ಆ್ಯಪ್ನಗರ

ದಸರಾ: ಬಿಎಸ್ಸೆನ್ನೆಲ್‌ ಕೊಡುಗೆ

ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್‌ ಶೇ.50ರಷ್ಟು ಕ್ಯಾಶ್‌ಬ್ಯಾಕ್‌ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ.

Vijaya Karnataka 29 Sep 2017, 8:08 am

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್‌ ಶೇ.50ರಷ್ಟು ಕ್ಯಾಶ್‌ಬ್ಯಾಕ್‌ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ.

ಎಸ್‌ಟಿವಿಎಸ್‌ ವಾಯ್ಸ್‌ ರಿಚಾರ್ಜ್‌ಗಳಲ್ಲಿ ಸೆಪ್ಟೆಂಬರ್‌ 25ರಿಂದ ಒಂದು ತಿಂಗಳಿನ ಕಾಲ ಗ್ರಾಹಕರು ಶೇ.50ರಷ್ಟು ಕ್ಯಾಶ್‌ ಬ್ಯಾಕ್‌ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. 'ಕ್ಯಾಶ್‌ ಬ್ಯಾಕ್‌ ಇನ್‌ ಮೇನ್‌ ಅಕೌಂಟ್‌' ವಿಭಾಗದಲ್ಲಿ ಟಾಕ್‌ ವಾಲ್ಯೂ ರೂಪದಲ್ಲಿ ಶೇ.50ರಷ್ಟು ಕ್ಯಾಶ್‌ ಬ್ಯಾಕ್‌ ಪಡೆಯಬಹುದು.

Vijaya Karnataka Web dasara offer by bsnl
ದಸರಾ: ಬಿಎಸ್ಸೆನ್ನೆಲ್‌ ಕೊಡುಗೆ


ಎಸ್‌ಟಿವಿ 44, 132, 65, 69ಕ್ಕೆ ಇದು ಅನ್ವಯ. 40 ರೂ, 60 ಮತ್ತು 80 ರೂ. ಟಾಪ್‌-ಅಪ್‌ನಲ್ಲಿ ಫುಲ್‌ ಟಾಕ್‌ ಟೈಮ್‌ ಸಿಗಲಿದೆ. 429 ರೂ.ಗಳ ವಾಯ್ಸ್‌ ಮತ್ತು ಡೇಟಾ ಸೆಂಟ್ರಿಕ್‌ ಪ್ಲಾನ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅಮಿತ ಕರೆ ಮತ್ತು ದಿನಕ್ಕೆ 1 ಜಿಬಿ ಡೇಟಾವನ್ನು ಕೂಡ 90 ದಿನಗಳ ಅವಧಿಗೆ ಪಡೆಯಬಹುದು ಎಂದು ಬಿಎಸ್ಸೆನ್ನೆಲ್‌ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ