ಆ್ಯಪ್ನಗರ

ಎಟಿಎಂ ಬಳಕೆದಾರರೆ ಎಚ್ಚರ! ಡಾರ್ಕ್‌ವೆಬ್‌ನಲ್ಲಿ 10 ಕೋಟಿ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ!

ಜಸ್‌ಪೇ ಸರ್ವರ್‌ ಹ್ಯಾಕ್‌ ಆದ ನಂತರ ಡಾರ್ಕ್ ವೆಬ್ ನಲ್ಲಿ 10 ಕೋಟಿಗೂ (100 ಮಿಲಿಯನ್) ಹೆಚ್ಚು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಶೋಧಕರೊಬ್ಬರು ತಿಳಿಸಿದ್ದಾರೆ.

Vijaya Karnataka Web 4 Jan 2021, 6:15 pm
ಹೊಸದಿಲ್ಲಿ: ಜಸ್‌ಪೇ ಸರ್ವರ್‌ ಹ್ಯಾಕ್‌ ಆದ ನಂತರ ಡಾರ್ಕ್ ವೆಬ್ ನಲ್ಲಿ 10 ಕೋಟಿಗೂ (100 ಮಿಲಿಯನ್) ಹೆಚ್ಚು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಶೋಧಕರೊಬ್ಬರು ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
Vijaya Karnataka Web debit-cards
representative image




ಕಾರ್ಡ್‌ ಬಳಕೆದರ ಹೆಸರುಗಳು, ದೂರವಾಣಿ ಸಂಖ್ಯೆಗಳು ಮತ್ತು ಇಮೇಲ್ ವಿಳಾಸ ಸೇರಿದಂತೆ ಪೂರ್ಣ ಮಾಹಿತಿಯನ್ನು ಒಳಗೊಂಡ ದತ್ತಾಂಶವು ಸೋರಿಕೆಯಾಗಿರುವ ಸಾಧ್ಯತೆ ಇದೆ.

ಶಾಕಿಂಗ್‌: 70 ಲಕ್ಷ ಭಾರತೀಯ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆ; ಡೆಬಿಟ್‌-ಕ್ರೆಡಿಟ್‌ ಕಾರ್ಡ್‌ಗಳಿಂದ ಮಾಹಿತಿಗೆ ಕನ್ನ

ಇದಲ್ಲದೇ, ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳು ಕೂಡ ಬಹಿರಂಗವಾಗಿವೆ ಎನ್ನಲಾಗಿದೆ. ಅಂದ ಹಾಗೇ ಈ ಸೋರಿಕೆಯು ಜಾಗತಿಕ ಪೇಮೆಂಟ್ಸ್ ವೇದಿಕೆಯಾದ ಜಸ್‌ಪೇ (Juspay) ಜೊತೆಗೆ ಸಂಬಂಧ ಹೊಂದಿದ್ದು, ಅಮೆಜಾನ್, ಮೇಕ್ ಮೈ ಟ್ರಿಪ್ ಮತ್ತು ಸ್ವಿಗ್ಗಿ ಸೇರಿದಂತೆ ಭಾರತೀಯ ಮತ್ತು ಜಾಗತಿಕ ವರ್ತಕರಿಗೆ ವಹಿವಾಟು ಸೇವೆ ಒದಗಿಸುತ್ತದೆ.

ಬೆಂಗಳೂರು: ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ ಅಂತರಾಷ್ಟ್ರೀಯ ಹ್ಯಾಕರ್ ಬಂಧನ!

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ತನ್ನ ಬಳಕೆದಾರರ ದತ್ತಾಂಶದಲ್ಲಿ ಆಗಸ್ಟ್ ನಲ್ಲಿ ರಾಜಿ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದೆ. ಡಾರ್ಕ್ ಇಂಟರ್ನೆಟ್‌ನಲ್ಲಿ ಹರಿದಾಡಿದ ದತ್ತಾಂಶವು ಮಾರ್ಚ್ 2017 ರಿಂದ ಆಗಸ್ಟ್ 2020ರ ನಡುವೆ ನಡೆದ ಆನ್ ಲೈನ್ ವ್ಯವಹಾರಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ. ಹಲವಾರು ಭಾರತೀಯ ಕಾರ್ಡುದಾರರ ವೈಯಕ್ತಿಕ ವಿವರಗಳು, ಅವರ ಕಾರ್ಡ್ ಅವಧಿ ಮುಗಿದ ದಿನಾಂಕಗಳು, ಗ್ರಾಹಕರ ಗುರುತಿನ ಚೀಟಿಗಳು ಮತ್ತು ಕಾರ್ಡ್‌ಗಳ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳು ಸಂಪೂರ್ಣವಾಗಿ ಗೋಚರಿಸುತ್ತದೆ ಎಂದು ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ