ಆ್ಯಪ್ನಗರ

ಮುಂದುವರಿದ ಗೂಳಿ ಓಟ, 43,000 ಅಂಕಗಳ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌

ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್‌ ತನ್ನ ಕೊರೊನಾ ಲಸಿಕೆ ಶೇಕಡಾ 90ರಷ್ಟು ಯಶಸ್ವಿಯಾಗಿದೆ ಎಂದು ಮಂಗಳವಾರ ಘೋಷಿಸಿತ್ತು. ಇದು ಹೂಡಿಕೆದಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

Agencies 10 Nov 2020, 5:45 pm
ಹೊಸದಿಲ್ಲಿ: ಸತತ ಎರಡನೇ ದಿನ ದಿನವೂ ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸೋಮವಾರದ ದಾಖಲೆ ಮುರಿದು ಮಂಗಳವಾರ ಹೊಸ ದಾಖಲೆ ಬರೆದಿದೆ.
Vijaya Karnataka Web stock market


ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್‌ ತನ್ನ ಕೊರೊನಾ ಲಸಿಕೆ ಶೇ.90ರಷ್ಟು ಯಶಸ್ವಿಯಾಗಿದೆ ಎಂದು ಮಂಗಳವಾರ ಘೋಷಿಸಿತ್ತು. ಇದು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಪರಿಣಾಮ ಸೆನ್ಸೆಕ್ಸ್‌ ಮಂಗಳವಾರ ಬರೋಬ್ಬರಿ 680 ಅಂಕಗಳ ಏರಿಕೆಯೊಂದಿಗೆ 43,000 ಅಂಕಗಳ ಗಡಿ ದಾಟಿ 43,277.65 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ನಿಫ್ಟಿಯೂ 170.05 ಅಂಕಗಳ ಏರಿಕೆ ಕಂಡಿದ್ದು, ದಿನದಂತ್ಯಕ್ಕೆ 12,631.10 ಅಂಕಗಳಿಗೆ ಸ್ಥಿರವಾಯಿತು. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 42,500 ಅಂಕಗಳ ಗಡಿ ದಾಟಿ ದಾಖಲೆ ಬರೆದಿತ್ತು. ಅದೀಗ ಮತ್ತಷ್ಟು ಉತ್ತಮಗೊಂಡಿದೆ.

ಮಂಗಳವಾರದ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಷೇರುಗಳು ಭಾರಿ ಏರಿಕೆ ದಾಖಲಿಸಿದವು. ವಿಮಾನಯಾನ ಸಂಸ್ಥೆಗಳ ಷೇರುಗಳೂ ಶೇ. 10ರಷ್ಟು ಏರಿಕೆ ಕಂಡವು. ಐಟಿ ಮತ್ತು ಫಾರ್ಮಾ ಕಂಪನಿಗಳ ಷೇರುಗಳು ಈ ಏರಿಕೆಯ ನಡುವೆಯೂ ಕುಸಿತ ದಾಖಲಿಸಿದವು.

ಬಿಹಾರ ಚುನಾವಣೆ, ಕೊರೊನಾ ಲಸಿಕೆ ಎಫೆಕ್ಟ್‌, ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್‌
127 ಕಂಪನಿಗಳ ಷೇರುಗಳ ಮೌಲ್ಯ ಕಳೆದ ಒಂದು ವರ್ಷದ ಅವಧಿಯಲ್ಲೇ ಗರಿಷ್ಠ ಮಟ್ಟದಲ್ಲಿವೆ. ಎಸ್ಕಾರ್ಟ್ಸ್‌, ಹ್ಯಾವೆಲ್ಸ್‌, ಇಂಡಿಗೋ, ಎಸ್‌ಆರ್‌ಎಫ್‌, ಫೈಜರ್‌, ಕೆಪಿಆರ್‌ ಮಿಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌ ಇವುಗಳಲ್ಲಿ ಪ್ರಮುಖವಾದವು.

ದೊಡ್ಡ ಕಂಪನಿಗಳ ವಿಭಾಗದಲ್ಲಿ ಬಜಾಜ್‌ ಫೈನಾನ್ಸ್‌ ಷೇರುಗಳು ಮಂಗಳವಾರ ಶೇ.8.93ರಷ್ಟು ಏರಿಕೆ ಕಂಡವು. ಇಂಡಸ್‌ಇಂಡ್‌ ಬ್ಯಾಂಕ್‌ 7.71 ಹಾಗೂ ಎಲ್‌&ಟಿ, ಬಜಾಜ್‌ ಫಿನ್‌ಸರ್ವ್‌, ಎಸ್‌ಬಿಐ, ಎಚ್‌ಡಿಎಫ್‌ಸಿ, ಜಿಎಐಎಲ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಮೌಲ್ಯ ಶೇ. 4 ರಿಂದ 8ರಷ್ಟು ಏರಿಕೆ ಕಂಡಿತು.

ಸೆನ್ಸೆಕ್ಸ್‌, ನಿಫ್ಟಿ ಸಾರ್ವಕಾಲಿಕ ದಾಖಲೆ; 42,500 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್‌
ನಿಫ್ಟಿಯಲ್ಲಿ ಟೆಕ್‌ ಮಹೀಂದ್ರಾ ಷೇರುಗಳ ಶೇ 5.73 ಕುಸಿತ ದಾಖಲಿಸಿದರೆ, ಸಿಪ್ಲ, ಎಚ್‌ಸಿಎಲ್‌ ಟೆಕ್‌, ದಿವೀಸ್‌ ಲ್ಯಾಬೊರೇಟರೀಸ್‌ , ನೆಸ್ಟ್ಲೆ ಇಂಡಿಯಾ, ಇನ್ಫೋಸಿಸ್‌, ಡಾ ರೆಡ್ಡೀಸ್‌ ಲ್ಯಾಬೊರೇಟರೀಸ್‌, ಸನ್‌ ಫಾರ್ಮಾ ಕಂಪನಿಗಳ ಷೇರುಗಳು ಶೇ. 3 ರಿಂದ 6ರಷ್ಟು ಕುಸಿತ ಕಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ