ಆ್ಯಪ್ನಗರ

ಇನ್ನೆರಡು ಇನ್ಶೂರೆನ್ಸ್‌ ಕಂಪನಿಗಳ ಷೇರು ಮಾರಾಟಕ್ಕೆ ಕೇಂದ್ರ ಚಿಂತನೆ

ಎರಡು ಇನ್ಶೂರೆನ್ಸ್‌‌ ಕಂಪನಿಗಳ ತಲಾ ಶೇ. 10ರಷ್ಟು ಷೇರುಗಳನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಕಂಪನಿಗಳ ಷೇರು ಮಾರಾಟದಿಂದ 4,000 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದುಕೊಳ್ಳಲಾಗಿದೆ.

Agencies 24 Oct 2020, 6:05 pm
ಮುಂಬಯಿ: ದೇಶದ ಅತೀ ದೊಡ್ಡ ಜೀವ ವಿಮೇತರ ಕಂಪನಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ನ ಶೇ.10ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದೇ ರೀತಿ ಜನರಲ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ (ಜಿಐಸಿ)ನ ಷೇರು ಮಾರಾಟಕ್ಕೂ ಕೇಂದ್ರ ಮುಂದಾಗಿದೆ. ಆದರೆ ಯಾವಾಗ ಎಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.
Vijaya Karnataka Web divestment


2017 ರಲ್ಲಿ ನ್ಯೂ ಇಂಡಿಯಾ ಮತ್ತು ಜಿಐಸಿಯಲ್ಲಿದ್ದ ಸುಮಾರು ಶೇ. 15ರಷ್ಟು ಹೂಡಿಕೆಯನ್ನು ಕೇಂದ್ರ ಹಿಂಪಡೆದಿತ್ತು. ಈ ವೇಳೆ ಜಿಐಸಿ ಹೂಡಿಕೆ ಹಿಂತೆಗೆದುಕೊಂಡು 11,370 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಸಂಗ್ರಹಿಸಿದ್ದರೆ, ನ್ಯೂ ಇಂಡಿಯಾ ಷೇರು ಮಾರಾಟದಿಂದ 9,600 ಕೋಟಿ ರೂಪಾಯಿ ಪಡೆದುಕೊಂಡಿತ್ತು.

ಸರಕಾರದಿಂದ ಎಲ್‌ಐಸಿಯ ಶೇ. 25 ರಷ್ಟು ಷೇರು ಮಾರಾಟ ಸಾಧ್ಯತೆ, ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌!
ಸದ್ಯ ಜಿಐಸಿಯ ಮಾರುಕಟ್ಟೆ ಮೌಲ್ಯ 21,333 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಇನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯ ಮೌಲ್ಯ 17,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಶೇ.10ರಷ್ಟು ಷೇರುಗಳನ್ನು ಹಿಂತೆಗೆದುಕೊಂಡರೂ ಸರಕಾರಕ್ಕೆ 4,000 ಕೋಟಿ ರೂಪಾಯಿ ಸಂಗ್ರಹವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ