ಆ್ಯಪ್ನಗರ

ದಿವಾಳಿಯಂಚಿಗೆ ಚೀನಾದ ರಿಯಾಲ್ಟಿ ದಿಗ್ಗಜ ಎವರ್‌ಗ್ರ್ಯಾಂಡ್‌! ಜಾಗತಿಕ ಆರ್ಥಿಕತೆ ತಲ್ಲಣ

ಚೀನಾದ ಎರಡನೇ ಅತಿ ದೊಡ್ಡ ರಿಯಾಲ್ಟಿ ಕಂಪನಿ ಎವರ್‌ಗ್ರ್ಯಾಂಡ್‌ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ದಿವಾಳಿಯ ಅಂಚಿಗೆ ಕುಸಿದಿದೆ. ಒಂದು ವೇಳೆ ಈ ಕಂಪನಿ ದಿವಾಳಿ ಎಂದು ಘೋಷಣೆಯಾದರೆ ಅಮೆರಿಕದಲ್ಲಿ 2008ರಲ್ಲಿ ಸಂಭವಿಸಿದ ಆರ್ಥಿಕತೆ ಅಸ್ಥಿರಗೊಳ್ಳಲಿದೆ.

Vijaya Karnataka 19 Sep 2021, 5:00 pm
ಬೀಜಿಂಗ್‌: ಚೀನಾದ ಎರಡನೇ ಅತಿ ದೊಡ್ಡ ರಿಯಾಲ್ಟಿ ಕಂಪನಿ ಎವರ್‌ಗ್ರ್ಯಾಂಡ್‌ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ದಿವಾಳಿಯ ಅಂಚಿಗೆ ಕುಸಿದಿದೆ. ಒಂದು ವೇಳೆ ಈ ಕಂಪನಿ ದಿವಾಳಿ ಎಂದು ಘೋಷಣೆಯಾದರೆ ಅಮೆರಿಕದಲ್ಲಿ 2008ರಲ್ಲಿ ಸಂಭವಿಸಿದ ಲೆಹ್ಮನ್‌ ಬ್ರದರ್ಸ್ ಹೋಲ್ಡಿಂಗ್ಸ್‌ ಹಣಕಾಸು ಸಂಸ್ಥೆಯ ಪತನದ ಮಾದರಿಯಲ್ಲಿ ಆರ್ಥಿಕತೆ ಅಲ್ಲೋಲ-ಕಲ್ಲೋಲವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
Vijaya Karnataka Web Evergrande


ಅಮೆರಿಕದ 4ನೇ ಅತಿ ದೊಡ್ಡ ಬ್ಯಾಂಕ್‌ ಆಗಿದ್ದ ಲೆಹ್ಮನ್‌ ಬ್ರದರ್ಸ್ ಪತನದ ನಂತರ ಜಾಗತಿಕ ಆರ್ಥಿಕ ಹಿಂಜರಿತವೇ ಸಂಭವಿಸಿತ್ತು. ಚೀನಾದ ಈ ರಿಯಾಲ್ಟಿ ಕಂಪನಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿ ಮನೆ ಖರೀದಿಸುವ ಸಲುವಾಗಿ ತಮ್ಮ ಠೇವಣಿಗಳನ್ನು ಇಟ್ಟಿದ್ದಾರೆ. ಆದರೆ ಅವರಿಗೆ ಇನ್ನೂ ಮನೆಗಳು ಲಭಿಸಿಲ್ಲ. ಮತ್ತೊಂದು ಕಡೆ ಸಂಸ್ಥೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಗ್ರಾಹಕರು ತೀವ್ರ ಆತಂಕಕ್ಕೀಡಾಗಿದ್ದು, ತಮ್ಮ ಠೇವಣಿಯನ್ನು ಹಿಂತಿರುಗಿಸುವಂತೆ ಮುಗಿಬಿದ್ದಿದ್ದಾರೆ.

ಅಮೆರಿಕ, ಚೀನಾದಂತೆ 2047ಕ್ಕೆ ಭಾರತವೂ ಶ್ರೀಮಂತವಾಗಲಿದೆ: ಮುಕೇಶ್‌ ಅಂಬಾನಿ

ರಿಯಾಲ್ಟಿ ಕಂಪನಿಯ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನಾ ಕಾರರಲ್ಲಿ ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಭಾರೀ ಸಾಲ ಹೊಂದಿರುವ ಎವರ್‌ಗ್ರ್ಯಾಂಡ್‌, ಸಾಲವನ್ನು ತೀರಿಸಲು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.

ಹೀಗಾಗಿ ಇದರಲ್ಲಿ ಹೂಡಿಕೆ ಮಾಡಿರುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 1997ರಲ್ಲಿ ಸ್ಥಾಪನೆಯಾಗಿದ್ದ ಎವರ್‌ಗ್ರ್ಯಾಂಡ್‌ ಇದುವರೆಗೆ 1,300 ವಾಣಿಜ್ಯ, ವಸತಿ, ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಒಳ-ಗೊಂಡಿದೆ. ಆಹಾರ, ಜೀವ ವಿಮೆ, ಟಿವಿ. ಸಿನಿಮಾ, ಮನರಂಜನೆ ಉದ್ದಿಮೆಗೂ ಕಂಪನಿ ವಿಸ್ತರಿಸಿತ್ತು.

ಚೀನಾ- ಭಾರತ ವ್ಯಾಪಾರ ಈ ವರ್ಷದ ಮೊದಲಾರ್ಧದಲ್ಲಿ ಶೇ. 62.7ರಷ್ಟು ವೃದ್ಧಿ!

ತಾಲಿಬಾನ್‌ಗೆ ಚೀನಾ ನೆರವು
ಕಾಬೂಲ್‌:
ತಾಲಿಬಾನ್‌ ಸರಕಾರಕ್ಕೆ ಮಾನ್ಯತೆ ನೀಡುವ ಕುರಿತು ಬಹುತೇಕ ರಾಷ್ಟ್ರಗಳು ಹಿಂದೇಟು ಹಾಕಿರುವಾಗಲೇ ಚೀನಾ ಮಾತ್ರ ಅಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಲಿಬಾನ್‌ಗೆ 31 ದಶಲಕ್ಷ ಡಾಲರ್‌ ( 230 ಕೋಟಿ) ನೆರವು ಪ್ರಕಟಿಸಿದೆ. ಇದರಲ್ಲಿ ಆಹಾರ ಪದಾರ್ಥ ಪೂರೈಕೆ, ಚಳಿಗಾಲಕ್ಕೆ ವಸ್ತ್ರ ಹಾಗೂ ಹೊದಿಕೆಗಳ ಪೂರೈಕೆ, ಕೊರೊನಾ ನಿರೋಧಕ ಲಸಿಕೆ ಸರಬರಾಜು ಸೇರಿದೆ. ತಾಲಿಬಾನ್‌ ಸರಕಾರ ರಚನೆಯಾದ ಬಳಿಕ ನೆರವು ಘೋಷಿಸಿದ ಮೊದಲ ರಾಷ್ಟ್ರ ಚೀನಾ. ತಾಲಿಬಾನ್‌ ಸಹ,''ಚೀನಾ ನಮ್ಮ ಮಹತ್ವದ ಪಾಲುದಾರ,'' ಎಂದು ಕೆಲದಿನಗಳ ಹಿಂದೆ ಹೇಳಿದೆ.

ಪಂಜ್‌ಶೀರ್‌ನಲ್ಲಿ ಇನ್ನೂ ಉಳಿದ ಪ್ರತಿರೋಧ
ತಾಲಿಬಾನಿ ನೂತನ ಸರಕಾರಕ್ಕೆ ತಲೆನೋವಾಗಿರುವ ಪಂಜ್‌ಶೀರ್‌ ಕಣಿವೆ ಪ್ರತಿರೋಧ ಮರಳಿ ಮಾರ್ದನಿಸಿದೆ. ''ತಾಲಿಬಾನಿ ಸರಕಾರಕ್ಕೆ ಆಫ್ಘಾನ್ನರ ಮಾನ್ಯತೆ ಇಲ್ಲ. ವಿಶ್ವ ಮಾನ್ಯತೆಯೂ ಪಡೆದಿಲ್ಲ. ಅದನ್ನು ನಾವು ಕೂಡ ಒಪ್ಪುವುದಿಲ್ಲ. ನಮ್ಮದೇ ಇಲ್ಲಿಅಧಿಕೃತ ಆಡಳಿತ. ಶೀಘ್ರದಲ್ಲಿಯೇ ನಾವು ಪರ್ಯಾಯ ಸರಕಾರ ಘೋಷಣೆ ಮಾಡುತ್ತೇವೆ.

ಈ ದಿಸೆಯಲ್ಲಿ ರಾಜಕಾರಣಿಗಳ ಜತೆ ಚರ್ಚೆ ನಡೆಸಿದ್ದೇವೆ,'' ಎಂದು ಆಫ್ಘಾನ್‌ನ ರಾಷ್ಟ್ರೀಯ ಪ್ರತಿರೋಧ ಪಡೆ (ಎನ್‌ಆರ್‌ಎಫ್‌) ಸಹ ನಾಯಕ ಅಹ್ಮದ್‌ ಮಸೂದ್‌ ಬುಧವಾರ ತಿಳಿಸಿದ್ದಾರೆ. ಧ್ವನಿ ಮುದ್ರಿಕೆಯ ಸಂದೇಶ ಹೊರಡಿಸಿರುವ ಮಸೂದ್‌, ತಾಲಿಬಾನಿಗಳ ಜತೆ ಸಹಕರಿಸದಿರುವಂತೆ ವಿಶ್ವಸಂಸ್ಥೆ, ಯುಎನ್‌ಎಚ್‌ಆರ್‌ಸಿ, ಶಾಂಘೈ ಒಕ್ಕೂಟ, ಸಾರ್ಕ್ ಮತ್ತು ಇಸ್ಲಾಮಿಕ್‌ ಸಹಕಾರ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ