ಆ್ಯಪ್ನಗರ

ಗ್ರಾಹಕರಿಗೆ ಮತ್ತಷ್ಟು ಖಾರವಾದ ಗಾಂಧಾರಿ ಮೆಣಸು: ಕೆಜಿಗೆ 1600 ರೂ.

​ ಗಾಂಧಾರಿ ಮೆಣಸು ಇದೀಗ ರುಚಿಯಲ್ಲಿ ಮಾತ್ರವಲ್ಲಿದೆ ಬೆಲೆಯಲ್ಲೂ ಖಾರವಾಗಿ ಪರಿಣಮಿಸಿದೆ. ಒಂದಕ್ಕೆ 1600ರೂ.ಗೆ ತಲುಪಿದೆ.

Samayam Malayalam 6 Jun 2018, 5:17 pm
ತಿರುವಂತಪುರ: ಕರ್ನಾಟಕ - ಕೇರಳದ ಗಡಿ ಭಾಗದಲ್ಲಿ ಖಾರ ಎಂದಾಕ್ಷಣ ನೆನಪಾಗುವುದು ಗಾಂಧಾರಿ ಮೆಣಸು. ಈ ಪದ ಈ ಭಾಗದಲ್ಲಿ ತುಂಬಾ ಜೋರಿನ ಸ್ವಭಾವದವರಿಗೂ ಬಳಸುವುದಿದೆ. ಆದರೆ ಸದ್ಯಕ್ಕೆ ಗಾಂಧಾರಿ ಎಂದಾಕ್ಷಣ ಅದರ ಬೆಲೆಯೇ ನೆನಪಾಗುವ ಪರಿಸ್ಥಿತಿ ಎದುರಾಗಿದೆ.
Vijaya Karnataka Web chilli


ಗಾಂಧಾರಿ ಮೆಣಸು ಇದೀಗ ರುಚಿಯಲ್ಲಿ ಮಾತ್ರವಲ್ಲದೆ ಬೆಲೆಯಲ್ಲೂ ಖಾರವಾಗಿ ಪರಿಣಮಿಸಿದೆ. ಒಂದು ಕೆಜಿಗೆ 1600 ರೂ.ಗೆ ತಲುಪಿದೆ. ಚಿಕ್ಕ ಮೂರ್ತಿಯಾದರೂ ಇದರ ಮಹಿಮೆ ಮಹತ್ವದ್ದು ಎಂಬುದನ್ನು ಈ ಬಾರಿಯ ದಾಖಲೆಯ ಬೆಲೆ ಮೂಲಕ ಸಾಬೀತುಪಡಿಸಿದೆ.

ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಗಾಂಧಾರಿ ಮೆಣಸು, ಇದೀಗ ಹೆಚ್ಚು ಬೇಡಿಕೆ ಗಳಿಸಿಕೊಡುತ್ತಿದ್ದು, ಕೆಲ ದಿನಗಳಲ್ಲಿ ಬೆಲೆಯಲ್ಲಿ 200 ರೂ.ಗಳಷ್ಟು ಹೆಚ್ಚಳವಾಗಿದೆ. ಅದರಲ್ಲೂ ಹಸಿ ಮೆಣಸಿಗಿಂತ, ಒಣ ಗಾಂಧಾರಿಗೆ ಪ್ರತಿ ಕೆ.ಜಿಗೆ 2 ಸಾವಿರ ರೂ.ಗಳಲ್ಲಿ ಮಾರಾಟವಾಗುತ್ತಿದೆ. ಕೊಲ್ಲಿ ರಾಷ್ಟ್ರ ಹಾಗೂ ಥಾಯ್ಲೆಂಡ್‌, ವಿಯೆಟ್ನಾಂ ದೇಶಗಳಿಗೆ ರಫ್ತು ಮಾಡಲಾಗುತ್ತದೆ.


ಔಷಧೀಯ ಗುಣ


ಗಾಂಧಾರಿ ಮೆಣಸನ್ನು ಅರೇಬಿಯನ್‌ ರಾಷ್ಟ್ರಗಳಲ್ಲಿ ಔಷಧೀಯವಾಗಿ ವಸ್ತುವಾಗಿ ಉಪಯೋಗಿಸುತ್ತಾರೆ. ಮೆಣಸು ಸೇವನೆಯು ಹಸಿವನ್ನು ಹೆಚ್ಚಿಸಲು ಮತ್ತು ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಖಾರವನ್ನು ಪ್ರತಿರೋಧಿಸಲು ಶರೀರಕ್ಕೆ ಧಾರಾಳ ಶಕ್ತಿ ಬೇಕಾಗಿರುವುದರಿಂದ ಕೊಲೆಸ್ಟ್ರಾಲ್‌ನ ಅಳತೆಯನ್ನು ನಿಯಂತ್ರಿಸಲು ಗಾಂಧಾರಿ ಸೇವನೆಯಿಂದ ಹೆಚ್ಚು ಪ್ರಯೋಜನವಾಗುವುದು.

ಸಂಧಿವಾತ, ಕೊಲೆಸ್ಟ್ರಾಲ್‌, ಸ್ಥೂಲಕಾಯತೆ, ಹಲ್ಲು ನೋವುಗಳನ್ನು ಕಡಿಮೆ ಮಾಡಲು ಗಾಂಧಾರಿ ಉಪಯೋಗ ಮಾಡುತ್ತಾರೆ. ಅಂತೆಯೇ ಸಿ ಮಿಟಮಿನ್‌ ಹೊಂದಿದೆ. ಹಸಿರು ಬಣ್ಣದ ಚಿಕ್ಕ ಗಾಂಧಾರಿಯ ಖಾರವೂ ಹೆಚ್ಚು. ಗಾಂಧಾರಿ ಮೆಣಸಿನ ದ್ರಾವಣವನ್ನು ಸಹ ಕೀಟನಾಶಕವನ್ನಾಗಿಯೂ ಬಳಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ