ಆ್ಯಪ್ನಗರ

ಕೊರೊನಾ ಪರಿಣಾಮ, ಬ್ಯಾಂಕ್‌ ಸಾಲ ವಿತರಣೆ ಇಳಿಕೆ, ಠೇವಣಿ ಏರಿಕೆ

​​ಕಳೆದ ವರ್ಷ ಇದೇ ಅವಧಿಯಲ್ಲಿ ಸಾಲ ವಿತರಣೆ ಶೇ. 10.1ರಷ್ಟು ಹೆಚ್ಚಳವಾಗಿತ್ತು. ಆದರೆ ಈ ಬಾರಿ ಕೋವಿಡ್‌-19 ಬಿಕ್ಕಟ್ಟು, ಲಾಕ್‌ ಡೌನ್‌, ಅನಿಶ್ಚಿತತೆ ಹಿನ್ನೆಲೆಯಲ್ಲಿ ಜನತೆ ಖರ್ಚು ವೆಚ್ಚಗಳನ್ನು ಮುಂದೂಡಿಕೆ ಮಾಡಿದ್ದು, ಉಳಿತಾಯಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.

ಮಹಾರಾಷ್ಟ್ರ ಟೈಮ್ಸ್ 26 Nov 2020, 9:40 am
ಹೊಸದಿಲ್ಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ಸಾಲದ ವಿತರಣೆಯ ಪ್ರಮಾಣ ಶೇ.5.8ರಷ್ಟು ಇಳಿಕೆಯಾಗಿದೆ. ಹೀಗಿದ್ದರೂ ಬ್ಯಾಂಕ್‌ಗಳಲ್ಲಿ ಸೆಪ್ಟೆಂಬರ್‌ನಲ್ಲಿ ಒಟ್ಟು ಠೇವಣಿ ಸಂಗ್ರಹದಲ್ಲಿ ಮಾತ್ರ ಶೇ. 11 ರಷ್ಟು ಏರಿಕೆಯಾಗಿದೆ.
Vijaya Karnataka Web loan


ಕಳೆದ ವರ್ಷ ಇದೇ ಅವಧಿಯಲ್ಲಿ ಸಾಲ ವಿತರಣೆ ಶೇ. 10.1ರಷ್ಟು ಹೆಚ್ಚಳವಾಗಿತ್ತು. ಕೋವಿಡ್‌-19 ಬಿಕ್ಕಟ್ಟು, ಲಾಕ್‌ ಡೌನ್‌, ಅನಿಶ್ಚಿತತೆ ಹಿನ್ನೆಲೆಯಲ್ಲಿ ಜನತೆ ಖರ್ಚು ವೆಚ್ಚಗಳನ್ನು ಮುಂದೂಡಿಕೆ ಮಾಡಿದ್ದು, ಉಳಿತಾಯಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಪರಿಣಾಮ ಠೇವಣಿ ಏರಿಕೆಯಾಗುತ್ತಿದ್ದರೆ, ಸಾಲ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ.

ಸಾಲ ಕೊಳ್ಳಲು ಜನರು ಹಿಂದೇಟು ಹಾಕುತ್ತಿರುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ನಾನಾ ವಲಯಗಳಲ್ಲೂ ಸಾಲಕ್ಕೆ ಬೇಡಿಕೆ ಇಳಿಕೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಸಾಲದ ವಿತರಣೆ ಚೇತರಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಬ್ಯಾಂಕಿಂಗ್‌ ಕ್ಷೇತ್ರದ ತಜ್ಞರು.

ಇನ್ನೊಂದು ಕಡೆ ಮುಂದಿನ 12 ರಿಂದ 18 ತಿಂಗಳಲ್ಲಿ ವಸೂಲಾಗದ ಸಾಲಗಳು ಶೇ.8 ರಿಂದ ಶೇ. 11ವರೆಗೆ ಏರಿಕೆಯಾಗಬಹುದು ಎಂದು ಎಸ್‌&ಪಿ ಗ್ಲೋಬಲ್‌ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ