ಆ್ಯಪ್ನಗರ

Ayushman Bharat: ಆಯುಷ್ಮಾನ್‌ ಭಾರತ್‌ ಫಲಾನುಭವಿಗಳಿಗಾಗಿ ವೆಬ್‌ಸೈಟ್‌

ದೇಶದ ಜನರಿಗೆ ಆರೋಗ್ಯ ರಕ್ಷೆ ನೀಡುವ 'ಆಯುಷ್ಮಾನ್‌ ಭಾರತ್‌' ಯೋಜನೆಯ ಫಲಾನುಭವಿಗಳಿಗಾಗಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ರೂಪಿಸಲಾಗಿದೆ.

Vijaya Karnataka 18 Sep 2018, 6:45 pm
ಹೊಸದಿಲ್ಲಿ: ದೇಶದ ಜನರಿಗೆ ಆರೋಗ್ಯ ರಕ್ಷೆ ನೀಡುವ 'ಆಯುಷ್ಮಾನ್‌ ಭಾರತ್‌' ಯೋಜನೆಯ ಫಲಾನುಭವಿಗಳಿಗಾಗಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ರೂಪಿಸಲಾಗಿದೆ.
Vijaya Karnataka Web health-insurance


ಆಯುಷ್ಮಾನ್‌ ಭಾರತ್‌ ಆರೋಗ್ಯ ರಕ್ಷೆ ಮಿಷನ್‌(ಎಬಿ-ಎನ್‌ಎಚ್‌ಪಿಎಂ) ಅನ್ನು ಜಾರಿಗೊಳಿಸುವ ನ್ಯಾಷನಲ್‌ ಹೆಲ್ಟ್‌ ಏಜೆನ್ಸಿ(ಎನ್‌ಎಚ್‌ಎ) ಹೊಸ ವೆಬ್‌ಸೈಟ್‌ಗೆ ಚಾಲನೆ ನೀಡಿದೆ. ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿದೆಯೇ ಇಲ್ಲವೇ ಅಥವಾ ಇತರೆ ಸಂದೇಹಗಳ ಬಗ್ಗೆ ವೆಬ್‌ಸೈಟ್‌ ಮತ್ತು ಸಹಾಯವಾಣಿಯಿಂದ ಫಲಾನುಭವಿಗಳು ಉತ್ತರ ಪಡೆಯಬಹುದಾಗಿದೆ.

ಕುಟುಂಬಕ್ಕೆ 5 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು(ಪಿಎಂಜೆಎವೈ) 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಅನ್ವಯವಾಗಲಿದೆ.

https://mera.pmjay.gov.in ಅಥವಾ ಸಹಾಯವಾಣಿಗೆ(14555) ಕರೆ ಮಾಡಿ ತಮ್ಮ ಹೆಸರು ನೋಂದಣಿಯಾಗಿದೆಯೇ ಇಲ್ಲವೇ ಅನ್ನುವುದನ್ನು ಫಲಾನುಭವಿಗಳು ತಿಳಿಯಬಹುದಾಗಿದೆ. ಪಿಎಂಜೆಎವೈಗೆ ನೋಂದಣಿ ಮಾಡಿಕೊಡುವುದಾಗಿ ಭರವಸೆ ನೀಡುವ ಹಲವು ನಕಲಿ ವೆಬ್‌ಸೈಟ್‌ಗಳನ್ನು ನಿಯಂತ್ರಿಸಲು ಅಧಿಕೃತ ವೆಬ್‌ಸೈಟ್‌ ಅನ್ನು ಸರಕಾರ ರೂಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ