ಆ್ಯಪ್ನಗರ

ಹಂತ ಹಂತದ ಬದಲಿಗೆ ಒಂದೇ ಬಾರಿಗೆ ಕೈಗಾರಿಕೆ ಆರಂಭಿಸಿ: ಪ್ರಧಾನಿಗೆ ದೇಶಪಾಂಡೆ ಪತ್ರ

​"ಲಾಕ್‌ಡೌನ್‌ ವಿಸ್ತರಣೆ ನಡುವೆಯೂ ಕೈಗಾರಿಕೆಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿರುವುದು ಸೂಕ್ತವಾದ ತೀರ್ಮಾನವಾಗದು," ಎಂದು ರಾಜ್ಯದ ಮಾಜಿ ಕೈಗಾರಿಕಾ ಸಚಿವ ಆರ್‌ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka 14 Apr 2020, 10:29 pm

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಹಂತ ಹಂತವಾಗಿ ಕೈಗಾರಿಕಾ ಚಟುವಟಿಕೆ ಅರಂಭಿಸುವ ಬದಲು ಒಂದೇ ಹಂತದಲ್ಲಿ ಪ್ರಾರಂಭಿಸುವಂತೆ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.
Vijaya Karnataka Web RV Deshpande


ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿರುವ ಅವರು, "ಲಾಕ್‌ ಡೌನ್‌ ಅವಧಿಯನ್ನು ಮೇ 3ರ ವರೆಗೆ ವಿಸ್ತರಣೆ ಮಾಡಿದ್ದು ಸೋಂಕು ನಿಯಂತ್ರಣ ದೃಷ್ಟಿಯಿಂದ ಸರಿಯಾದ ಕ್ರಮ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಲಾಕ್‌ಡೌನ್‌ ವಿಸ್ತರಣೆ ನಡುವೆಯೂ ಕೈಗಾರಿಕೆಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿರುವುದು ಸೂಕ್ತವಾದ ತೀರ್ಮಾನವಾಗದು," ಎಂದು ಕರ್ನಾಟಕ ಮಾಜಿ ಕೈಗಾರಿಕಾ ಸಚಿವರೂ ಆಗಿರುವ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಏಪ್ರಿಲ್‌ 20ರವರೆಗೂ ನಿಷೇಧಾಜ್ಞೆ, ನಾಳೆಯಿಂದ ಲಾಕ್‌ಡೌನ್‌ ಕಠಿಣ ಅಂದ್ರೇ ಕಠಿಣ..!

"ಕೈಗಾರಿಕೆಗಳು ಒಂದಕ್ಕೊಂದು ಅವಲಂಬಿತವಾಗಿವೆ. ಉತ್ಪಾದನಾ ವಲಯ, ಸಾಗಣೆ ವಲಯ, ಮಾರುಕಟ್ಟೆಗಳು ಒಂದನ್ನೊಂದು ಅವಲಂಬಿಸಿವೆ. ಹೀಗಾಗಿ, ಹಂತ ಹಂತವಾಗಿ ಕೈಗಾರಿಕೆಗಳ ಆರಂಭದಿಂದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ," ಎಂದು ಅವರು ಸಲಹೆ ನೀಡಿದ್ದಾರೆ.

ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 14ರವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್‌ನ್ನು ಮೇ 3ರವರೆಗೆ ಮುಂದೂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ