ಆ್ಯಪ್ನಗರ

ಹುಷಾರ್; ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಲೀಕ್..!

ನೀವು ಕೂಡಾ ಸ್ಮಾರ್ಟ್‌ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಕಂಪ್ಯೂಟರ್‌ಗಳಲ್ಲಿ ಬಳಕೆ ಮಾಡುವ ಹವ್ಯಾಸವನ್ನು ರೂಢಿ ಮಾಡಿಕೊಂಡಿರುವಿರಾ? ಹಾಗಿದ್ದಲ್ಲಿ ಈ ಕೂಡಲೇ ಹುಷಾರಾಗಿರಿ.

ಟೈಮ್ಸ್ ಆಫ್ ಇಂಡಿಯಾ 20 Jan 2017, 6:29 pm
ಮುಂಬಯಿ: ನೀವು ಕೂಡಾ ಸ್ಮಾರ್ಟ್‌ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಕಂಪ್ಯೂಟರ್‌ಗಳಲ್ಲಿ ಬಳಕೆ ಮಾಡುವ ಹವ್ಯಾಸವನ್ನು ರೂಢಿ ಮಾಡಿಕೊಂಡಿರುವಿರಾ? ಹಾಗಿದ್ದಲ್ಲಿ ಈ ಕೂಡಲೇ ಹುಷಾರಾಗಿರಿ.
Vijaya Karnataka Web be alert your friend may be spying on you
ಹುಷಾರ್; ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಲೀಕ್..!


ಕ್ಯೂಆರ್ ಕೋಡ್ ಅಂದರೆ ಕ್ವಿಕ್ ರೆಸ್ಪಾನ್ಸ್ ಎಂಬುದು ಒಂದು ಮ್ಯಾಟ್ರಿಕ್ಸ್ ಬಾರ್ ಕೋಡ್ ಆಗಿದೆ. ಕಪ್ಪು ವಿನ್ಯಾಸದ ಚೌಕಕಾರದ ಇದನ್ನು ಸ್ಕ್ಯಾನ್ ಮಾಡಿದಾಗ ನಿಮ್ಮ ವಾಟ್ಸಪ್‌ಗಳಂತಹ ವೈಯಕ್ತಿಕ ಪುಟಗಳು ಕಂಪ್ಯೂಟರ್‌ನಲ್ಲಿ ತೆರೆದುಕೊಳ್ಳುತ್ತದೆ.

ಇದೀಗ ಬಂದಿರುವ ಬೆಚ್ಚಿ ಬೀಳಿಸುವ ಮಾಹಿತಿಗಳ ಪ್ರಕಾರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಬಳಕೆ ಮಾಡುವ ವಾಟ್ಸಫ್ ಅಪ್ಲಿಕೇಷನ್‌ಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ವಾಟ್ಸಫ್ ಹ್ಯಾಕಿಂಗ್ ಮಾಡುವುದಷ್ಟೇ ಅಲ್ಲದೆ ವೈಯಕ್ತಿಕ ಸಂಪರ್ಕಗಳಿಗೆ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.

ಈ ಸಂಬಂಧ ಅನೇಕ ದೂರುಗಳು ಈಗಾಗಲೇ ದಾಖಲಾಗಿವೆ. ಇವೆಲ್ಲವೂ ಟೆಕ್ ಜಗತ್ತಿಗೆ ಹೊಸ ಸವಾಲುಗಳನ್ನು ಹುಟ್ಟು ಹಾಕಿವೆ.

ಸ್ಪೈವೇರ್ ಬಗ್ಗೆ ಎಚ್ಚರ ವಹಿಸಿ...
ಈ ನಡುವೆ ಇಂತಹ ಖಾತೆ ಹೊಂದಿರುವ ವ್ಯಕ್ತಿಯ ಅರಿವಿಲ್ಲದೆ ಮಾಹಿತಿ ಕಬಳಿಸುವ ಸ್ಪೈವೇರ್ ಸಾಫ್ಟ್‌ವೇರ್‌ಗಳ ಬಗ್ಗೆ ಎಚ್ಚರ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ