ಆ್ಯಪ್ನಗರ

ಎಸಿ ಕನಿಷ್ಠ ತಾಪಮಾನ 24 ಡಿಗ್ರಿ ಸೆ. ಕಡ್ಡಾಯಕ್ಕೆ ಕೇಂದ್ರ ಚಿಂತನೆ: ವಿದ್ಯುತ್ ಉಳಿತಾಯಕ್ಕೆ ಕ್ರಮ

ಹವಾನಿಯಂತ್ರಣ ವ್ಯವಸ್ಥೆಯಲ್ಲಿ 24 ಡಿಗ್ರಿ ಸೆ. ತಾಪಮಾನವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಸೂಕ್ರ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ.

Vijaya Karnataka Web 23 Jun 2018, 8:09 pm
ಹೊಸದಿಲ್ಲಿ: ಹವಾನಿಯಂತ್ರಣ ವ್ಯವಸ್ಥೆಯಲ್ಲಿ 24 ಡಿಗ್ರಿ ಸೆ. ತಾಪಮಾನವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಸೂಕ್ತ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
Vijaya Karnataka Web ac


ವಿದ್ಯುತ್ ಉಳಿತಾಯ ಮತ್ತು ಆರೋಗ್ಯದ ಹಿತದೃಷ್ಟಿಯಿಂದ 24 ಡಿಗ್ರಿ ಸೆ. ತಾಪಮಾನ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಆ ಸಂಬಂಧ ಇಂಧನ ಸಚಿವ ಆರ್‌. ಕೆ. ಸಿಂಗ್, ಕೆಲವೇ ತಿಂಗಳಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಎಸಿ ತಯಾರಿಕಾ ಕಂಪನಿಗಳು ಕೂಡ ಸಹಮತ ಸೂಚಿಸಿದ್ದು, ಆರೋಗ್ಯ ಮತ್ತು ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಈ ನಿರ್ಧಾರವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಎಸಿ ತಯಾರಿಸುವ ಸಂದರ್ಭದಲ್ಲೇ ಅದರಲ್ಲಿ ಡಿಫಾಲ್ಟ್ ಸೆಟ್ಟಿಂಗ್ ಆಯ್ಕೆಯಡಿ 24 ಡಿಗ್ರಿ ಸೆ. ಇರಿಸುವುದರಿಂದ ಎಸಿ ಬಳಕೆಯಿಂದ ವಿದ್ಯುತ್ ಉಳಿತಾಯ ಸಾಧ್ಯವಾಗಲಿದೆ. ಈ ಬಗ್ಗೆ ಆಂದೋಲನ ರೂಪದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಸಹಿತ ಕೇಂದ್ರ ಸರಕಾರದ ಚಿಂತನೆಯಾಗಿದೆ.

ಪ್ರಸ್ತುತ ಕೆಲವೊಂದು ಮಾಲ್ ಮತ್ತು ಕಚೇರಿಗಳಲ್ಲಿ 18ರಿಂದ 21 ಡಿಗ್ರಿ ಸೆ. ಎಸಿ ತಾಪಮಾನ ಇರಿಸುತ್ತಿದ್ದಾರೆ. ಇದರಿಂದ ಅಧಿಕ ವಿದ್ಯುತ್ ಬಳಕೆ ಮತ್ತು ಮನುಷ್ಯನ ದೇಹದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಎಸಿ ಬಳಕೆಗೆ ಕಡಿವಾಣ ಹಾಕಲು ಸರಕಾರ ಚಿಂತನೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ