ಆ್ಯಪ್ನಗರ

ಬಜೆಟ್‌ 2018: ರಕ್ಷಣಾ ವೆಚ್ಚ ಶೇ 7.81 ಏರಿಕೆ

ಭಾರತದ ರಕ್ಷಣಾ ಬಜೆಟ್‌ ಕೇವಲ ಶೇ 7.81ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 2,74,114 ಕೋಟಿ ಒದಗಿಸಲಾಗಿದ್ದರೆ ಈ ಬಜೆಟ್‌ನಲ್ಲಿ 2,95,511 ಕೋಟಿ ರೂ.ಗಳನ್ನು ರಕ್ಷಣಾ ವಲಯಕ್ಕೆ ನೀಡಲಾಗಿದೆ.

Vijaya Karnataka Web 1 Feb 2018, 3:45 pm
ಹೊಸದಿಲ್ಲಿ: ಭಾರತದ ರಕ್ಷಣಾ ಬಜೆಟ್‌ ಕೇವಲ ಶೇ 7.81ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 2,74,114 ಕೋಟಿ ಒದಗಿಸಲಾಗಿದ್ದರೆ ಈ ಬಜೆಟ್‌ನಲ್ಲಿ 2,95,511 ಕೋಟಿ ರೂ.ಗಳನ್ನು ರಕ್ಷಣಾ ವಲಯಕ್ಕೆ ನೀಡಲಾಗಿದೆ.
Vijaya Karnataka Web budget 2018 govt hikes defence budget by 7 81
ಬಜೆಟ್‌ 2018: ರಕ್ಷಣಾ ವೆಚ್ಚ ಶೇ 7.81 ಏರಿಕೆ


ಪಾಕಿಸ್ತಾನ ಮತ್ತು ಚೀನಾ ಜತೆಗೆ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಮಿಲಿಟರಿ ಆಧುನೀಕರಣಕ್ಕೆ ಹೆಚ್ಚಿನ ಅನುದಾನ ದೊರಕಬಹುದೆಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ.

2018-19ರ ಯೋಜಿತ ಜಿಡಿಪಿಯಲ್ಲಿ ಶೇ 1.58ರಷ್ಟು ಮಾತ್ರ ರಕ್ಷಣಾ ವಲಯಕ್ಕೆ ಮೀಸಲಿಡಲಾಗಿದೆ. 1962ರ ಚೀನಾ ಯುದ್ಧದ ಬಳಿಕ ರಕ್ಷಣೆಗಾಗಿ ನೀಡುತ್ತಿರುವ ಅತಿ ಕಡಿಮೆ ಬಜೆಟ್‌ ಇದಾಗಿದೆ. ಆರ್ಥಿಕತೆ ಬೆಳೆಯುತ್ತಿದ್ದರೂ ರಕ್ಷಣಾ ಬಜೆಟ್‌ ಶೇಕಡಾವಾರು ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುವ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸಶಸ್ತ್ರ ಪಡೆಗಳಿಗೆ ಶೇ 2.5ಕ್ಕಿಂತಲೂ ಹೆಚ್ಚು ಬಜೆಟ್‌ ಮೀಸಲಿಡಬೇಕಿತ್ತು ಎಂದು ಮಿಲಿಟರಿ ತಜ್ಞರು ಅಭಿಪ್ರಾಯಪಡುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಆಧುನೀಕರಣಕ್ಕಾಗಿ 99,563.86 ಕೋಟಿ ಯೋಜನಾ ಅನುದಾನ ನಿಗದಿಪಡಿಸಲಾಗಿದ್ದರೂ ವಾಸ್ತವದಲ್ಲಿ ನೀಡಿರುವ ಹಣ ಕೇವಲ 1,95,947.55 ಕೋಟಿ ರೂ. ರಕ್ಷಣಾ ಇಲಾಖೆಯ ಪಿಂಚಣಿಗಳಿಗಾಗಿ 1,08,853 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದ್ದು, ಇದು ರಕ್ಷಣಾ ಬಜೆಟ್‌ನಲ್ಲಿ ಸೇರಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ