ಆ್ಯಪ್ನಗರ

ಈ ವರ್ಷದ ಕೊನೆಗೆ ಅಮೆಜಾನ್‌ ಸಿಇಒ ಹುದ್ದೆ ತ್ಯಜಿಸಲಿದ್ದಾರೆ ಜೆಫ್‌ ಬೆಜೋಸ್‌!

ಸದ್ಯ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆಂಡಿ ಜೆಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಕಳೆದ ಮೂವತ್ತು ವರ್ಷಗಳ ಕಾಲ ಅಮೆಜಾನ್‌ನ ಸಿಇಒ ಆಗಿದ್ದ ಜೆಫ್‌ ಬೆಜೋಸ್‌ ಈ ಪದವಿಯಿಂದ ಕೆಳಗಿಳಿಯುತ್ತಿದ್ದಾರೆ. ಇನ್ನು ಸಿಇಒ ಪದವಿ ತ್ಯಜಿಸುವುದು ಎಂದರೆ ನಿವೃತ್ತಿ ಹೊಂದುವುದು ಎಂದು ಅರ್ಥವಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.

TIMESOFINDIA.COM 3 Feb 2021, 9:19 am
ಈ ಕಾಮರ್ಸ್‌ ದಿಗ್ಗಜ, ಬಿಲಿಯನೇರ್‌ ಜೆಫ್ ಬೆಜೋಸ್(57) ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು(CEO) ತ್ಯಜಿಸುವುದಾಗಿ ತಿಳಿಸಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ರಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯದಲ್ಲಿ ಎರಡರಲ್ಲೂ ಏರಿಕೆ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
Vijaya Karnataka Web Jeff Bezos


ಈ ಹಿನ್ನೆಲೆ ಸದ್ಯ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆಂಡಿ ಜೆಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಕಳೆದ ಮೂವತ್ತು ವರ್ಷಗಳ ಕಾಲ ಅಮೆಜಾನ್‌ನ ಸಿಇಒ ಆಗಿದ್ದ ಜೆಫ್‌ ಬೆಜೋಸ್‌ ಈ ಪದವಿಯಿಂದ ಕೆಳಗಿಳಿಯುತ್ತಿದ್ದಾರೆ. ಇನ್ನು ಸಿಇಒ ಪದವಿ ತ್ಯಜಿಸುವುದು ಎಂದರೆ ನಿವೃತ್ತಿ ಹೊಂದುವುದು ಎಂದು ಅರ್ಥವಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.

ರಜೆಕಾಲದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ದುಪ್ಪಟ್ಟು 7.2 ಬಿಲಿಯನ್ ಡಾಲರ್‌ ಹೆಚ್ಚಾಗಿದ್ದು, ಶೇ. 44 ರಷ್ಟು ಜಿಗಿದು 125.6 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಈ ಬಗ್ಗೆ ಇತ್ತೀಚೆಗೆ ಹಲವು ವರದಿಗಳ ಬಂದಿತ್ತು. ಈ ಬೆನ್ನಲ್ಲೇ ಜೆಫ್ ಬೆಜೋಸ್ ಸಿಇಒ ಪದವಿ ತ್ಯಜಿಸುವುದಾಗಿ ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ನಾನು ಪ್ರಮುಖ ಅಮೆಜಾನ್ ಉಪಕ್ರಮಗಳಲ್ಲಿ ನಿರತನಾಗಿರುತ್ತೇನೆ. ಆದರೆ ಪ್ರತಿದಿನ ನಿಧಿಯತ್ತ ಗಮನ ಹರಿಸಬೇಕಾದ ಸಮಯ ಮತ್ತು ಶಕ್ತಿಯನ್ನು ಸಹ ಹೊಂದಿದ್ದೇನೆ.

ಫ್ಯೂಚರ್‌ ಗ್ರೂಪ್‌-ರಿಲಯನ್ಸ್‌ ಡೀಲ್‌ಗೆ ಕೋರ್ಟ್‌ ತಡೆ, ಮುಕೇಶ್‌ ಅಂಬಾನಿಗೆ ಭಾರಿ ಹಿನ್ನಡೆ

ಅಮೆಜಾನ್ ಇಂದು ಏನಾಗಿದೆಯೊ ಅದಕ್ಕೆ ಅದರ ಆವಿಷ್ಕಾರ ಕಾರಣ. ಇದೀಗ ನಾನು ಅಮೆಜಾನ್‌ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ನೋಡುತ್ತಿದ್ದೇನೆ, ಪರಿವರ್ತನೆಗೆ ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ. ಜೆಫ್ ಬೆಜೋಸ್ ಬಳಿಕ ಅಮೆಜಾನ್ ಸಿಇಒ ಹುದ್ದೆಗೇರಲಿರುವ ಜೆಸ್ಸಿ, 1997ರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. 2003ರಲ್ಲಿ ಕಂಪನಿಯ ಅತ್ಯಂತ ಲಾಭದಾಯಕ ವೆಬ್ ವಿಭಾಗ ಎಡಬ್ಲ್ಯೂಎಸ್ ಸ್ಥಾಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ