ಆ್ಯಪ್ನಗರ

ವಾಟ್ಸಾಪ್‌ ಫೇಕ್‌ ನ್ಯೂಸ್‌ ಪತ್ತೆಗೆ ಆ್ಯಪ್‌

ವಾಟ್ಸಾಪ್‌ನಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳು ಹೆಚ್ಚುತ್ತಿದ್ದು, ಅಹಿತಕರ ಘಟನೆಗಳಿಗೂ ಕಾರಣವಾಗಿದೆ.

Vijaya Karnataka 30 Jul 2018, 9:10 am
ಹೊಸದಿಲ್ಲಿ: ವಾಟ್ಸಾಪ್‌ನಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳು ಹೆಚ್ಚುತ್ತಿದ್ದು, ಅಹಿತಕರ ಘಟನೆಗಳಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳನ್ನು ಗುರ್ತಿಸುವಂಥ ಹೊಸ ಆ್ಯಪ್‌ ಅಭಿವೃದ್ಧಿ ಪಡಿಸಲು ದಿಲ್ಲಿಯ ಸ್ಥಳೀಯ ತಾಂತ್ರಿಕ ಸಂಸ್ಥೆಯ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ.
Vijaya Karnataka Web Whatsapp 1


ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫಾರ್ಮೆಷನ್‌ ಟೆಕ್ನಾಲಜಿ-ದಿಲ್ಲಿಯ(ಐಐಐಟಿ-ಡಿ) ಕಂಪ್ಯೂಟರ್‌ ಟೆಕ್ನಾಲಜಿ ವಿಭಾಗದ ಪ್ರೊಫೆಸರ್‌ ಪೊನ್ನುರಂಗಂ ಕುಮಾರಗುರು ನೇತೃತ್ವದಲ್ಲಿ ತಜ್ಞರ ತಂಡ ಆ್ಯಪ್‌ ಅಭಿವೃದ್ಧಿಗೆ ಮುಂದಾಗಿದೆ.

''ಮಹಾರಾಷ್ಟ್ರದಲ್ಲಿ ವಾಟ್ಸಾಪ್‌ನ ವದಂತಿಯಿಂದ ವ್ಯಕ್ತಿಯೊಬ್ಬ ಗುಂಪು ದಾಳಿಗೆ ಬಲಿಯಾದ ಘಟನೆಯೂ ನಡೆದಿದೆ. ಇಂಥದ್ದನ್ನು ತಪ್ಪಿಸಲು ನಮ್ಮ ಆ್ಯಪ್‌ ಸಹಾಯಕವಾಗಲಿದೆ. ಸುಳ್ಳು ಸಂದೇಶ ಮತ್ತು ಸುದ್ದಿಗಳನ್ನು ಡೇಟಾ ಬೇಸ್‌ನಿಂದ ವಿಶ್ಲೇಷಿಸಿ ಗುರ್ತಿಸುವ ಸಾಮರ್ಥ್ಯ‌ವನ್ನು ಆ್ಯಪ್‌ಗೆ ನೀಡಲಿದ್ದೇವೆ,'' ಎಂದು ಕುಮಾರಗುರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ