ಆ್ಯಪ್ನಗರ

ವಿಜಯಾ, ದೇನಾ ಇಂದಿನಿಂದ ಬರೋಡಾ ಬ್ಯಾಂಕ್‌

ಈ ವಿಲೀನದ ಮೂಲಕ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 21ರಿಂದ 19ಕ್ಕೆ ಇಳಿಕೆಯಾಗಿದೆ. ಸೋಮವಾರದಿಂದ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಶಾಖೆಗಳು ಬ್ಯಾಂಕ್‌ ಆಫ್‌ ಬರೋಡಾದ ಶಾಖೆಗಳಾಗಿ ಕಾರ್ಯ ನಿರ್ವಹಿಸಲಿವೆ. ವಿಲೀನದ ಬಳಿಕ ಈ ಬೃಹತ್‌ ಬ್ಯಾಂಕ್‌ನ ಒಟ್ಟು ವಹಿವಾಟು 15 ಲಕ್ಷ ಕೋಟಿ ರೂ. ಮುಟ್ಟಿದೆ.

Vijaya Karnataka 1 Apr 2019, 11:13 am
ಹೊಸದಿಲ್ಲಿ: ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ಗ್ರಾಹಕರು ಏ.1ರಿಂದ ಬ್ಯಾಂಕ್‌ ಆಫ್‌ ಬರೋಡಾ(ಬಿಒಬಿ) ಗ್ರಾಹಕರಾಗಲಿದ್ದಾರೆ. ಈ ಮೂರು ಬ್ಯಾಂಕ್‌ಗಳ ವಿಲೀನದಿಂದ ದೇಶದಲ್ಲಿ ಮೂರನೇ ಬೃಹತ್‌ ಬ್ಯಾಂಕ್‌ ನಿರ್ಮಾಣವಾಗಿದೆ. ಎಸ್‌ಬಿಐ ಮೊದಲ ಸ್ಥಾನದಲ್ಲಿವೆ.
Vijaya Karnataka Web Bank of baroda


ಈ ವಿಲೀನದ ಮೂಲಕ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 21ರಿಂದ 19ಕ್ಕೆ ಇಳಿಕೆಯಾಗಿದೆ. ಸೋಮವಾರದಿಂದ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಶಾಖೆಗಳು ಬ್ಯಾಂಕ್‌ ಆಫ್‌ ಬರೋಡಾದ ಶಾಖೆಗಳಾಗಿ ಕಾರ್ಯ ನಿರ್ವಹಿಸಲಿವೆ. ವಿಲೀನದ ಬಳಿಕ ಈ ಬೃಹತ್‌ ಬ್ಯಾಂಕ್‌ನ ಒಟ್ಟು ವಹಿವಾಟು 15 ಲಕ್ಷ ಕೋಟಿ ರೂ. ಮುಟ್ಟಿದೆ.

1931ರಲ್ಲಿ ವಿಜಯ ಬ್ಯಾಂಕನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಯಿತು. ಬ್ಯಾಂಕ್‌ ದೇಶದೆಲ್ಲ್ಲೆಡೆ ತನ್ನ ಶಾಖೆಗಳನ್ನು ತೆರೆಯಿತು. ರೈತರ, ಕೃಷಿಕರ ಹಾಗೂ ಜನಸಾಮಾನ್ಯರ ಶ್ರಮದ ಫಲವಾಗಿ ಬ್ಯಾಂಕ್‌ ಅಂದಿನಿಂದ ಇಂದಿನವರೆಗೂ ಸದೃಢ ಸ್ಥಿತಿಯಲ್ಲಿಯೇ ಇತ್ತು. ಅಗ್ರ ಶ್ರೇಣಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ವಿಜಯ ಬ್ಯಾಂಕ್‌ ದೇಶದಲ್ಲಿ 2,129 ಶಾಖೆ ಹೊಂದಿದೆ. 2.79 ಲಕ್ಷ ಕೋಟಿ ರೂ. ವ್ಯವಹಾರ ದಾಖಲಿಸಿದೆ. 15,874 ನೌಕರರು ಇದ್ದಾರೆ. ಕಳೆದ ವಾರವಷ್ಟೇ, ಬಿಒಬಿಗೆ ಕೇಂದ್ರ ಸರಕಾರವು 5,042 ಕೋಟಿ ರೂ. ಬಂಡವಾಳ ಪೂರೈಸಲು ಕಳೆದ ವಾರ ತೀರ್ಮಾನಿಸಿತ್ತು.

ಟಾಪ್‌ 4 ಬ್ಯಾಂಕ್‌ಗಳು

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ- 45.85 ಲಕ್ಷ ಕೋಟಿ ರೂ.

ಎಚ್‌ಡಿಎಫ್‌ಸಿ- 15.8 ಲಕ್ಷ ಕೋಟಿ ರೂ.

ಬ್ಯಾಂಕ್‌ ಆಫ್‌ ಬರೋಡಾ - 15.4 ಲಕ್ಷ ಕೋಟಿ ರೂ.

ಐಸಿಐಸಿಐ- 11.02 ಲಕ್ಷ ಕೋಟಿ ರೂ.

ವಿಜಯ, ದೇನಾ ಬ್ಯಾಂಕ್‌ ಗ್ರಾಹಕರು ಗಮನಿಸಿ...

ಬ್ಯಾಂಕ್‌ ಆಫ್‌ ಬರೋಡಾಗೆ ಸೇರ್ಪಡೆಯಾಗುವ ಎಲ್ಲ ಗ್ರಾಹಕರಿಗೆ ಹೊಸ ಡೆಬಿಟ್‌ ಕಾರ್ಡ್‌, ಚೆಕ್‌ ಬುಕ್‌ ಮತ್ತು ಕ್ರೆಡಿಟ್‌ ಕಾರ್ಡ್‌ ನೀಡಲಾಗುತ್ತದೆ.

ವಾಹನ, ಗೃಹ ಮತ್ತು ವೈಯಕ್ತಿಕ ಸಾಲದ ಬಡ್ಡಿಯಲ್ಲಿ ಬದಲಾವಣೆಗಳಿಲ್ಲ. ಆರ್‌ಡಿ, ಎಫ್‌ಡಿ ಬಡ್ಡಿ ದರವೂ ಯಥಾಸ್ಥಿತಿ.

ಕೆಲವು ಶಾಖೆಗಳು ಬಂದ್‌ ಆಗಬಹುದು. ಹೀಗಾಗಿ, ಸಮೀಪದ ಬ್ಯಾಂಕ್‌ ಆಫ್‌ ಬರೋಡಾ ಸಂಪರ್ಕಿಸಬಹುದು.

ಹೊಸ ಖಾತೆ ಸಂಖ್ಯೆ ಮತ್ತು ಕಸ್ಟಮರ್‌ ಐಡಿಯನ್ನು ಗ್ರಾಹಕರಿಗೆ ವಿತರಿಸಲಾಗುವುದು.

ಆದಾಯ ತೆರಿಗೆ ಇಲಾಖೆ, ಮ್ಯುಚುವಲ್‌ ಫಂಡ್ಸ್‌, ಇನ್ಷೂರೆನ್ಸ್‌ ಕಂಪನಿ, ಎನ್‌ಪಿಎಸ್‌ ಮತ್ತಿತರ ಸಂಸ್ಥೆಗಳಿಗೆ ತಮ್ಮ ಅಪ್‌ಡೇಟ್‌ ಆದ ಬ್ಯಾಂಕಿಂಗ್‌ ವಿವರಗಳನ್ನು ಗ್ರಾಹಕರು ನೀಡಬೇಕು.

ಸಿಪ್‌ ಮತ್ತು ಸಾಲದ ಇಎಂಐಗಳಿಗೆ ಗ್ರಾಹಕರು ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ