ಆ್ಯಪ್ನಗರ

ರಜನಿ ಬಳಸಿದ್ದ ಥಾರ್‌ ಈಗ ಮಹೀಂದ್ರಾ ಮ್ಯೂಸಿಯಂಗೆ

ರಜನಿಕಾಂತ್‌ ಅವರ ಹೊಸ ಸಿನಿಮಾ 'ಕಾಲಾ'ದಲ್ಲಿ ಬಳಕೆಯಾಗಿರುವ ಮಹೀಂದ್ರಾ ಥಾರ್‌ ಎಸ್‌ಯುವಿ ಈಗ, ಆ ಕಂಪನಿ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರ ಸಂಗ್ರಹಕ್ಕೆ ಸೇರಿಕೊಂಡಿದೆ.

Agencies 9 Jun 2018, 5:00 am
ಹೊಸದಿಲ್ಲಿ: ರಜನಿಕಾಂತ್‌ ಅವರ ಹೊಸ ಸಿನಿಮಾ 'ಕಾಲಾ'ದಲ್ಲಿ ಬಳಕೆಯಾಗಿರುವ ಮಹೀಂದ್ರಾ ಥಾರ್‌ ಎಸ್‌ಯುವಿ ಈಗ, ಆ ಕಂಪನಿ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರ ಸಂಗ್ರಹಕ್ಕೆ ಸೇರಿಕೊಂಡಿದೆ.
Vijaya Karnataka Web Kaala


ವಿನೂತನವಾಗಿ ಎಲ್ಲಿ ವಾಹನಗಳು ಕಾಣಿಸಿದರೂ, ಅದನ್ನು ಗುರ್ತಿಸಿ ತಮ್ಮ ಕಂಪನಿಯ ಮ್ಯೂಸಿಯಂಗೆ ಸೇರಿಸುವುದು ಆನಂದ್‌ ಮಹೀಂದ್ರಾ ಅವರ ಹವ್ಯಾಸ. ಇಂಥ ವಿನೂತನ ಸಂಗತಿಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಅವರು, ಕಾಲಾ ವಾಹನದ ಬಗ್ಗೆಯೂ ವಿವರಿಸಿದ್ದಾರೆ. ಕಾಲಾ ಸಿನಿಮಾದ ಪೋಸ್ಟರ್‌ನಲ್ಲಿ ಥಾರ್‌ ಎಸ್‌ಯುವಿ ಮೇಲೆ ರಜನಿ ಸ್ಟೈಲಾಗಿ ಕುಳಿತಿರುವ ಭಂಗಿ ಅಭಿಮಾನಿಗಳ ಸೆಳೆದಿದೆ. ಒಂದು ವರ್ಷದ ಹಿಂದೆ ಪೋಸ್ಟರ್‌ ಬಂದಾಗಲೇ, ಆ ಎಸ್‌ಯುವಿಗೆ ಆನಂದ್‌ ಬೇಡಿಕೆ ಮುಂದಿಟ್ಟಿದ್ದರು. ಆಗ ಇನ್ನೂ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾ ಈಗ ಬಿಡುಗಡೆಯಾಗಿದ್ದು, ಚಿತ್ರದ ನಿರ್ಮಾಪಕರು ಥಾರ್‌ ಅನ್ನು ಆನಂದ್‌ಗೆ ನೀಡಿದ್ದಾರೆ.

''ನನಗೆ ಆ ವಾಹನ ಬೇಕೆಂದು ಕೋರಿದ್ದೆ. ಅದನ್ನು ಚೆನ್ನೈನಲ್ಲಿರುವ ನಮ್ಮ ಮ್ಯೂಸಿಯಂನಲ್ಲಿಡುವುದಾಗಿ ಹೇಳಿದ್ದೆ. ಕೋರಿಕೆಗೆ ನಿರ್ಮಾಪಕ ಧನುಶ್‌ ಸ್ಪಂದಿಸಿದ್ದಾರೆ. ಈಗ ನಮ್ಮ ಮಹೀಂದ್ರಾ ರೀಸರ್ಚ್‌ವ್ಯಾಲಿಯಲ್ಲಿ ಅದು ಸುರಕ್ಷಿತವಾಗಿದೆ,'' ಎಂದು ಆನಂದ್‌ ಮಹೀಂದ್ರಾ ಖುಷಿಯಿಂದ ಟ್ವೀಟ್‌ ಮಾಡಿದ್ದಾರೆ. ಕಂಪನಿಯ ಉದ್ಯೋಗಿಗಳು ಥಾರ್‌ ಜತೆ ಸ್ಟೈಲಾಗಿ ನಿಂತಿರುವುದನ್ನು ವಿಡಿಯೊ ಮಾಡಲಾಗಿದ್ದು, ಅದನ್ನೂ ಷೇರ್‌ ಮಾಡಿದ್ದಾರೆ. ಈ ಮ್ಯೂಸಿಯಂಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ