ಆ್ಯಪ್ನಗರ

ಗುರುವಾರ ಮೋದಿ ಗೆದ್ದರೆ, ಫೈನಾನ್ಸ್‌ ಮಿನಿಸ್ಟರ್‌ ಯಾರು?

ಗುರುವಾರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಮುಂದಿನ ಅವಧಿಗೆ ನರೇಂದ್ರ ಮೋದಿ ಸರಕಾರವೇ ಮುಂದುವರಿದರೆ ವಿತ್ತ ಸಚಿವರು ಯಾರು ಎನ್ನುವ ...

THE ECONOMIC TIMES 22 May 2019, 1:20 pm
ಹೊಸದಿಲ್ಲಿ: ಗುರುವಾರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಮುಂದಿನ ಅವಧಿಗೆ ನರೇಂದ್ರ ಮೋದಿ ಸರಕಾರವೇ ಮುಂದುವರಿದರೆ ವಿತ್ತ ಸಚಿವರು ಯಾರು ಎನ್ನುವ ಚರ್ಚೆಗಳು ಆರಂಭವಾಗಿವೆ.
Vijaya Karnataka Web finacce


ಏರುತ್ತಿರುವ ಕಚ್ಚಾ ತೈಲ, ಮಂದಗತಿಯ ಆರ್ಥಿಕತೆ, ನಿರುದ್ಯೋಗದಂಥ ಸವಾಲುಗಳನ್ನು ನಿಭಾಯಿಸಲು ಸಮರ್ಥ ಹಣಕಾಸು ಸಚಿವರು ಅಗತ್ಯ. ಹಾಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಮ್ಮ ಖಾತೆ ಉಳಿಸಿಕೊಳ್ಳಲು ಮುಂದಾಗಬಹುದು. ಆದರೆ, 66 ವರ್ಷದ ಜೇಟ್ಲಿ ಅವರಿಗೆ ಆರೋಗ್ಯ ಸಹಕರಿಸದೇ ಹೋದರೆ ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಅವರು ಹಣಕಾಸು ಖಾತೆಯನ್ನು ಪಡೆಯಬಹುದು.

2014ರಲ್ಲಿ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗಿ, ದೇಶದ ಆರ್ಥಿಕತೆಗೆ ಚೈತನ್ಯ ದೊರೆಯಿತು. ಈಗ ಮತ್ತೆ ಕಚ್ಚಾ ತೈಲದ ದರ ಏರಿಕೆಯ ಆತಂಕ ಎದುರಾಗಿದೆ. 2018ರ ಅಂತ್ಯದಲ್ಲಿ ಶೇ.6.6ರ ಜಿಡಿಪಿ ದಾಖಲಾಗಿದ್ದು, ಇದು ಕಳೆದ 5 ತ್ರೈಮಾಸಿಕದಲ್ಲಿನ ಕಡಿಮೆ ಮಟ್ಟವಾಗಿದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ.

''ಹಣಕಾಸು ಸಚಿವರು ಯಾರೇ ಆಗಲಿ, ಆರ್ಥಿಕತೆಗೆ ಸಂಬಂಧಿಸಿದ ಮಹತ್ವದ ತೀರ್ಮಾನಗಳನ್ನು ಪ್ರಧಾನಿ ಕಚೇರಿಯೇ ತೆಗೆದುಕೊಳ್ಳುತ್ತದೆ,'' ಎಂದು ಕೇರ್‌ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್‌ ಸಬ್‌ನವಿಸ್‌ ಹೇಳಿದ್ದಾರೆ.

=====

ಅರುಣ್‌ ಜೇಟ್ಲಿ, 66 ವರ್ಷ
ಹಾಲಿ ಹಣಕಾಸು ಸಚಿವರಾದ ಜೇಟ್ಲಿ, ಮೋದಿ ಸಂಪುಟದ ಪ್ರಮುಖ ನಾಯಕ
ಮೋದಿ ಟೀಮ್‌ನಲ್ಲಿರುವ ಟ್ರಬಲ್‌ಶೂಟರ್‌
ಕಳೆದ 5 ವರ್ಷಗಳಲ್ಲಿ ನೋಟು ಅಮಾನ್ಯತೆ, ಜಿಎಸ್‌ಟಿ, ದಿವಾಳಿ ಕಾನೂನು ಸೇರಿದಂತೆ ಮಹತ್ವದ ಸುಧಾರಣೆ ಜಾರಿ.
ಅನಾರೋಗ್ಯದ ಕಾರಣ ಅಮೆರಿಕದ ಆಸ್ಪತ್ರೆ ಸೇರಿದ ಕಾರಣ, ಮಧ್ಯಂತರ ಬಜೆಟ್‌ ಮಂಡಿಸಲು ಸಾಧ್ಯವಾಗಲಿಲ್ಲ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದು, ಕಳೆದ ವರ್ಷ ಕಿಡ್ನಿಯ ಟ್ರಾನ್ಸ್‌ಪ್ಲಾಂಟ್‌ ಆಗಿತ್ತು.

ಪಿಯೂಶ್‌ ಗೋಯಲ್‌, 54 ವರ್ಷ
ಸದ್ಯದ ರೈಲ್ವೆ ಸಚಿವ. ಜೇಟ್ಲಿ ಅನುಪಸ್ಥಿತಿಯಲ್ಲಿ ಎರಡು ಸಲ ಹಣಕಾಸು ಖಾತೆ ನಿಭಾಯಿಸಿದವರು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಗೋಯಲ್‌, ತಮ್ಮ ಚಾರ್ಟರ್ಡ್‌ ಅಕೌಂಟೆಂಟ್‌ ವೃತ್ತಿಯ ತಂತ್ರಗಳನ್ನು ಮಧ್ಯಂತರ ಬಜೆಟ್‌ನಲ್ಲಿ ತೋರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ