ಆ್ಯಪ್ನಗರ

ಗುಜರಾತ್‌ನಲ್ಲಿನ ಪೇದೆಗಳ ಗುಂಪಿನಲ್ಲಿ ಟೆಕ್ಕಿಗಳು, ಎಂಜಿನಿಯರ್‌ಗಳು!

2017ರಲ್ಲಿ ನೇಮಕ ಮಾಡಲಾದ ಕಾನ್ಸ್‌ಟೇಬಲ್‌ಗಳಲ್ಲಿ ಸುಮಾರು 1,000 ಮಂದಿ ನಾನಾ ಪದವೀಧರರೇ ಇದ್ದಾರೆ.

TNN 18 Apr 2018, 5:00 am
ಅಹಮದಾಬಾದ್‌: ಹರೇಶ್‌ ವಿಠ್ಠಲ್‌ ಅವರನ್ನು ನವರಂಗ್‌ಪುರ ಪೊಲೀಸ್‌ ಠಾಣೆಗೆ ಇತ್ತೀಚೆಗೆ ನಿಯೋಜಿಸಲಾಗಿದೆ. ಅವರು ಎಂಬಿಎ ಪದವೀಧರರು! ಅವರಂತೆಯೇ ಇಲ್ಲಿಗೆ ನಿಯೋಜನೆಗೊಂಡಿರುವ ಪೇದೆಗಳು ಸಾಮಾನ್ಯರಲ್ಲ, ಅವರು ಮ್ಯಾನೇಜ್‌ಮೆಂಟ್‌ ಪದವೀಧರರು!
Vijaya Karnataka Web constables in gujarat are engineers mbas and techies
ಗುಜರಾತ್‌ನಲ್ಲಿನ ಪೇದೆಗಳ ಗುಂಪಿನಲ್ಲಿ ಟೆಕ್ಕಿಗಳು, ಎಂಜಿನಿಯರ್‌ಗಳು!


ಈ ಪೊಲೀಸ್‌ ಠಾಣೆಯಲ್ಲಿ ಇತರೆ ಐವರು ಪೇದೆಗಳಿದ್ದು, ಅವರು ಬಿಸಿಎ, ಬಿಎ, ಬಿ.ಇಡಿ, ಪಿಜಿಡಿಸಿಎ ಮತ್ತು ಎಂ.ಎಸ್ಸಿ ಪದವೀಧರರು. ಗುಜರಾತ್‌ ಪೊಲೀಸ್‌ ಇಲಾಖೆಯ ಅಂಕಿಅಂಶಗಳನ್ನು ನೋಡಿದರೆ, 2017ರಲ್ಲಿ ನೇಮಕ ಮಾಡಲಾದ ಕಾನ್ಸ್‌ಟೇಬಲ್‌ಗಳಲ್ಲಿ ಸುಮಾರು 1,000 ಮಂದಿ ನಾನಾ ಪದವೀಧರರೇ ಇದ್ದಾರೆ. ವಿಪರ್ಯಾಸವೆಂದರೆ, ಈ ಕ್ಲಾಸ್‌-3 ಹುದ್ದೆಗೆ 12ನೇ ತರಗತಿಯ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.

ಪೊಲೀಸ್‌, ಜೈಲು ಸಿಪಾಯಿ ಹುದ್ದೆಗಳಿಗೆ ನೇಮಕಾತಿ ನಡೆಸುವ ಎಲ್‌ಆರ್‌ಡಿ ಮುಖ್ಯಸ್ಥ ಜಿ.ಎಸ್‌.ಮಲ್ಲಿಕ್‌ ಪ್ರಕಾರ, 2017ರಲ್ಲಿ ನೇಮಕಗೊಂಡ 17,532 ಪೇದೆಗಳಲ್ಲಿ ಶೇ.50ರಷ್ಟು ಮಂದಿ ಪದವಿ ಅಥವಾ ಸ್ನಾತಕೋತರ ಪದವಿ ಇಲ್ಲವೇ ನಿಗದಿಗಿಂತಲೂ ಹೆಚ್ಚಿನ ಪದವಿ ಪಡೆದವರೇ ಇದ್ದಾರೆ.

''ಖಾಸಗಿ ವಲಯಗಳಲ್ಲಿ ಉದ್ಯೋಗ ಖಾತ್ರಿ ಇಲ್ಲ. ಹೀಗಾಗಿ, ತಮ್ಮ ವಿದ್ಯಾರ್ಹತೆಗಿಂತಲೂ ಕಡಿಮೆ ದರ್ಜೆಯ ಸರಕಾರಿ ಕೆಲಸ ಸಿಕ್ಕಿದರೂ ಮಾಡಲು ಯುವಕರು ಸಿದ್ಧರಾಗಿದ್ದಾರೆ,'' ಎಂದು ಗುಜರಾತ್‌ ವಿವಿಯ ಪ್ರೊಫೆಸರ್‌ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ