ಆ್ಯಪ್ನಗರ

ಆಗಸ್ಟ್‌ನಲ್ಲೂ ವಾಹನ ಮಾರಾಟ ತೀವ್ರ ಕುಸಿತ

ಆಟೊಮೊಬೈಲ್‌ ವಲಯದ ವಹಿವಾಟು ಕಳೆದ ಆಗಸ್ಟ್‌ನಲ್ಲಿ ಮತ್ತೊಮ್ಮೆ ಆಘಾತಕ್ಕೀಡಾಗಿದ್ದು ಕಳೆದ 21 ವರ್ಷದಲ್ಲೇ ಕನಿಷ್ಠ ವ್ಯಾಪಾರಕ್ಕೆ ಕುಸಿದಿದೆ. ಪ್ರಯಾಣಿಕರ ವಾಹನ, ದ್ವಿಚಕ್ರ ವಾಹನ ವಿಭಾಗದಲ್ಲೂ ವಹಿವಾಟು ಮಂದಗತಿಗೆ ತಿರುಗಿದೆ ಎಂದು ವಾಣಿಜ್ಯ ಮಂಡಳಿ ಸಿಯಾಮ್‌ ಸೋಮವಾರ ತಿಳಿಸಿದೆ.

THE ECONOMIC TIMES 10 Sep 2019, 5:00 am
ಹೊಸದಿಲ್ಲಿ : ಆಟೊಮೊಬೈಲ್‌ ವಲಯದ ವಹಿವಾಟು ಕಳೆದ ಆಗಸ್ಟ್‌ನಲ್ಲಿ ಮತ್ತೊಮ್ಮೆ ಆಘಾತಕ್ಕೀಡಾಗಿದ್ದು ಕಳೆದ 21 ವರ್ಷದಲ್ಲೇ ಕನಿಷ್ಠ ವ್ಯಾಪಾರಕ್ಕೆ ಕುಸಿದಿದೆ. ಪ್ರಯಾಣಿಕರ ವಾಹನ, ದ್ವಿಚಕ್ರ ವಾಹನ ವಿಭಾಗದಲ್ಲೂ ವಹಿವಾಟು ಮಂದಗತಿಗೆ ತಿರುಗಿದೆ ಎಂದು ವಾಣಿಜ್ಯ ಮಂಡಳಿ ಸಿಯಾಮ್‌ ಸೋಮವಾರ ತಿಳಿಸಿದೆ.
Vijaya Karnataka Web automobile sales decline in august
ಆಗಸ್ಟ್‌ನಲ್ಲೂ ವಾಹನ ಮಾರಾಟ ತೀವ್ರ ಕುಸಿತ


ಸಿಯಾಮ್‌ ಪ್ರಕಾರ 2018ರ ಆಗಸ್ಟ್‌ ನಲ್ಲಿ 18,21,490 ವಾಹನಗಳು ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 23,82,436 ವಾಹನ ಮಾರಾಟವಾಗಿತ್ತು. ಅಂದರೆ ಶೇ.23.55ರಷ್ಟು ಇಳಿಕೆ ಆಗಿದೆ.

ಸಿಯಾಮ್‌ 1997-98ರಿಂದ ಆಟೊಮೊಬೈಲ್‌ ವಲಯದ ಮಾರಾಟದ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. 2019ರ ಜುಲೈನಲ್ಲಿ 18,25,148 ವಾಹನಗಳು ಮಾರಾಟವಾಗಿತ್ತು. 2018ರ ಜುಲೈನಲ್ಲಿ 22,45,223 ವಾಹನಗಳು ಬಿಕರಿಯಾಗಿತ್ತು.

ಮಾರುತಿ ಸುಜುಕಿ ಆಗಸ್ಟ್‌ನಲ್ಲಿ 93,173 ಕಾರುಗಳನ್ನು ಮಾರಾಟ ಮಾಡಿದೆ. ಶೇ.36ರಷ್ಟು ಇಳಿಕೆ ದಾಖಲಿಸಿದೆ. ಹುಂಡೈ ಮೋಟಾರ್‌ 38,205 ಕಾರುಗಳನ್ನು ಮಾರಿದ್ದು, 16 ಪರ್ಸೆಂಟ್‌ ಇಳಿದಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ 13,504 ಕಾರುಗಳನ್ನು ಮಾರಾಟ ಮಾಡಿದ್ದು, 31 ಪಸೆಂರ್‍ಟ್‌ ತಗ್ಗಿದೆ.

ಕಾರು-ದ್ವಿಚಕ್ರ ವಾಹನ ಮಾರಾಟ

ಆಗಸ್ಟ್‌ನಲ್ಲಿ 1,15,957 ಕಾರುಗಳು ಮಾರಾಟವಾಗಿದ್ದು, 2018ರ ಆಗಸ್ಟ್‌ನಲ್ಲಿ 1,96,847 ಮಾರಾಟವಾಗಿತ್ತು. ಶೇ.41ರಷ್ಟು ಇಳಿಕೆಯಾಗಿದೆ. ಒಟ್ಟು ದ್ವಿಚಕ್ರ ವಾಹನ ಮಾರಾಟ ಶೇ.22 ತಗ್ಗಿದ್ದು, 19,47,304ರಿಂದ 15,14,196ಕ್ಕೆ ತಗ್ಗಿದೆ. ಹೀರೊಮೊಟೊಕಾರ್ಪ್‌ 5,24,003 ದ್ವಿಚಕ್ರವಾಹನಗಳನ್ನು ಮಾರಿದ್ದು, ಶೇ.20 ಇಳಿಕೆ ದಾಖಲಿಸಿದೆ. ಹೋಂಡಾ ಮೋಟಾರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ 425664 ವಾಹನಗಳನ್ನು ಮಾರಾಟ ಮಾಡಿದೆ. ಚೆನ್ನೈ ಮೂಲದ ಟಿವಿಎಸ್‌ ಮೋಟಾರ್‌ 2,19,528 ವಾಹನಗಳ್ನು ವಿಕ್ರಯಿಸಿದೆ.

ಜಿಎಸ್‌ಟಿ ಕಡಿತಕ್ಕೆ ಮನವಿ

ಆಟೊಮೊಬೈಲ್‌ ವ್ಯಾಪಾರ ಮಂದಗತಿಯಲ್ಲಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಬೇಕು ಎಂದು ಆಟೊಮೊಬೈಲ್‌ ಮತ್ತು ಅದರ ಬಿಡಿಭಾಗಗಳ ಉತ್ಪಾದಕರು ಒತ್ತಾಯಿಸಿದ್ದಾರೆ. ಗೋವಾದಲ್ಲಿ ಸೆಪ್ಟೆಂಬರ್‌ 20ರಂದು ಜಿಎಸ್‌ಟಿಯ ಮಂಡಳಿ ಸಭೆ ಸೇರಲಿದ್ದು, ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ