ಆ್ಯಪ್ನಗರ

4 ಐಟಿ ಕಂಪನಿಗಳಿಂದ 70,000 ಉದ್ಯೋಗಿಗಳ ನೇಮಕ

ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌ ಕಂಪನಿಗಳು ಡಿಸೆಂಬರ್‌ ಅಂತ್ಯದ ಹೊತ್ತಿಗೆ 70 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ.

TNN 6 Feb 2019, 8:03 am
ಬೆಂಗಳೂರು: ಐಟಿ ಉದ್ಯೋಗಿಗಳ ಪಾಲಿಗೆ ಇದು ಶುಭ ಸುದ್ದಿ. ಕಳೆದ ವರ್ಷ ಐಟಿ ವಲಯದಲ್ಲಿ ಕುಸಿದಿದ್ದ ಉದ್ಯೋಗಿಗಳ ನೇಮಕ ಪ್ರಕ್ರಿಯೆ, ಈ ವರ್ಷ ಗಣನೀಯವಾಗಿ ಹೆಚ್ಚಿದೆ. ಕಳೆದ 9 ತಿಂಗಳಲ್ಲಿ ಪ್ರಮುಖ 4 ಕಂಪನಿಗಳಿಂದ 70 ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ.
Vijaya Karnataka Web job 12 3


ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌ ಕಂಪನಿಗಳು ಡಿಸೆಂಬರ್‌ ಅಂತ್ಯದ ಹೊತ್ತಿಗೆ 70 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. 2017-18ಕ್ಕೆ ಹೋಲಿಸಿದರೆ ನೇಮಕದಲ್ಲಿ 5 ಪಟ್ಟು ಏರಿಕೆಯಾದಂತೆ ಆಗಿದೆ. ಈ ಕಂಪನಿಗಳ ಒಟ್ಟು ಆದಾಯ 46 ಶತಕೋಟಿ ಡಾಲರ್‌ನಷ್ಟಿದ್ದು, ಕಳೆದ ವರ್ಷ 13,972 ಜನರನ್ನು ನೇಮಕ ಮಾಡಿಕೊಂಡಿದ್ದವು. ಡಿಜಿಟಲ್‌ ತಂತ್ರಜ್ಞಾನದ ತ್ವರಿತ ಅಳವಡಿಕೆ, ಸಾಂಪ್ರದಾಯಿಕ ವ್ಯವಹಾರದ ಮೇಲಿನ ಒತ್ತಡ, ಆಟೋಮೇಷನ್‌, ಮುಖ್ಯ ಮಾರುಕಟ್ಟೆಯಲ್ಲಿ ಸ್ಥಳೀಯರಿಗೆ ಆದ್ಯತೆ ಸೇರಿದಂತೆ ಕೆಲವು ಕಾರಣಗಳಿಂದ ಐಟಿ ಉದ್ಯಮ ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿತ್ತು. ನೇಮಕ ಪ್ರಕ್ರಿಯೆ ಗಣನೀಯವಾಗಿ ಕುಸಿದಿತ್ತು. ಆದರೆ, ಪ್ರಸಕ್ತ ವರ್ಷ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ.

ಬ್ಯುಸಿನೆಸ್‌ ಬೆಳವಣಿಗೆ ಮತ್ತೆ ಸರಿದಾರಿಗೆ ಮರಳಿದೆ. ಎರಡಂಕೆ ಬೆಳವಣಿಗೆಯ ನಿರೀಕ್ಷೆ ಮೂಡಿದೆ. ಕಳೆದ ವರ್ಷ ಕೇವಲ 3,657 ಉದ್ಯೋಗಿಗಳನ್ನಷ್ಟೇ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ಉದ್ಯಮದ ಚೇತರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಟಿಸಿಎಸ್‌ನ ಗ್ಲೋಬಲ್‌ ಹೆಡ್‌ ಅಜೊಯೇಂದ್ರ ಮುಖರ್ಜಿ, ''ಇದೊಂದು ಪ್ರಮುಖ ಜಿಗಿತ. ವಹಿವಾಟು ಹೆಚ್ಚುತ್ತಿದ್ದು, ನೇಮಕ ಪ್ರಕ್ರಿಯೆ ಚುರುಕಾಗಿದೆ. ನಾವು ವಹಿವಾಟು ಬೆಳವಣಿಗೆಗೆ ಸಂಬಂಧಿಸಿದಂತೆ ಎರಡಂಕಿಯ ಗುರಿ ಹೊಂದಿದ್ದೇವೆ. '' ಎಂದಿದ್ದಾರೆ.

* ಕಳೆದ 9 ತಿಂಗಳಲ್ಲಿ 22,931 ಉದ್ಯೋಗಿಗಳನ್ನು ಟಿಸಿಎಸ್‌ ನೇಮಕ ಮಾಡಿಕೊಂಡಿದೆ.

* ಎಚ್‌ಸಿಎಲ್‌ ಟೆಕ್ನಾಲಜಿ ಕಂಪನಿಯು ಕಳೆದ ವರ್ಷದ ಡಿಸೆಂಬರ್‌ ತನಕ 12,247 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. 2017-18ರಲ್ಲಿ 4,108 ಜನರ ನೇಮಕ ಮಾಡಿಕೊಳ್ಳಲಾಗಿತ್ತು.

* ವಿಪ್ರೊ ಕಂಪನಿಯು 12,456 ಉದ್ಯೋಗಿಗಳನ್ನು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಂಡಿದೆ.

* ಇನ್ಫೋಸಿಸ್‌ ಕಂಪನಿಯು 21,398 ಉದ್ಯೋಗಿಗಳಿಗೆ ಕೆಲಸ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ