ಆ್ಯಪ್ನಗರ

ಮಾಸ್ಕ್‌, ವೆಂಟಿಲೇಟರ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಿದ್ರೂ ಜಿಎಸ್‌ಟಿ ವಿನಾಯಿತಿ ಇಲ್ಲ!

ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಮುಂತಾದವಕ್ಕೆ ಭಾರಿ ಡಿಮ್ಯಾಂಡ್‌ ಬಂದಿದೆ. ಈ ಹಿನ್ನೆಲೆ ಈ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಬೇಕೆಂಬ ಬೇಡಿಕೆಯೂ ಕೇಳಿಬಂದಿದೆ.

TIMESOFINDIA.COM 20 Apr 2020, 9:11 pm
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ ಹಾವಳಿ ಹೆಚ್ಚಿರುವುದರಿಂದ ವೆಂಟಿಲೇಟರ್‌, ಪಿಪಿಇ, ಮಾಸ್ಕ್‌, ಟೆಸ್ಟ್ ಕಿಟ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ವಸ್ತುಗಳಿಗೆ ಭಾರಿ ಡಿಮ್ಯಾಂಡ್‌ ಬಂದಿದೆ. ಆದರೆ, ಕೇಂದ್ರ ಸರಕಾರ ಈ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವುದು ಅಸಂಭವ ಎಂದು ಮೂಲಗಳು ತಿಳಿಸಿವೆ.
Vijaya Karnataka Web mask toi


ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸಮಸ್ಯೆಯಾಗುವುದರಿಂದ ವೆಂಟಿಲೇಟರ್, ಪಿಪಿಇ, ಮಾಸ್ಕ್, ಟೆಸ್ಟ್ ಕಿಟ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ವಸ್ತುಗಳಿಗೆ ಕೇಂದ್ರ ಸರಕಾರ ಜಿಎಸ್‌ಟಿ ವಿನಾಯಿತಿ ನೀಡುವುದು ಅಸಂಭವ ಎನ್ನಲಾಗಿದೆ. ವಿನಾಯಿತಿ ಕೊಟ್ಟರೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಗೆ ಬೆಲೆ ಹೆಚ್ಚಾಗುತ್ತದೆ ಎಂದು ಮೂಲಗಳು ತಿಳಿಸಿವೆ.

COVID-19 ಚಿಕಿತ್ಸೆಗೆ ಅಗತ್ಯವಾದ ವಸ್ತುಗಳಾದ ವೆಂಟಿಲೇಟರ್‌ಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇಗಳು), ಮುಖವಾಡಗಳು, ಪರೀಕ್ಷಾ ಕಿಟ್‌ಗಳು ಮತ್ತು ಸ್ಯಾನಿಟೈಸರ್‌ಗಳಂತಹ ಕೆಲವು ವಸ್ತುಗಳ ಮೇಲೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಕೆಲವು ವಿಭಾಗಗಳಿಂದ ಬೇಡಿಕೆಗಳಿವೆ. ಜಿಎಸ್‌ಟಿ ವಿನಾಯಿತಿ ಇಂದ ಇವುಗಳ ಬೆಲೆ ಇಳಿಕೆ ಆಗಬಹುದು ಎಂದು ಬೇಡಿಕೆ ಇಟ್ಟಿದ್ದಾರೆ.

ಕೊರೊನಾ ವೈರಸ್‌ ಪಾಠ: ಚೀನಾ ಅವಲಂಬನೆ ತಗ್ಗಿಸಲು ಮುಂದಾದ ಅಮೆರಿಕ, ಜಪಾನ್‌; ಭಾರತವೂ ಸಜ್ಜು!

ಪ್ರಸ್ತುತ ವೆಂಟಿಲೇಟರ್‌ಗೆ ಶೇ. 12ರಷ್ಟು ಜಿಎಸ್‌ಟಿ ಇದ್ದರೆ, ಮಾಸ್ಕ್‌ಗಳ ಮೇಲೆ ಶೇಕಡಾ 5ರಷ್ಟು ಇದೆ. ಇನ್ನು, ಪರೀಕ್ಷಾ ಕಿಟ್‌ಗಳ ಮೇಲೆ ಶೇ. 12ರಷ್ಟು ಜಿಎಸ್‌ಟಿ, ಸ್ಯಾನಿಟೈಸರ್‌ ಮೇಲೆ ಶೇ. 18 ರಷ್ಟು ಜಿಎಸ್‌ಟಿ ಹಾಗು ರೂ. 1000 ರವರೆಗೆ ವೆಚ್ಚವಾಗುವ ಪಿಪಿಇಗೆ ಶೇ. 5 ಹಾಗೂ 1,000 ರೂ.ಗಿಂತ ಹೆಚ್ಚು ವೆಚ್ಚದ ಪಿಪಿಇಗೆ ಶೇ. 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

ಇದೀಗ ಅಮಿತ್ ಶಾ ಎಂಟ್ರಿ: ಸಮಸ್ಯೆ ನಿವಾರಣೆಗೆ ಎಲ್ಲಾ ಪ್ರಯತ್ನ ನಡೆಸಿದ್ದೇವೆ ಎಂದ ಅಮಿತ್ ಶಾ

ಅಂತಹ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಿದರೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಗೆ ಬೆಲೆ ಹೆಚ್ಚಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಇದು ಉದ್ಯಮದ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಮತ್ತು ಗ್ರಾಹಕರಿಗೆ ಯಾವುದೇ ಗಮನಾರ್ಹ ಲಾಭವನ್ನು ತರುವುದಿಲ್ಲ, ಈ ಹಿಂದೆ, ಸ್ಯಾನಿಟರಿ ನ್ಯಾಪ್ಕಿನ್‌ಗೆ ಜಿಎಸ್‌ಟಿ ವಿನಾಯಿತಿ ನೀಡಿದರೂ ದೇಶೀಯ ಉತ್ಪಾದಕರಿಗೆ ಇದೇ ರೀತಿಯ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮದ 7.5 ಕೋಟಿ ಉದ್ಯೋಗಕ್ಕೆ ಸಂಚಕಾರ..! ಇಟಲಿ, ಸ್ಪೇನ್‌ ಕಥೆ ಮುಂದೇನು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ