ಆ್ಯಪ್ನಗರ

ರಜೆ ಮೇಲೆ ತೆರಳಿದ ಚಂದಾ; ಐಸಿಐಸಿಐ ನೂತನ ಸಾರಥಿ ಸಂದೀಪ್ ಬಕ್ಷಿ

ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಅವರು ರಜೆಯ ಮೇಲೆ ತೆರಳಿದ್ದು, ಹಂಗಾಮಿ ಸಿಒಒ ಆಗಿ 5 ವರ್ಷಗಳ ಅವಧಿಗೆ ಸಂದೀಪ್ ಬಕ್ಷಿ ಅವರನ್ನು ನೇಮಕ ಮಾಡಲಾಗಿದೆ.

Vijaya Karnataka Web 19 Jun 2018, 11:05 am
ಮುಂಬಯಿ: ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಅವರು ರಜೆಯ ಮೇಲೆ ತೆರಳಿದ್ದು, ಹಂಗಾಮಿ ಸಿಒಒ ಆಗಿ 5 ವರ್ಷಗಳ ಅವಧಿಗೆ ಸಂದೀಪ್ ಬಕ್ಷಿ ಅವರನ್ನು ನೇಮಕ ಮಾಡಲಾಗಿದೆ.
Vijaya Karnataka Web chanda-kocchar


ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆ ಎದುರಿಸುತ್ತಿರುವ ಚಂದಾ ಕೊಚ್ಚಾರ್, ತನಿಖೆ ಪೂರ್ಣವಾಗುವ ತನಕ ರಜೆಯ ಮೇಲೆ ತೆರಳಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕ್‍ನ ಎಲ್ಲ ಜವಾಬ್ದಾರಿಗಳನ್ನು ಬಕ್ಷಿ ನಿರ್ವಹಿಸಲಿದ್ದಾರೆ.

ಬಕ್ಷಿ 1986ರಲ್ಲಿ ಐಸಿಐಸಿ ಬ್ಯಾಂಕ್‍ಗೆ ಸೇರ್ಪಡೆಯಾಗಿದ್ದರು. ಬ್ಯಾಂಕ್‍ನ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವ ಅವರಿಗಿದೆ. 2010ರಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪನಿಯ ಸಿಇಒ ಆಗಿದ್ದರು.

ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣ ವರು ಚಂದಾ ಕೊಚ್ಚಾರ್ ವಿರುದ್ಧದ ಅರೋಪಗಳ ಬಗ್ಗೆ ತನಿಖೆಯ ನೇತೃತ್ವ ವಹಿಸಲಿದ್ದಾರೆ. 2012ರಲ್ಲಿ ವಿಡಿಯೊಕಾನ್‌ಗೆ ಬ್ಯಾಂಕ್‌ ನೀಡಿರುವ ಬೃಹತ್‌ ಸಾಲವು ಎನ್‌ಪಿಎ (ವಸೂಲಾಗದ ಸಾಲ) ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ಸಾಲ ನೀಡಿಕೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿದ್ದಾರಾ, ನಿಯಾಮವಳಿಗಳನ್ನು ಗಾಳಿಗೆ ತೂರಲಾಗಿದೆಯಾ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಲು ಇತ್ತೀಚೆಗೆ ಜಸ್ಟೀಸ್ ಶ್ರೀಕೃಷ್ಣ ಸಮಿತಿಯನ್ನು ರಚಿಸಿತ್ತು. ಈ ಎಲ್ಲಾ ಪ್ರಸ್ತಾವನೆಗಳ ಮೇಲೆ ಮಂಡಳಿ ಇಂದು ನಿರ್ಧಾರ ತೆಗೆದುಕೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ