ಆ್ಯಪ್ನಗರ

ಎಲೆಕ್ಟ್ರಾನಿಕ್ಸ್‌ ಉದ್ಯಮಕ್ಕೆ 'ಕೊರೊನಾ' ಪೆಟ್ಟು: ಭಾರತಕ್ಕೆ ಲಗ್ಗೆ ಇಡಲಿವೆ ಚೀನಾ ಕಂಪನಿಗಳು

ಚೀನಾದಲ್ಲಿ ಕೊರೊನಾ ವೈರಸ್‌ ದಾಳಿಯ ಪರಿಣಾಮ ರಾಜ್ಯದ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ವಲಯದ ಮೇಲೆ ಭಾರಿ ಹೊಡೆತ ಬಿದ್ದಿದೆ.

Vijaya Karnataka Web 15 Feb 2020, 10:12 am
ಚೀನಾದಲ್ಲಿ ಕೊರೊನಾ ವೈರಸ್‌ ದಾಳಿಯ ಪರಿಣಾಮ ರಾಜ್ಯದ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ವಲಯದ ಮೇಲೆ ಭಾರಿ ಹೊಡೆತ ಬಿದ್ದಿದೆ. ಇನ್ನೆರಡು -ಮೂರು ತಿಂಗಳು ಚೀನಾದಿಂದ ಬಿಡಿಭಾಗಗಳ ಪೂರೈಕೆ ಸ್ಥಗಿತವಾದರೆ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದೇ ವೇಳೆ ಚೀನಾದಲ್ಲಿ ಕೊರೊನಾ ವೈರಸ್‌ ದಾಳಿಯ ಬೆನ್ನಲ್ಲೇ ಅಲ್ಲಿನ ನೂರಾರು ಕಂಪನಿಗಳು ಭಾರತಕ್ಕೆ, ಮುಖ್ಯವಾಗಿ ಕರ್ನಾಟಕಕ್ಕೆ ಸ್ಥಳಾಂತರವಾಗಲು ಉತ್ಸುಕವಾಗಿವೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web coronavirus disrupts the heart of electronics manufacturing in china
ಎಲೆಕ್ಟ್ರಾನಿಕ್ಸ್‌ ಉದ್ಯಮಕ್ಕೆ 'ಕೊರೊನಾ' ಪೆಟ್ಟು: ಭಾರತಕ್ಕೆ ಲಗ್ಗೆ ಇಡಲಿವೆ ಚೀನಾ ಕಂಪನಿಗಳು



ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ

'ಕಳೆದ ಕೆಲ ವರ್ಷಗಳಿಂದ ಚೀನಾ ಮೂಲದ ಕಂಪನಿಗಳೂ ಭಾರತ ಮತ್ತು ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ವಹಿಸುತ್ತಿವೆ. ಇಲ್ಲಿಉತ್ಪಾದನಾ ಘಟಕಗಳನ್ನು ತೆರೆಯಲು ಬಯಸುತ್ತಿವೆ. ಕೊರೊನಾ ವೈರಸ್‌ ದಾಳಿಯ ನಂತರ ಚೀನಾದಿಂದ ಇಲ್ಲಿಗೆ ಬರಲು ಉದ್ದೇಶಿಸುವ ಕಂಪನಿಗಳ ಸಂಖ್ಯೆ ಮತ್ತು ಪ್ರಕ್ರಿಯೆ ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ'' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಕಾರ್ಯದರ್ಶಿ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ಚೀನಾ ಅವಲಂಬಿತ ಉದ್ದಿಮೆಗಳಿಗೆ ಕಷ್ಟ

ಭಾರತದ ಕಂಪನಿಗಳು ಬಿಡಿಭಾಗಗಳಿಗೆ ಚೀನಾವನ್ನು ಅವಲಂಬಿಸಿರುವುದು ಸಾಮಾನ್ಯ. ಅಂಥ ಕಂಪನಿಗಳಿಗೆ ಮುಂಬರುವ ತಿಂಗಳುಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿ ಉತ್ಪಾದನೆ ಚಟುವಟಿಕೆಗಳಿಗೆ ಅಡಚಣೆ ಉಂಟಾಗುವ ಸಂಭವ ಇದೆ ಎನ್ನುತ್ತಾರೆ ಗೌರವ್‌ ಗುಪ್ತಾ.

ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ಭಾರಿ ಪೆಟ್ಟು

ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಬಿಡಿಭಾಗಗಳನ್ನು ದಾಸ್ತಾನು ಮಾಡಿಡುವ ಪರಿಪಾಠ ಕಡಿಮೆ. ಆದ್ದರಿಂದ ಈ ವಲಯದಲ್ಲಿಎಲ್ಲಕ್ಕಿಂತ ಹೆಚ್ಚಿನ ಸಮಸ್ಯೆ ತಟ್ಟಬಹುದು. ಈಗಾಗಲೇ ಎಲೆಕ್ಟ್ರಾನಿಕ್ಸ್‌ ಉದ್ಯಮಿಗಳು ತೀವ್ರ ಬವಣೆ ಎದುರಿಸುತ್ತಿದ್ದಾರೆ ಎಂದು ಅಸೊಚೆಮ್‌ ಕರ್ನಾಟಕ ಘಟಕದ ಅಧ್ಯಕ್ಷ ಎಸ್‌.ಸಂಪತ್‌ ರಾಮನ್‌ ತಿಳಿಸಿದ್ದಾರೆ. ಹೀಗಿದ್ದರೂ, ಚೀನಾ ಮೂಲದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಕೈಜೋಡಿಸಬೇಕು. ಸಹಕಾರ ಒಕ್ಕೂಟ ವ್ಯವಸ್ಥೆಯ ನೀತಿಯನ್ನು ಅನುಸರಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎನ್ನುತ್ತಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ