ಆ್ಯಪ್ನಗರ

ನವೆಂಬರ್‌ನಲ್ಲಿ ಬ್ಯಾಂಕ್‌ ನೌಕರರಿಗೆ 17 ದಿನ ರಜೆ! ಆರ್‌ಬಿಐ ಪಟ್ಟಿ ಇಲ್ಲಿದೆ

ನವೆಂಬರ್‌ನಲ್ಲಿ ಸಾರ್ವಜನಿಕ ಬ್ಯಾಂಕ್​ ಮತ್ತು ಖಾಸಗಿ ಬ್ಯಾಂಕುಗಳಿಗೆ ಅರ್ಧ ತಿಂಗಳಿಗೂ ಹೆಚ್ಚು ಕಾಲ ರಜೆ ದೊರೆಯಲಿದೆ. ದೀಪಾವಳಿ ಹಬ್ಬ ಸೇರಿದಂತೆ ಸಾಲುಸಾಲು ರಜೆಗಳಿದ್ದು, ಈ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ ಬರೋಬ್ಬರಿ 17 ದಿನಗಳ ರಜೆ ದೊರೆಯಲಿದೆ.

Vijaya Karnataka Web 26 Oct 2021, 4:45 pm
ಹೊಸದಿಲ್ಲಿ: ನವೆಂಬರ್‌ನಲ್ಲಿ ಸಾರ್ವಜನಿಕ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕುಗಳಿಗೆ ಅರ್ಧ ತಿಂಗಳಿಗೂ ಹೆಚ್ಚು ಕಾಲ ರಜೆ ದೊರೆಯಲಿದೆ. ದೀಪಾವಳಿ ಹಬ್ಬ ಸೇರಿದಂತೆ ಸಾಲುಸಾಲು ರಜೆಗಳಿದ್ದು, ಈ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ ಬರೋಬ್ಬರಿ 17 ದಿನಗಳ ರಜೆ ದೊರೆಯಲಿದೆ. ಹೀಗಾಗಿ ಬ್ಯಾಂಕ್‌ ವ್ಯವಹಾರಗಳಿದ್ದರೆ ರಜಾ ದಿನಗಳನ್ನು ನೋಡಿಕೊಂಡು ಬ್ಯಾಂಕಿಗೆ ತೆರಳಿ.
Vijaya Karnataka Web bank holidays


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಪಟ್ಟಿಯ ಪ್ರಕಾರ ನವೆಂಬರ್‌ನಲ್ಲಿ 11 ದಿನಗಳು ರಜೆಗಳಿವೆ. ಉಳಿದಂತೆ ವಾರಾಂತ್ಯದ ರಜೆಗಳು ಸೇರಿದರೆ ಒಟ್ಟು 17 ದಿನಗಳ ದಿನಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಆರ್‌ಬಿಐನ ರಜಾದಿನಗಳ ಪಟ್ಟಿಯಲ್ಲಿ ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳ ವರ್ಗಕ್ಕೆ ಬರುತ್ತದೆ. ಆದರೂ ಅಧಿಕೃತ ವರ್ಗೀಕರಣಗಳನ್ನು ಪರಿಗಣಿಸಬೇಕಾದರೆ, ರಜಾದಿನಗಳ ಪಟ್ಟಿಯನ್ನು ಸಾಮಾನ್ಯವಾಗಿ ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು’, ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು’ ಮತ್ತು ‘ಬ್ಯಾಂಕುಗಳ’ ಖಾತೆಗಳ ಕ್ಲೋಸಿಂಗ್ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಮಾಡಲಾಗುತ್ತದೆ.

ಬ್ಯಾಂಕ್‌ ಉದ್ಯೋಗಿಗಳಿಗೆ ವಾರ್ಷಿಕ 10 ದಿನಗಳ ಸರ್ಪ್ರೈಸ್‌ ರಜೆಯ ಗಿಫ್ಟ್‌ ನೀಡಿದ ಆರ್‌ಬಿಐ

ರಜಾ ದಿನಗಳು ಆಯಾ ರಾಜ್ಯಕ್ಕೆ ಮಾತ್ರ ಅನ್ವಯ
ಕೆಲವು ರಜಾ ದಿನಗಳು ಆಯಾ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತವೆ. ಎಲ್ಲ ಕಡೆಗೂ ಅದು ಅನ್ವಯ ಆಗುವುದಿಲ್ಲ. ಉದಾಹರಣೆಗೆ ಕನ್ನಡ ರಾಜ್ಯೋತ್ಸವ. ನವೆಂಬರ್ 1ನೇ ತಾರೀಕಿನಂದು ಕರ್ನಾಟಕದಲ್ಲಿ ಮಾತ್ರ ಬ್ಯಾಂಕ್ಗಳಿಗೆ ರಜಾ ದಿನ. ದೇಶದ ಉಳಿದ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮಾಮೂಲಿನಂತೆ ಲಭ್ಯ ಇರುತ್ತವೆ. ಹೀಗೆ ಕೆಲವು ರಜೆಗಳು ಆಯಾ ರಾಜ್ಯಗಳಿಗೆ ಮಾತ್ರವೇ ಅನ್ವಯ ಆಗುತ್ತವೆ.

ನವೆಂಬರ್ ತಿಂಗಳಲ್ಲಿ ರಜಾ ದಿನಗಳ ಪಟ್ಟಿ ಇಲ್ಲಿದೆ:
ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುಟ್ – ಬೆಂಗಳೂರು, ಇಂಫಾಲ್
ನವೆಂಬರ್ 3: ನರಕ ಚತುರ್ದಶಿ – ಬೆಂಗಳೂರು
ನವೆಂಬರ್ 4: ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜೆ -ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ , ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂ
ನವೆಂಬರ್ 5: ದೀಪಾವಳಿ (ಬಲಿ ಪಾಡ್ಯಮಿ)/ವಿಕ್ರಮ್ ಸಂವಂತ್ ಹೊಸ ವರ್ಷದ ದಿನ/ಗೋವರ್ಧನ ಪೂಜೆ – ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ, ಕಾನ್ಪುರ್, ಲಖನೌ, ಮುಂಬೈ, ನಾಗ್ಪುರ.
ನವೆಂಬರ್ 6: ಭಾಯಿ ದುಜ್/ಚಿತ್ರಗುಪ್ತ್ ಜಯಂತಿ/ಲಕ್ಷ್ಮಿ ಪೂಜೆ/ದೀಪಾವಳಿ/ನಿಂಗೋಲ್ ಚಕ್ಕೌಬಾ – ಗ್ಯಾಂಗ್ಟಕ್, ಇಂಫಾಲ್, ಕಾನ್ಪುರ್, ಲಖನೌ, ಶಿಮ್ಲಾ.
ನವೆಂಬರ್ 10: ಛತ್ ಪೂಜೆ/ಸೂರ್ಯ ಪಷ್ಟಿ ದಲಾ ಛಾತ್ (ಸಯನ್ ಅರ್ಧ್ಯ) – ಪಾಟ್ನಾ, ರಾಂಚಿ
ನವೆಂಬರ್ 11: ಛತ್ ಪೂಜೆ – ಪಾಟ್ನಾ
ನವೆಂಬರ್ 12: ವಂಗಲಾ ಉತ್ಸವ – ಶಿಲ್ಲಾಂಗ್
ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತೀಕ ಪೂರ್ಣಿಮಾ – ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ, ರಾಂಚಿ, ಶಿಮ್ಲಾ ಮತ್ತು ಶ್ರೀನಗರ
ನವೆಂಬರ್ 22: ಕನಕದಾಸ ಜಯಂತಿ – ಬೆಂಗಳೂರು
ನವೆಂಬರ್ 23: ಸೆಂಗ್ ಕುಟ್ಸೆನೆಮ್ – ಶಿಲ್ಲಾಂಗ್

ಗಮನಿಸಿ, ಕರ್ನಾಟಕದಲ್ಲಿ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ 7 ದಿನ ರಜೆ

ವಿವಿಧ ರಾಜ್ಯವಾರು ರಜಾದಿನಗಳ ಹೊರತಾಗಿ ವಾರಾಂತ್ಯದ ಕೆಲವು ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಇವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ
ನವೆಂಬರ್ 7: ಭಾನುವಾರ
ನವೆಂಬರ್ 13: ತಿಂಗಳ ಎರಡನೇ ಶನಿವಾರ
ನವೆಂಬರ್ 14: ಭಾನುವಾರ
ನವೆಂಬರ್ 21: ಭಾನುವಾರ
ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ
ನವೆಂಬರ್ 28: ಭಾನುವಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ