ಆ್ಯಪ್ನಗರ

ಚೀನಾದಿಂದ ಭಾರತಕ್ಕೆ ಐಫೋನ್‌ ಉತ್ಪಾದನೆ ಸ್ಥಳಾಂತರ ನಿರೀಕ್ಷೆ, ಚೆನ್ನೈನಲ್ಲಿ 7,500 ಕೋಟಿ ರೂ. ಹೂಡಿಕೆ

ಫಾಕ್ಸ್‌ಕಾನ್‌ ಚೆನ್ನೈ ಬಳಿಯ ಶ್ರೀಪೆರಂಬೂರ್‌ನಲ್ಲಿರುವ ಘಟಕದಲ್ಲಿ ಐಫೋನ್‌ ಎಕ್ಸ್‌ಆರ್‌ ಅನ್ನು ಉತ್ಪಾದಿಸುತ್ತಿದೆ. ಇದನ್ನೇ ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯಿಂದ ಸುಮಾರು 6,000 ಉದ್ಯೋಗ ಸೃಷ್ಟಿಯಾಗುವ ಸಂಭವ ಇದೆ.

Agencies 11 Jul 2020, 7:56 pm

ಹೊಸದಿಲ್ಲಿ: ಅಮೆರಿಕದ ಆ್ಯಪಲ್‌ ಕಂಪನಿಯ ಐಫೋನ್‌ಗಳನ್ನು ಉತ್ಪಾದಿಸುವ ಗುತ್ತಿಗೆದಾರ ಫಾಕ್ಸ್‌ಕಾನ್‌ ಸಂಸ್ಥೆಯು, ಚೆನ್ನೈನಲ್ಲಿರುವ ಘಟಕದಲ್ಲಿ7,500 ಕೋಟಿ ರೂ. (1 ಶತಕೋಟಿ ಡಾಲರ್‌) ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Vijaya Karnataka Web Apple


ತೈವಾನ್‌ ಮೂಲದ ಫಾಕ್ಸ್‌ಕಾನ್‌, ಚೀನಾ ಬದಲಿಗೆ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಒತ್ತಡ ಹೆಚ್ಚುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಫಾಕ್ಸ್‌ಕಾನ್‌ ಅಥವಾ ಆ್ಯಪಲ್‌ ವಿವರಣೆ ನೀಡಿಲ್ಲ. ಫಾಕ್ಸ್‌ಕಾನ್‌ ಚೆನ್ನೈ ಬಳಿಯ ಶ್ರೀಪೆರಂಬೂರ್‌ನಲ್ಲಿರುವ ಘಟಕದಲ್ಲಿ ಐಫೋನ್‌ ಎಕ್ಸ್‌ಆರ್‌ ಅನ್ನು ಉತ್ಪಾದಿಸುತ್ತಿದೆ. ಈ ಯೋಜನೆಯಿಂದ ಸುಮಾರು 6,000 ಉದ್ಯೋಗ ಸೃಷ್ಟಿಯಾಗುವ ಸಂಭವ ಇದೆ. ಫಾಕ್ಸ್‌ಕಾನ್‌ ಆಂಧ್ರಪ್ರದೇಶದಲ್ಲಿಯೂ ಘಟಕ ಹೊಂದಿದ್ದು, ಚೀನಾದ ಶಿಯೋಮಿ ಗ್ರೂಪ್‌ಗೆ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುತ್ತದೆ. ಕಳೆದ ತಿಂಗಳು ಫಾಕ್ಸ್‌ಕಾನ್‌ ಅಧ್ಯಕ್ಷ ಲಿಯು ಯಾಂಗ್‌, "ಭಾರತದಲ್ಲಿ ಹೂಡಿಕೆ ಹೆಚ್ಚಿಸಲಾಗುವುದು," ಎಂದಿದ್ದರು. ಆದರೆ ವಿವರ ನೀಡಿರಲಿಲ್ಲ.
ಬಾಯ್ಕಾಟ್‌ ಚೀನಾ: ಆ. 1 ರಿಂದ ಉತ್ಪನ್ನಗಳ ಮೂಲ ಪ್ರದರ್ಶನ ಕಡ್ಡಾಯ

ಆ್ಯಪಲ್‌ ಕಂಪನಿಯು ತೈವಾನ್‌ ಮೂಲದ ವಿಸ್ಟ್ರೋನ್‌ ಗ್ರೂಪ್‌ ಮೂಲಕ ಬೆಂಗಳೂರಿನಲ್ಲಿ ತನ್ನ ಕೆಲ ಸ್ಮಾರ್ಟ್‌ಫೋನ್‌ಗಳ ಜೋಡಣೆಯನ್ನು ನಿರ್ವಹಿಸುತ್ತಿದೆ. ದಕ್ಷಿಣ ಕೊರಿಯಾದ ಸ್ಯಾಮ್‌ ಸಂಗ್‌ ಕೂಡ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್‌ ಉತ್ಪಾದನೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಚೀನಾ-ಅಮೆರಿಕ ನಡುವೆ ನಡೆಯುತ್ತಿರುವ ವಾಣಿಜ್ಯ ಬಿಕ್ಕಟ್ಟಿನ ಪ್ರತಿಕೂಲ ಪರಿಣಾಮ ತಡೆಯಲು ಕಂಪನಿಯು ಭಾರತದಲ್ಲಿ ಉತ್ಪಾದನೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ