ಆ್ಯಪ್ನಗರ

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ತನ್ನಿ: ಅಸೋಚಮ್‌

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ಮೂಲಕ, ಗ್ರಾಹಕರಿಗೆ ತಾತ್ಕಾಲಿಕವಾಗಿ ತುಸು ಕಡಿಮೆ ದರಕ್ಕೆ ಇಂಧನವನ್ನು ನೀಡಬಹುದಾಗಿದೆ.

TNN & Agencies 22 May 2018, 5:00 am
ಮಂಗಳೂರು : ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ಮೂಲಕ, ಗ್ರಾಹಕರಿಗೆ ತಾತ್ಕಾಲಿಕವಾಗಿ ತುಸು ಕಡಿಮೆ ದರಕ್ಕೆ ಇಂಧನವನ್ನು ನೀಡಬಹುದಾಗಿದೆ. ದೇಶದ ನಾನಾ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ವ್ಯತ್ಯಾಸವಿದ್ದು, ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಆ ಮೂಲಕ ಗ್ರಾಹಕರಿಗೆ ನೆರವಾಗ ಬೇಕು ಎಂದು ಅಸೋಚಮ್‌ ಒತ್ತಾಯಿಸಿದೆ.
Vijaya Karnataka Web bring petrol diesel under gst says assocham
ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ತನ್ನಿ: ಅಸೋಚಮ್‌


''ಕಚ್ಚಾ ತೈಲದ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವುದು ಒಂದು ಕಡೆಯಾದರೆ, ರೂಪಾಯಿ ಮೌಲ್ಯ ದುರ್ಬಲವಾಗುತ್ತಿದೆ. ಜತೆಗೆ ಹಣದುಬ್ಬರದ ಪ್ರಭಾವದಿಂದ ದೇಶದ ಪ್ರತಿ ವ್ಯಕ್ತಿ ಮೇಲೂ ನಕಾರಾತ್ಮಕ ಪರಿಣಾಮ ಖಚಿತ. ಅಲ್ಪ ಕಾಲದಲ್ಲಿ ಈ ಪರಿಸ್ಥಿತಿಯಾದರೆ, ದೀರ್ಘಕಾಲದಲ್ಲಿ ಹೆಚ್ಚಿನ ತೊಡಕು ಖಚಿತ,'' ಎಂದು ಅಸೋಚಮ್‌ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

''ಇಂಧನ ಸುರಕ್ಷತೆ, ಬಳಕೆ ಮತ್ತು ಪೂರೈಕೆ ಜಾಲವನ್ನು ಮರು ವಿನ್ಯಾಸ ಮಾಡಬೇಕಾಗಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಇಂಧನದ ಮೇಲಿನ ಹೆಚ್ಚಿನ ಅವಲಂಬನೆ ವ್ಯತಿರಿಕ್ತ ಪರಿಣಾಮಗಳಿಗೆ ದಾರಿಯಾಗುತ್ತದೆ,'' ಎಂದು ರಾವತ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ