ಆ್ಯಪ್ನಗರ

ನಷ್ಟದಿಂದ ಲಾಭದತ್ತ ಹೊರಳುತ್ತಿರುವ ಪಿಎನ್‌ಬಿ: ಸುನಿಲ್ ಮೆಹ್ತಾ

ಬಹುಸಾವಿರ ಕೋಟಿ ರೂ. ಸಾಲವಂಚನೆ ಪ್ರಕರಣಕ್ಕೆ ಸಿಲುಕಿದ ಬಳಿಕ ಬ್ಯಾಂಕನ್ನು ನಷ್ಟದಿಂದ ಪಾರುಪಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ 2018-19ನೇ ಸಾಲಿನಲ್ಲಿ ಬ್ಯಾಂಕ್ ಲಾಭಗಳಿಸುವ ನಿರೀಕ್ಷೆಯಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

Vijaya Karnataka Web 2 Oct 2018, 4:12 pm
ತಿರುವನಂತಪುರಂ: ನೀರವ್ ಮೋದಿ 14,000 ಕೋಟಿ ರೂ. ವಂಚನೆ ಪ್ರಕರಣದ ಬಳಿಕ ಪಂಜಾಬ್ ನ್ಯಾಶನಲ್ ಬ್ಯಾಂಕ್ ಸುಧಾರಿಸಿಕೊಳ್ಳುತ್ತಿದ್ದು, ಲಾಭದತ್ತ ಹೊರಳುತ್ತಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಸುನಿಲ್ ಮೆಹ್ತಾ ಹೇಳಿದ್ದಾರೆ.
Vijaya Karnataka Web Sunil mehta


ಬಹುಸಾವಿರ ಕೋಟಿ ರೂ. ಸಾಲವಂಚನೆ ಪ್ರಕರಣಕ್ಕೆ ಸಿಲುಕಿದ ಬಳಿಕ ಬ್ಯಾಂಕನ್ನು ನಷ್ಟದಿಂದ ಪಾರುಪಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ 2018-19ನೇ ಸಾಲಿನಲ್ಲಿ ಬ್ಯಾಂಕ್ ಲಾಭಗಳಿಸುವ ನಿರೀಕ್ಷೆಯಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

2018-19ನೇ ಹಣಕಾಸು ವರ್ಷದ ಜೂನ್ ಕ್ವಾರ್ಟರ್‌ನಲ್ಲಿ ಬ್ಯಾಂಕ್ 940 ಕೋಟಿ ರೂ. ನಷ್ಟದ ವರದಿ ಮಾಡಿದೆ. ನೀರವ್ ಮೋದಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ವಿವಿಧ ಪ್ರಕ್ರಿಯೆ ಕೈಗೊಂಡು ನೀರವ್ ಮೋದಿಗೆ ಸಂಬಂಧಿಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 5 ಕೋಟಿ ರೂ. ದೇಣಿಗೆ ನೀಡಿದ ಬಳಿಕ ಮಾತನಾಡಿದ ಸುನಿಲ್ ಮೆಹ್ತಾ, ಬ್ಯಾಂಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ನಷ್ಟದ ಹೊರತಾಗಿಯೂ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ. ಕೇಂದ್ರದಿಂದ 5,431 ಕೋಟಿ ರೂ. ನೆರವನ್ನು ಬ್ಯಾಂಕ್ ಮಂಡಳಿ ಕೋರಿದ್ದು, ಅದರಿಂದ ಪ್ರಯೋಜನವಾಗಲಿದೆ ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ