ಆ್ಯಪ್ನಗರ

ಮೊದಲ ಬಾರಿಗೆ 600 ಬಿಲಿಯನ್‌ ಡಾಲರ್‌ ದಾಟಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ಮೇ 28 ರಂದು 598.165 ಬಿಲಿಯನ್‌ ಡಾಲರ್‌ ತಲುಪಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹ, ಜೂನ್‌ 4ರ ವೇಳೆಗೆ 600 ಬಿಲಿಯನ್‌ ಡಾಲರ್‌ ದಾಟಿದ್ದು 605.008 ಡಾಲರ್‌ಗೆ (44.31 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.

Vijaya Karnataka Web 12 Jun 2021, 5:27 pm

ಹೈಲೈಟ್ಸ್‌:

  • ಮೇ 28 ರಂದು 598.165 ಬಿಲಿಯನ್‌ ಡಾಲರ್‌ ತಲುಪಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹ
  • ಜೂನ್‌ 4ರ ವೇಳೆಗೆ 600 ಬಿಲಿಯನ್‌ ಡಾಲರ್‌ ದಾಟಿದ್ದ ಸಂಗ್ರಹ
  • ಸದ್ಯ ಭಾರತದ ವಿದೇಶಿ ವಿನಿಮಯ ಸಂಗ್ರಹ 605.008 ಡಾಲರ್‌ಗೆ (44.31 ಲಕ್ಷ ಕೋಟಿ ರೂ.) ಏರಿಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Forex 1
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ದೇಶದ ವಿದೇಶಿ ವಿನಿಮಯ ಸಂಗ್ರಹ 600 ಬಿಲಿಯನ್‌ ಡಾಲರ್‌ ದಾಟಿದೆ. 6.842 ಡಾಲರ್‌ ವಿದೇಶಿ ವಿನಿಮಯ ಸಂಗ್ರಹದ ಏರಿಕೆಯೊಂದಿಗೆ, ಜೂನ್‌ 4 ರಂದು ಭಾರತ ಈ ಸಾಧನೆ ಮಾಡಿದೆ ಎಂದು ಆರ್‌ಬಿಐ ತಿಳಿಸಿದೆ.
ಕಳೆದ ವಾರದ ಭಾರತದ ವಿದೇಶಿ ವಿನಿಮಯ ಸಂಗ್ರಹ ದಾಖಲೆಯ 605.008 ಡಾಲರ್‌ (44.31 ಲಕ್ಷ ಕೋಟಿ ರೂ.) ತಲುಪಿತ್ತು. ವಿದೇಶಿ ಕರೆನ್ಸಿ ಅಸೆಟ್‌ (ಎಫ್‌ಸಿಎ)ನಲ್ಲಿನ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರ್‌ಬಿಐ ವರದಿಯಿಂದ ತಿಳಿದು ಬಂದಿದೆ.

ಈ ಹಿಂದೆ ಮೇ 28 ರಂದೇ ಭಾರತದ ವಿದೇಶಿ ವಿನಿಮಯ ಸಂಗ್ರಹ 598.165 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿತ್ತು. ಈ ಮೂಲಕ 600 ಡಾಲರ್‌ ಅಂಚಿಗೆ ಬಂದು ತಲುಪಿತ್ತು. ಇದೀಗ 600 ಬಿಲಿಯನ್‌ ಡಾಲರ್‌ ದಾಟಿ ಮುನ್ನುಗ್ಗುತ್ತಿದೆ.

600 ಬಿಲಿಯನ್‌ ಡಾಲರ್‌ ತಲುಪಿದ ವಿದೇಶಿ ವಿನಿಮಯ ಸಂಗ್ರಹ, ರಷ್ಯಾ ಮೀರಿಸುವ ಹಾದಿಯಲ್ಲಿ ಭಾರತ
ಆದರೆ ಇದೇ ಅವಧಿಯಲ್ಲಿ ಚಿನ್ನದ ಸಂಗ್ರಹ 502 ಮಿಲಿಯನ್‌ ಡಾಲರ್‌ನಷ್ಟು ಇಳಿಕೆಯಾಗಿದ್ದು 37.604 ಬಿಲಯನ್‌ ಡಾಲರ್‌ಗೆ ಇಳಿದಿದೆ. ಅಂತಾರಾಷ್ಟ್ರೀಯ ಹಣಲಾಸು ನಿಧಿಯಲ್ಲಿರುವ ಸ್ಪೆಷಲ್‌ ಡ್ರಾವಿಂಗ್‌ ರೈಟ್ಸ್‌ (ಎಸ್‌ಡಿಆರ್‌) 1 ಮಿಲಿಯನ್‌ ಡಾಲರ್‌ ಕುಸಿದಿದ್ದು 1.513 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ