ಆ್ಯಪ್ನಗರ

ಮೊಬೈಲ್‌ ದರ ಸಮರಕ್ಕೆ ಡೆಡ್‌ಎಂಡ್‌

ಅರ್ಧದಷ್ಟು ಮೊಬೈಲ್‌ ಬಳಕೆದಾರರಿಗೆ ಆನ್‌ಲೈನ್‌ ಬಲು ದೂರ

THE ECONOMIC TIMES 22 Jun 2019, 5:00 am
ಹೊಸದಿಲ್ಲಿ: ಅಗ್ಗದ ದರದ ಡೇಟಾ ಸೇವೆಗಳಿಂದ ಭಾರತದ ಮೊಬೈಲ್‌ ಇಂಟರ್‌ನೆಟ್‌ ಓಟಕ್ಕೆ ವೇಗ ಸಿಕ್ಕಿದೆ. ಆದಾಗ್ಯೂ, ದೇಶದಲ್ಲಿನ 116 ಕೋಟಿ ಮೊಬೈಲ್‌ ಬಳಕೆದಾರರ ಪೈಕಿ ಅರ್ಧದಷ್ಟು ಮಂದಿಯನ್ನಷ್ಟೇ ಮೊಬೈಲ್‌ ಇಂಟರ್‌ನೆಟ್‌ ಸದ್ಯಕ್ಕೆ ತಲುಪಿದೆ. ಮೊಬೈಲ್‌ ಡೇಟಾ ದರಗಳು ಏರಿಕೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಅಗ್ಗದ ದರದ ಹ್ಯಾಂಡ್‌ಸೆಟ್‌ಗಳ ಕೊರತೆಯೂ ಇದೆ. ಇದರಿಂದಾಗಿ ಕೋಟ್ಯಂತರ ಜನರಿಗೆ ಆನ್‌ಲೈನ್‌ ಅನ್ನುವುದು ಸುಲಭಕ್ಕೆ ದಕ್ಕುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.
Vijaya Karnataka Web dead end for mobile price war
ಮೊಬೈಲ್‌ ದರ ಸಮರಕ್ಕೆ ಡೆಡ್‌ಎಂಡ್‌


2016ರ ಸೆಪ್ಟೆಂಬರ್‌ನಲ್ಲಿ ರಿಲಯನ್ಸ್‌ ಜಿಯೊ ತನ್ನ ಪ್ರವೇಶದೊಂದಿಗೆ ಭಾರತೀಯ ಟೆಲಿಕಾಂ ಲೋಕದಲ್ಲಿ ಸಂಚಲನಕ್ಕೆ ಕಾರಣವಾಯಿತು. ಜಿಯೊ ಆರಂಭಿಸಿದ ದರ ಸಮರದಿಂದಾಗಿ ಕಳೆದ 30 ತಿಂಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ದ್ವಿಗುಣಗೊಂಡಿದ್ದು 53 ಕೋಟಿ ಹೊಸ ಬಳಕೆದಾರರು ಸೃಷ್ಟಿಯಾಗಿದ್ದಾರೆ(ಟ್ರಾಯ್‌ ಅಂಕಿಅಂಶಗಳು). ಬಳಕೆದಾರರ ಸರಾಸರಿ ಡೇಟಾ ಬಳಕೆಯು 9ಜಿಬಿ ತನಕ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್‌ ಚಂದಾದಾರರ ಡೇಟಾ ಬಳಕೆಯು ಸರಾಸರಿ ತಿಂಗಳಿಗೆ 11ಜಿಬಿಯಷ್ಟಿದೆ. ಉದ್ಯಮದಲ್ಲಿ ಇದೇ ಹೆಚ್ಚಿನ ಪ್ರಮಾಣ.

1ಜಿಬಿಗೆ ಡೇಟಾಕ್ಕೆ 250 ರೂ.ಇದ್ದದ್ದು ಜಿಯೊದ ದರ ಸಮರದ ಪರಿಣಾಮ 15 ರೂ.ಗೆ ಇಳಿದಿದೆ. ಟಿಕ್‌ಟಾಕ್‌ನಂಥ ಚೀನಾದ ಆ್ಯಪ್‌ಗಳು, ಶೇರ್‌ಚಾಟ್‌ನಂಥ ಸ್ಥಳೀಯ ಆ್ಯಪ್‌ಗಳು ಕುಗ್ರಾಮಗಳಂಥ ಪ್ರದೇಶಗಳನ್ನೂ ತಲುಪಿವೆ. ಅಗ್ಗದ ದರದ ಡೇಟಾ ಸೇವೆಗಳು ಕೋಟ್ಯಂತರ ಬಳಕೆದಾರರನ್ನು ಸೃಷ್ಟಿಸಿವೆ. 116 ಕೋಟಿ ಮೊಬೈಲ್‌ ಬಳಕೆದಾರರ ಪೈಕಿ 63 ಕೋಟಿ ಮಂದಿಯ ಮೊಬೈಲ್‌ಗಳಲ್ಲಿ ಇಂಟರ್‌ನೆಟ್‌ ಇಲ್ಲ.

ಎಲ್ಲಕ್ಕೂ ಕೊನೆ ಇರುವಂತೆ ಮೊಬೈಲ್‌ ದರ ಸಮರವೂ ಅಂತಿಮಘಟ್ಟದಲ್ಲಿದೆ. ಡೇಟಾ ದರಗಳು ಪಾತಾಳಕ್ಕೆ ಕುಸಿದಿದ್ದು, ಮತ್ತಷ್ಟು ಇಳಿಕೆಯ ಅವಕಾಶಗಳಿಲ್ಲ. ಆದಾಗ್ಯೂ, ಕಡಿಮೆ ದರದ ಪ್ಯಾಕೇಜ್‌ಗಳನ್ನು ಬಳಸುತ್ತಿರುವ ಚಂದಾದಾರರು ಹೊರಗುಳಿಯುವ ಸಾಧ್ಯತೆಗಳಿವೆ. ಅಗ್ಗದ ದರದ ಪ್ಯಾಕೇಜ್‌ಗಳನ್ನು ಹಿಂತೆಗೆದುಕೊಳ್ಳಲು ಪ್ರಮುಖ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಏರ್‌ಟೆಲ್‌-ವೊಡಾಫೋನ್‌ ಕಳೆದ ಮಾರ್ಚ್‌ ವೇಳೆಗೆ ಬೇಸಿಕ್‌ ಪ್ಲಾನ್‌ಗಳನ್ನು ಹಿಂತೆಗೆದುಕೊಂಡಿದ್ದು, 3 ಕೋಟಿ ಚಂದಾದಾರರನ್ನು ಕಳೆದುಕೊಂಡಿವೆ. ಕೆಲ ಕಂಪನಿಗಳು ಈಗಾಗಲೇ ಹೊಸ ಗ್ರಾಹಕರಿಗೆ ಕಡಿಮೆ ದರದ ಬೇಸಿಕ್‌ ಪ್ಲಾನ್‌ಗಳನ್ನು ಒದಗಿಸುತ್ತಿಲ್ಲ. ಇನ್ನೂ ಅನೇಕರು 1000 ರೂ. ಮೌಲ್ಯದ ಫೀಚರ್‌ ಫೋನ್‌ಗಳನ್ನೇ ಬಳಸುತ್ತಿದ್ದು, 4ಜಿಗೆ ವರ್ಗವಾಗಲು ಕಷ್ಟವಾಗುತ್ತಿದೆ.

ಟೆಲಿಕಾಂ ವಲಯದಲ್ಲಿ ಆದಾಯವು 1.65 ಲಕ್ಷ ಕೋಟಿ ರೂ. ಇಳಿಕೆಯಾಗಿದೆ(2019ರ ಮಾರ್ಚ್‌). ಜಿಯೊ ಪ್ರವೇಶಿಸಿದ 2016ರಲ್ಲಿ 1.80 ಲಕ್ಷ ಕೋಟಿ ರೂ. ಆದಾಯ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ