ಆ್ಯಪ್ನಗರ

3ನೇ ಉತ್ಪಾದನಾ ಘಟಕ ಸ್ಥಾಪನೆಗೆ ಏಥರ್‌ ಪ್ಲ್ಯಾನ್‌, ಕರ್ನಾಟಕ ಪಾಲಾಗುವುದೇ ಬೃಹತ್‌ ಪ್ಲ್ಯಾಂಟ್‌?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಏಥರ್‌ ಎನರ್ಜಿ ಮತ್ತೊಂದು ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, ಈ ಸಂಬಂಧ ಕರ್ನಾಟಕವೂ ಸೇರಿ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ.

THE ECONOMIC TIMES 15 Jun 2022, 5:13 pm
ಹೀರೋ ಮೋಟೋಕಾರ್ಪ್ ಬೆಂಬಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಏಥರ್‌ ಎನರ್ಜಿ ದೇಶದಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿದ್ದು, ಈ ಸಂಬಂಧ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
Vijaya Karnataka Web Ather Energy


ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಕಂಪನಿಯು ಮಾತುಕತೆ ನಡೆಸುತ್ತಿದ್ದು, ವಾರ್ಷಿಕ ಸುಮಾರು 15 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.

ಕಂಪನಿಯು ಮಾತುಕತೆಯ ಕೊನೆಯ ಹಂತದಲ್ಲಿದೆ ಮತ್ತು ಮುಂದಿನ ತಿಂಗಳೊಳಗೆ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸಂಪರ್ಕಿಸಿದಾಗ ಕಂಪನಿಯ ವಕ್ತಾರರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಎಲೆಕ್ಟ್ರಿಕ್‌ ಕಾರು ನಿರ್ಮಾಣಕ್ಕೆ ಓಲಾ ಪ್ಲ್ಯಾನ್‌, ಕರ್ನಾಟಕ ಪಾಲಾಗುವುದೇ ₹10,000 ಕೋಟಿ ಹೂಡಿಕೆ?
ಮೂಲಗಳ ಪ್ರಕಾರ ಕಂಪನಿಯು ದೇಶದಲ್ಲಿ ತನ್ನ ಮೂರನೇ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಸುಮಾರು 100 ಎಕರೆ ಭೂಮಿಗೆ ಹುಡುಕಾಡುತ್ತಿದೆ. ಸದ್ಯಕ್ಕೆ ಏಥರ್ ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕ ಹೊಂದಿದ್ದು, ವಾರ್ಷಿಕ 1.2 ಲಕ್ಷ ಯೂನಿಟ್ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಹೊಸೂರಿನಲ್ಲಿ ಮತ್ತೊಂದು ಘಟಕ ಸ್ಥಾಪನೆಯೊಂದಿಗೆ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ ನಾಲ್ಕು ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಗಳಿವೆ.

ಕಳೆದ ತಿಂಗಳು, ಏಥರ್ ಎನರ್ಜಿ ಹೆಚ್ಚುವರಿ ಹೂಡಿಕೆದಾರರ ಜೊತೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಲಿ. (ಎನ್‌ಐಐಎಫ್‌ಎಲ್‌), ಸ್ಟ್ರಾಟೆಜಿಕ್ ಆಪರ್ಚುನಿಟೀಸ್ ಫಂಡ್ (ಎಸ್‌ಒಎಫ್‌) ಮತ್ತು ಹೀರೋ ಮೋಟೋಕಾರ್ಪ್‌ನಿಂದ 128 ಮಿಲಿಯನ್ ಡಾಲರ್‌ (ಸುಮಾರು 991 ಕೋಟಿ ರೂ.) ಸಂಗ್ರಹಿಸಿದೆ.

ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಿಸಲು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು, ಮೂಲಸೌಕರ್ಯವನ್ನು ಸ್ಥಾಪಿಸಲು ಮತ್ತು ತನ್ನ ಚಿಲ್ಲರೆ ಮಾರಾಟ ಜಾಲವನ್ನು ಬೆಳೆಸಲು ಕಂಪನಿಯು ಈ ಹಣವನ್ನು ಬಳಸಿಕೊಳ್ಳಲಿದೆ.

ಹೀರೋ ಮೋಟೋಕಾರ್ಪ್‌ ಏಥರ್ ಎನರ್ಜಿಯ ಆರಂಭಿಕ ಹೂಡಿಕೆದಾರ ಸಂಸ್ಥೆಯಾಗಿದ್ದು, 2016 ರಿಂದ ಅದರ ಬೆಳವಣಿಗೆಯ ಭಾಗವಾಗಿದೆ. ಕಂಪನಿಯು ಪ್ರಸ್ತುತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಲ್ಲಿ ಸುಮಾರು ಶೇ. 35ರಷ್ಟು ಪಾಲನ್ನು ಹೊಂದಿದೆ.

ಏಥರ್ ಮೇ ತಿಂಗಳಲ್ಲಿ 3,807 ವಾಹನಗಳನ್ನು ಮಾರಾಟ ಮಾಡುವ ಮೂಲಕ, ಮಾಸಿಕ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯು ಪ್ರಸ್ತುತ 32 ನಗರಗಳಲ್ಲಿ 38 ಎಕ್ಸ್‌ಪೀರಿಯೆನ್ಸ್‌ ಸೆಂಟರ್‌ಗಳನ್ನು ಹೊಂದಿದೆ. 2023ರ ವೇಳೆಗೆ 100 ನಗರಗಳಲ್ಲಿ ಇಂತಹ 150 ಕೇಂದ್ರಗಳನ್ನು ಹೊಂದುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ