ಆ್ಯಪ್ನಗರ

ಭಾರತದ ಎಫ್‌ಡಿಐ ನೀತಿ ಬದಲಾವಣೆಗೆ ಚೀನಾ ಕ್ಯಾತೆ: ನೀತಿ, ನಿಯಮ ಮಾತನಾಡಿದ ಡ್ರ್ಯಾಗನ್!

ಭಾರತ ತನ್ನ ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ತಂದಿರುವ ಹೊಸ ಬದಲಾವಣೆಗಳನ್ನು ಚೀನಾ ವಿರೋಧಿಸಿದೆ. ಭಾರತದ ಈ ನಡೆ ಮುಕ್ತ ವ್ಯಾಪಾರದ ಆಶಯಗಳನ್ನು ಗಾಳಿಗೆ ತೂರುತ್ತದೆ ಎಂದು ಚೀನಾ ಗಂಭೀರ ಆರೋಪ ಮಾಡಿದೆ.

Vijaya Karnataka Web 20 Apr 2020, 5:16 pm
ನವದೆಹಲಿ: ವಿದೇಶಿ ಹೂಡಿಕೆ ನಿಯಮದಲ್ಲಿ ಬದಲಾವಣೆ ತಂದ ಭಾರತದ ನಿರ್ಣಯವನ್ನು ಚೀನಾ ವಿರೋಧಿಸಿದ್ದು, ಇದು ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾದ ನಡೆ ಎಂದು ಟೀಕಿಸಿದೆ.

ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಸೂಚಿಸಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳಿಗೆ ವಿರುದ್ಧವಾಗಿವೆ ಎಂದು ಚೀನಾ ಹೇಳಿದೆ. ಅಲ್ಲದೇ ಇದು ಮುಕ್ತ ವ್ಯಾಪಾರದ ಆಶಯಗಳನ್ನು ಗಾಳಿಗೆ ತೂರುತ್ತದೆ ಎಂದೂ ಕಿಡಿಕಾರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ರಾಯಭಾರ ಕಚೇರಿಯ ವಕ್ತಾರ ಜೀ ರಾಂಗ್, ಭಾರತ ತನ್ನ ಎಫ್‌ಡಿಐಆ ನೀತಿಯಲ್ಲಿ ಮಾಡಿಕೊಂಡ ಬದಲಾವಣೆಗಳು ನ್ಯಾಯಸಮ್ಮತವಾಗಿಲ್ಲ ಎಂದು ಟೀಕಿಸಿದ್ದಾರೆ.

ಭಾರತದ ಈ ನಿರ್ಧಾರ ಹೆಚ್ಚುವರಿ ಅಡೆತಡೆಗಳನ್ನು ಸೃಷ್ಟಿಸಿದ್ದು, ಇದು G-20 ನಿರ್ಣಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ವಿದೇಶಿ ಹೂಡಿಕೆ ನಿಯಮ ಬಿಗಿ, ಚೀನಾ ಬಂಡವಾಳಕ್ಕೆ ಭಾರತದ ಮೂಗುದಾರ

ಕೊರೊನಾ ವೈರಸ್ ಹರಡುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು ವಿದೇಶಿ ಹೂಡಿಕೆಗಳಿಗೆ ಅನುಮತಿ ಪಡೆಯುವುದುನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ