ಆ್ಯಪ್ನಗರ

ಬೀಡಿ ಸೇವನೆ: ಭಾರತಕ್ಕೆ ವರ್ಷವೊಂದರಲ್ಲೇ 80,550 ಕೋಟಿ ರೂ.ನಷ್ಟ!

ಬೀಡಿ ಸೇವನೆಯಿಂದ ದೇಶಕ್ಕೆ ಕಳೆದ 2017ರ ಒಂದೇ ವರ್ಷದಲ್ಲಿ 80,550 ಕೋಟಿ ರೂ...

PTI 31 Dec 2018, 5:00 am
ಕೊಚ್ಚಿ: ಬೀಡಿ ಸೇವನೆಯಿಂದ ದೇಶಕ್ಕೆ ಕಳೆದ 2017ರ ಒಂದೇ ವರ್ಷದಲ್ಲಿ 80,550 ಕೋಟಿ ರೂ. ನಷ್ಟವಾಗಿದೆ ಎಂದು ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರವು(ಸಿಪಿಪಿಪಿ) ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ದೇಶದ ತಂಬಾಕು ಸೇವನೆದಾರರಲ್ಲಿ ಶೇ.81 ಮಂದಿ ಬೀಡಿ ಚಟಕ್ಕೆ ಅಂಟಿಕೊಂಡವರಾಗಿದ್ದಾರೆ.
Vijaya Karnataka Web bidi


ಬೀಡಿ ಸೇದುವವರ ಆರೋಗ್ಯ, ಅವಧಿಗೆ ಮುನ್ನ ಸಂಭವಿಸುವ ಧೂಮಪಾನಿಗಳ ಸಾವುಗಳನ್ನು ಆಧರಿಸಿ ನಷ್ಟದ ಲೆಕ್ಕಾಚಾರ ಹಾಕಲಾಗಿದೆ. ನಾನಾ ರೀತಿಯ ಕ್ಯಾನ್ಸರ್‌, ಟ್ಯೂಬರ್‌ಕ್ಯುಲೋಸಿಸ್‌, ಶ್ವಾಸಕೋಶದ ಕಾಯಿಲೆಗಳಿಗೆ ಬೀಡಿ ಸೇದುವ ಮಂದಿ ಬಲಿಯಾಗುತ್ತಿದ್ದು ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರಿದೆ. ರೋಗ ಪರೀಕ್ಷೆಗಳು, ಔಷಧಗಳು, ವೈದ್ಯರ ಶುಲ್ಕ, ಆಸ್ಪತ್ರೆಯಲ್ಲಿ ತಂಗುವ ವೆಚ್ಚ, ಸಾರಿಗೆ ಮತ್ತಿತರ ಕಾರಣಗಳಿಂದ 16,870 ಕೋಟಿ ರೂ. ನೇರ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಇದರ ಜೊತೆಗೆ ರೋಗಿಗಳನ್ನು ನೋಡಿಕೊಳ್ಳಲು ಬರುವ ಕುಟುಂಬ ಸದಸ್ಯರ ದುಡಿಮೆಗೆ ಆಗುವ ನಷ್ಟ, ಕುಟುಂಬದ ಆದಾಯ ನಷ್ಟಗಳನ್ನೂ ಲೆಕ್ಕಹಾಕಿದರೆ ಒಟ್ಟು 80 ಸಾವಿರ ಕೋಟಿ ರೂ.ಗಳನ್ನು ದಾಟುತ್ತದೆ.

ಸಂಸ್ಕರಿಸದ ತಂಬಾಕನ್ನು ಬಳಸಿ ಅಗ್ಗದ ದರಕ್ಕೆ ಬೀಡಿಗಳನ್ನು ತಯಾರಿಸಲಾಗುತ್ತಿದ್ದು, ಭಾರತದಲ್ಲಿ ಜನಪ್ರಿಯವಾಗಿದೆ. ಬೀಡಿಯನ್ನು ನಿರಂತರವಾಗಿ ಸೇದುವವರಲ್ಲಿ 15 ವಯಸ್ಸಿನ ಆಜೂಬಾಜಿನವರ ಸಂಖ್ಯೆ 7.2 ಕೋಟಿಯಷ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ