೆಕೆಲವು ವರ್ಷಗಳ ಹಿಂದಯೇ, ಹಣ್ಣುಗಳು, ತರಕಾರಿ, ಶೀತಲೀಕೃತ ಮಾಂಸ/ಕೋಳಿ ಮತ್ತು ಚಾಕೊಲೇಟ್‌ಗಳ ಸಾಗಾಟಕ್ಕೆ ಶೀತಲೀಕೃತ ವ್ಯಾನ್‌ ಸೇವೆಯನ್ನು ಪರಿಚಯಿಸಿತ್ತು. ಹಾಗಿದ್ದರೂ ಇದುವರೆಗೆ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಮಾತ್ರ ಈ ಸೇವೆ ಜಾರಿಯಲ್ಲಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ