ಆ್ಯಪ್ನಗರ

ನಿಗದಿತ ಮೊತ್ತಕ್ಕಿಂತ ಕಡಿಮೆ ತೆರಿಗೆ ಪಾವತಿ, ತಪ್ಪೊಪ್ಪಿಕೊಂಡ ಬಿಬಿಸಿ

ಭಾರತದಲ್ಲಿ ನಡೆಸುತ್ತಿರುವ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಸುವಲ್ಲಿ ಪ್ರಮಾದ ಎಸಗಿರುವ ಕುರಿತಂತೆ ಬಿಬಿಸಿಯು ತಪೊಪ್ಪಿಕೊಂಡಿದೆ. ತನ್ನ ವಹಿವಾಟಿಗೆ ತಕ್ಕಂತೆ ತೆರಿಗೆ ಪಾವತಿಸದೇ ಕಡಿಮೆ ಮೊತ್ತದ ತೆರಿಗೆ ಪಾವತಿಸಿದ್ದಾಗಿ ಸ್ವತಃ ಬಿಬಿಸಿಯೇ ಆದಾಯ ತೆರಿಗೆ ಇಲಾಖೆ ಎದುರು ಹೇಳಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಹೆಚ್ಚುವರಿ ಹಣವನ್ನು ಬಿಬಿಸಿ ತೆರಿಗೆ ರೂಪದಲ್ಲಿ ಪಾವತಿಸಿಲ್ಲ.

Curated byಎನ್‌. ಸಚ್ಚಿದಾನಂದ | Vijaya Karnataka Web 7 Jun 2023, 9:20 am

ಹೈಲೈಟ್ಸ್‌:

  • ಭಾರತದಲ್ಲಿ ನಡೆಸುತ್ತಿರುವ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಸುವಲ್ಲಿ ಪ್ರಮಾದ ಎಸಗಿದ ಬಿಬಿಸಿ
  • ವಹಿವಾಟಿಗೆ ತಕ್ಕಂತೆ ತೆರಿಗೆ ಪಾವತಿಸದೇ ಕಡಿಮೆ ಮೊತ್ತದ ತೆರಿಗೆ ಪಾವತಿಸಿದ್ದಾಗಿ ಆದಾಯ ತೆರಿಗೆ ಇಲಾಖೆ ಎದುರು ಹೇಳಿಕೊಂಡ ಸುದ್ದಿ ಸಂಸ್ಥೆ
  • ಸದ್ಯಕ್ಕೆ ಯಾವುದೇ ಹೆಚ್ಚುವರಿ ಹಣವನ್ನು ತೆರಿಗೆ ರೂಪದಲ್ಲಿ ಬಿಬಿಸಿ ಪಾವತಿಸಿಲ್ಲ ಎಂದ ಅಧಿಕಾರಿಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bbc
ಹೊಸದಿಲ್ಲಿ: ಬಿಬಿಸಿ ಎಂದೇ ಸಂಕ್ಷಿಪ್ತವಾಗಿ ಕರೆಯಲ್ಪಡುವ ಬ್ರಿಟನ್‌ ಮೂಲದ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ಸುದ್ದಿಸಂಸ್ಥೆಯು ಭಾರತದಲ್ಲಿ ನಡೆಸುತ್ತಿರುವ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಸುವಲ್ಲಿ ಪ್ರಮಾದ ಎಸಗಿರುವ ಕುರಿತಂತೆ ತಪೊಪ್ಪಿಕೊಂಡಿದೆ. ತನ್ನ ವಹಿವಾಟಿಗೆ ತಕ್ಕಂತೆ ತೆರಿಗೆ ಪಾವತಿಸದೇ ಕಡಿಮೆ ಮೊತ್ತದ ತೆರಿಗೆ ಪಾವತಿಸಿದ್ದಾಗಿ ಸ್ವತಃ ಬಿಬಿಸಿ ಆದಾಯ ತೆರಿಗೆ ಇಲಾಖೆ ಎದುರು ಹೇಳಿಕೊಂಡಿದೆ.
"ಬಿಬಿಸಿ ತಾನು ಪಾವತಿಸಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತ ಪಾವತಿಸಿರುವ ಬಗೆಗೆ ಒಪ್ಪಿಕೊಂಡಿದೆ. ಆದರೆ ಸದ್ಯಕ್ಕೆ ಯಾವುದೇ ಹೆಚ್ಚುವರಿ ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಿಲ್ಲ," ಎಂದು ಇಲ್ಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು 'ಇಂಡಿಯಾ- ದಿ ಮೋದಿ ಕ್ವಶ್ಚನ್‌' ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿತ್ತು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ದೇಶದಲ್ಲಿ ಈ ಸಾಕ್ಷ್ಯಚಿತ್ರದ ಪ್ರಸಾರಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ನಿಷೇಧವನ್ನೂ ಹೇರಿತ್ತು. ಇದಾದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಲ್ಲಿ ಮತ್ತು ಮುಂಬಯಿಯಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸತತ ಮೂರು ದಿನಗಳ ಕಾಲ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾಕ್ಷ್ಯಚಿತ್ರದ ಕಾರಣಕ್ಕೇ ದಾಳಿ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.

BBC | ಬಿಬಿಸಿ ದಿಲ್ಲಿ, ಮುಂಬೈ ಕಚೇರಿಗಳಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ

ಈ ಬಗ್ಗೆ ಕಳೆದ ಫೆಬ್ರವರಿ 17ರಂದು ಆದಾಯ ತೆರಿಗೆ ಇಲಾಖೆಯು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿತ್ತು. ಇದರಲ್ಲಿ ಬಿಬಿಸಿ ಹೆಸರು ಉಲ್ಲೇಖಿಸದೇ ಇಲಾಖೆಯು, ಕೆಲವು ಸಂಸ್ಥೆಗಳು ಆದಾಯ ತೆರಿಗೆ ವಂಚಿಸಿರುವ ಬಗೆಗೆ ಖಚಿತ ಮಾಹಿತಿ ಆಧರಿಸಿ ತಪಾಸಣೆ ನಡೆಸಲಾಗಿದೆ ಹಾಗೂ ಈ ಕಂಪನಿಗಳ ಭಾರತ ಮತ್ತು ಹೊರ ದೇಶದಲ್ಲಿನ ವಹಿವಾಟಿನ ಕುರಿತಂತೆ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಲಾಗಿದೆ ಎಂದು ಹೇಳಿತ್ತು.

ಇದರ ಬೆನ್ನಲ್ಲೇ ಬಿಬಿಸಿ ಕೂಡ ಹೇಳಿಕೆ ನೀಡಿ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ತಪಾಸಣೆಗೆ ಸಹಕಾರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಈಗ ಬಿಬಿಸಿ ಕೂಡ ತೆರಿಗೆ ಪಾವತಿಯಲ್ಲಿ ಆಗಿರುವ ಲೋಪ ಸರಿಪಡಿಸಿ ಹೊಸದಾಗಿ ಐಟಿ ಫೈಲಿಂಗ್ ಮಾಡುವುದಾಗಿ ಹೇಳಿದೆ ಎಂದು ಐಟಿ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ