ಆ್ಯಪ್ನಗರ

ಚೀನಾದ ಆರ್ಥಿಕ ಬೆಳವಣಿಗೆ ಶೇ.6.8

ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯು ಶೇ68ಕ್ಕೆ ವೃದ್ಧಿಸಿದೆ...

PTI 18 Apr 2018, 5:00 am
ಬೀಜಿಂಗ್‌: ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯು ಶೇ.6.8ಕ್ಕೆ ವೃದ್ಧಿಸಿದೆ. ಹಣಕಾಸಿನ ತೊಡಕುಗಳು, ಮಾಲೀನ್ಯದ ಸಮಸ್ಯೆಗಳು, ಅಮೆರಿಕದೊಂದಿಗಿನ ವಾಣಿಜ್ಯ ತಿಕ್ಕಾಟ ಸೇರಿದಂತೆ ನಾನಾ ಸಮಸ್ಯೆಗಳನ್ನು ಮೀರಿ, ಚೀನಾ ಆರ್ಥಿಕತೆಯು ನಿರೀಕ್ಷೆಗಿಂತಲೂ ಹೆಚ್ಚಿನದಾಗಿ ಚೇತರಿಕೆ ಕಂಡಿದೆ.
Vijaya Karnataka Web china posts better than expected 6 8 growth in q1
ಚೀನಾದ ಆರ್ಥಿಕ ಬೆಳವಣಿಗೆ ಶೇ.6.8


ವಿಶ್ವದ ನಂ.2 ಆರ್ಥಿಕತೆಯ ಚೀನಾ ದೇಶವು ಮೊದಲ ತ್ರೈಮಾಸಿಕದಲ್ಲಿ ಶೇ.6.7ರ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ವಿತ್ತ ವಿಶ್ಲೇಷಕರು ಅಂದಾಜು ಮಾಡಿದ್ದರು. ಅದನ್ನು ಮೀರಿ ಬೆಳವಣಿಗೆ ದಾಖಲಾಗಿದೆ. ''ದೇಶದ ಆರ್ಥಿಕತೆಯು ಸ್ಥಿರತೆ ಕಾಯ್ದುಕೊಳ್ಳಲಿದೆ. ತ್ವರಿತವಾಗಿ ಚೇತರಿಕೆ ಕಾಣುತ್ತಿದೆ. ಮೊದಲ ತ್ರೈಮಾಸಿಕವು ಆಶಾದಾಯಕವಾಗಿ ಆರಂಭಗೊಂಡಿದೆ,'' ಎಂದು ರಾಷ್ಟ್ರೀಯ ಅಂಕಿಅಂಶಗಳ ಸಂಸ್ಥೆಯ ವಕ್ತಾರ ಕ್ಸಿಂಗ್‌ ಜಿಯಾಂಗ್‌ ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ತಿಕ್ಕಾಟಗಳು ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುತ್ತಿವೆ. ನೂರಾರು ಸರಕುಗಳಿಗೆ ಪರಸ್ಪರ ಆಮದು ಸುಂಕಗಳನ್ನು ಹೆಚ್ಚಿಸುತ್ತಿದ್ದು, ಎಚ್ಚರಿಕೆ ಸಂದೇಶಗಳು ರವಾನೆಯಾಗಿವೆ. ಈ ಎಲ್ಲದರ ಪ್ರಭಾವವು ಮುಂದಿನ ತ್ರೈಮಾಸಿಕದಲ್ಲಿ ಸ್ಪಷ್ಟವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ