ಆ್ಯಪ್ನಗರ

25,000 ರೂ. ಮಾಸಿಕ ವೇತನದ ತನಕ ಪಿಎಫ್‌ ಕಡ್ಡಾಯ

ಇಪಿಎಫ್‌ಒ ಸಂಘಟನೆಯು ಮಾಸಿಕ 25,000 ರೂ. ತನಕ ವೇತನ ಪಡೆಯುವ ಉದ್ಯೋಗಿಗಳಿಗೆ ಪಿಎಫ್‌ ಕಡ್ಡಾಯಗೊಳಿಸಲಿದೆ.

Vijaya Karnataka Web 8 Apr 2017, 10:58 am
ಹೊಸದಿಲ್ಲಿ: ಉದ್ಯೋಗಿಗಳಿಗೆ ಸಿಹಿ ಸುದ್ದಿ. ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು(ಇಪಿಎಫ್‌ಒ) ಮಾಸಿಕ 25,000 ರೂ. ತನಕ ವೇತನ ಪಡೆಯುವ ಉದ್ಯೋಗಿಗಳಿಗೆ ಪಿಎಫ್‌ ಕಡ್ಡಾಯಗೊಳಿಸಲಿದೆ.
Vijaya Karnataka Web month
25,000 ರೂ. ಮಾಸಿಕ ವೇತನದ ತನಕ ಪಿಎಫ್‌ ಕಡ್ಡಾಯ


ಈಗ ಮಾಸಿಕ 15,000 ರೂ. ಸಂಬಳ ಪಡೆಯುವವರಿಗೆ ಪಿಎಫ್‌ ಕಡ್ಡಾಯವಾಗಿದೆ. ಆದರೆ ಈ ಮಿತಿಯನ್ನು 25,000 ರೂ.ಗೆ ಏರಿಸಲು ಇಪಿಎಫ್‌ಒ ಚಿಂತನೆ ನಡೆಸಿದ್ದು, ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ.

ಇಪಿಎಫ್‌ಒದ ಈ ನಿರ್ಧಾರದಿಂದ ಸುಮಾರು 1 ಕೋಟಿ ಉದ್ಯೋಗಿಗಳು ಹೆಚ್ಚುವರಿಯಾಗಿ ಪಿಎಫ್‌ ವ್ಯಾಪ್ತಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ 8.5 ಕೋಟಿ ಚಂದಾದಾರರ ನೆಲೆಯನ್ನು ಇಪಿಎಫ್‌ಒ ಒಳಗೊಂಡಿದೆ.

ಈ ಪ್ರಸ್ತಾಪವು ಇಪಿಎಫ್‌ಒದ ಮುಂದಿನ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರಲಿದೆ. ಈ ಮಿತಿ ಹೆಚ್ಚಳದಿಂದ 25,000 ರೂ. ತನಕ ವೇತನ ಪಡೆಯುವವರಿಗೂ ಪಿಎಫ್‌ ಕಡ್ಡಾಯವಾಗಲಿದೆ. ಈ ಉದ್ಯೋಗಿಗಳ ಮೂಲ ವೇತನದ ಶೇ.12ರಷ್ಟು ಮೊತ್ತವನ್ನು ಇಪಿಎಫ್‌ಒದಲ್ಲಿರುವ ಉದ್ಯೋಗಿಯ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಉದ್ಯೋಗದಾತರೂ ಅಷ್ಟೇ ಮೊತ್ತ ಕೊಡಬೇಕಾಗುತ್ತದೆ. ವೇತನ ಮಿತಿಗಿಂತ ಹೆಚ್ಚಿನ ಸಂಬಳ ಪಡೆಯುವವರಿಗೆ ಇಪಿಎಫ್‌ಒ ಖಾತೆಗೆ ಕೊಡುಗೆ ಸಲ್ಲಿಸಲೇಬೇಕು ಎಂದು ಕಡ್ಡಾಯವೇನಿಲ್ಲ.

ಕಳೆದ 2014ರಲ್ಲಿ ಪಿಎಫ್‌ ಕಡ್ಡಾಯಕ್ಕೆ ಮಾಸಿಕ ವೇತನ ಮಿತಿಯನ್ನು 6,500 ರೂ.ಗಳಿಂದ 15,000 ರೂ.ಗೆ ಏರಿಸಲಾಗಿತ್ತು. ಇದೀಗ ಮತ್ತೆ ಮಿತಿ ವಿಸ್ತರಣೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ