ಆ್ಯಪ್ನಗರ

ಪಿಎನ್‌ಬಿ ಹಗರಣ: ಇಬ್ಬರು ನಿರ್ದೇಶಕರು ವಜಾ

ಹಗರಣದ ಬಳಿಕ ಉದ್ಯಮಿ ನೀರವ್‌ ಮೋದಿ ದೇಶದಿಂದ ಪರಾರಿಯಾಗಿದ್ದು, ಪ್ರಕರಣದಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಬ್ಯಾಂಕಿನ ಇಬ್ಬರು ಕಾರ್ಯಕಾರಿ ನಿರ್ದೇಶಕರಾದ ಸಂಜೀವ್‌ ಶರಣ್‌ ಮತ್ತು ಕೆ. ವೀರ ಬ್ರಹ್ಮಾಜಿ ರಾವ್‌ ಅವರನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಮುಂಬಯಿ ಷೇರು ವಿನಿಮಯ ಮಾರುಕಟ್ಟೆ ಕೇಂದ್ರಕ್ಕೆ ಬ್ಯಾಂಕ್‌ ಮಾಹಿತಿ ನೀಡಿದೆ.

PTI 20 Jan 2019, 10:59 am

ಹೈಲೈಟ್ಸ್‌:

  • ವಜಾಗೊಂಡಿರುವ ಇಬ್ಬರು ಅಧಿಕಾರಿಗಳೂ ಈ ವರ್ಷ ನಿವೃತ್ತರಾಗುವವರು.
  • ಕಾರ್ಯಕಾರಿ ನಿರ್ದೇಶಕತ್ವದ ಅವಧಿಯಲ್ಲಿ ಸಾಲ ನೀಡಿಕೆ ಮೇಲೆ ಸಮರ್ಪಕ ನಿಯಂತ್ರಣ ಇರಿಸದಿರುವುದೇ ವಜಾಕ್ಕೆ ಕಾರಣ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಚೆನ್ನೈ: 14,000 ಕೋಟಿ ರೂ. ಮೊತ್ತದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿಯ ಇಬ್ಬರು ಕಾರ್ಯಕಾರಿ ನಿರ್ದೇಶಕರನ್ನು ಕೇಂದ್ರ ಸರಕಾರ ವಜಾ ಮಾಡಿದೆ.
ಹಗರಣದ ಬಳಿಕ ಉದ್ಯಮಿ ನೀರವ್‌ ಮೋದಿ ದೇಶದಿಂದ ಪರಾರಿಯಾಗಿದ್ದು, ಪ್ರಕರಣದಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಬ್ಯಾಂಕಿನ ಇಬ್ಬರು ಕಾರ್ಯಕಾರಿ ನಿರ್ದೇಶಕರಾದ ಸಂಜೀವ್‌ ಶರಣ್‌ ಮತ್ತು ಕೆ. ವೀರ ಬ್ರಹ್ಮಾಜಿ ರಾವ್‌ ಅವರನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಮುಂಬಯಿ ಷೇರು ವಿನಿಮಯ ಮಾರುಕಟ್ಟೆ ಕೇಂದ್ರಕ್ಕೆ ಬ್ಯಾಂಕ್‌ ಮಾಹಿತಿ ನೀಡಿದೆ.

ನಿರ್ದೇಶಕರನ್ನು ವಜಾಗೊಳಿಸಿದ ಸರಕಾರದ ನಿರ್ಧಾರವನ್ನು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ(ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಾಚಲಂ ಸ್ವಾಗತಿಸಿದ್ದಾರೆ. ''ಈ ಮೊದಲು ವಂಚನೆ ಪ್ರಕರಣದಲ್ಲಿ ಕಿರಿಯ ಅಧಿಕಾರಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡಲಾಗುತ್ತಿತ್ತು,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ