ಆ್ಯಪ್ನಗರ

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಯತ್ನ: ಪ್ರಧಾನಿ

ರೈತರಿಗೆ ಕನಿಷ್ಠ ಒಂದೂವರೆ ಪಟ್ಟು ಬೆಂಬಲ ಬೆಲೆ ಸಿಗುವಂತಾಗಲು ರಾಜ್ಯಗಳ ಜತೆ ಕೇಂದ್ರ ಸರಕಾರವು ಕೆಲಸ ಮಾಡುತ್ತಿದೆ...

Vijaya Karnataka Web 18 Mar 2018, 5:00 am

ಹೊಸದಿಲ್ಲಿ: ರೈತರಿಗೆ ಕನಿಷ್ಠ ಒಂದೂವರೆ ಪಟ್ಟು ಬೆಂಬಲ ಬೆಲೆ ಸಿಗುವಂತಾಗಲು ರಾಜ್ಯಗಳ ಜತೆ ಕೇಂದ್ರ ಸರಕಾರವು ಕೆಲಸ ಮಾಡುತ್ತಿದೆ. ಇದರಿಂದ ರೈತರ ವರಮಾನ ಏರಿಕೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಕೃಷಿ ಉನ್ನತಿ ಮೇಳ ಉದ್ದೇಶಿಸಿ ಮಾತನಾಡಿದ ಅವರು, ''ಬೆಂಬಲ ಬೆಲೆ ಕುರಿತು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ನಾನಾ ಬೆಳೆಗಳಿಗೆ ಸಂಬಂಧಿಸಿದಂತೆ ಉತ್ಪಾದನೆಯ ಎಲ್ಲ ವೆಚ್ಚಗಳನ್ನೂ ಲೆಕ್ಕ ಹಾಕಿ ಒಂದೂವರೆ ಪಟ್ಟು ಬೆಂಬಲ ಬೆಲೆ ಸಿಗುವಂತೆ ಮಾಡಲು ಸರಕಾರ ಕಾರ್ಯೋನ್ಮುಖವಾಗಿದೆ. ಇದರಿಂದ 2020ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ,'' ಎಂದರು.

''ಎಣ್ಣೆಕಾಳುಗಳನ್ನು ಹೆಚ್ಚು ಹೆಚ್ಚು ಬೆಳೆಯುವ ಮೂಲಕ ರೈತರು, ಖಾದ್ಯ ತೈಲದ ಕೊರತೆ ನೀಗಿಸಬೇಕು. ವಿದೇಶಗಳ ಮೇಲಿನ ದೇಶದ ಅವಲಂಬನೆಯನ್ನು ತಪ್ಪಿಸಬೇಕು,'' ಎಂದು ಪ್ರಧಾನಿ ಹೇಳಿದರು. ಜತೆಗೆ, 2022ರ ಹೊತ್ತಿಗೆ ಯೂರಿಯಾ ಬಳಕೆಯನ್ನು ಶೇ.50ರಷ್ಟು ತಗ್ಗಿಸಬೇಕು ಎಂದೂ ಮನವಿ ಮಾಡಿದರು. ''ಬೆಳೆಯ ಅವಶೇಷಗಳನ್ನು ರೈತರು ಸುಡಬಾರದು. ಇದರಿಂದ ಭೂಮಿ ಫಲವತ್ತತೆ ಕುಸಿಯುವುದಲ್ಲದೇ, ವಾಯು ಮಾಲಿನ್ಯವೂ ಹೆಚ್ಚುತ್ತದೆ,'' ಎಂದು ಕಿವಿಮಾತು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ