ಆ್ಯಪ್ನಗರ

ಜುಲೈನಲ್ಲಿ ಪಿಎಫ್‌ಗೆ 8.45 ಲಕ್ಷ ಹೊಸ ಸೇರ್ಪಡೆ: ಉದ್ಯೋಗ ಸೃಷ್ಟಿಯ ಚೇತರಿಕೆ ಸಂಕೇತ!

ಉದ್ಯೋಗಿಗಳ ನಿವೃತ್ತಿ ನಿಧಿ ಮಂಡಳಿ ಇಪಿಎಫ್‌ಒದ ಖಾತೆಗೆ ಕಳೆದ ಜುಲೈನಲ್ಲಿ 9.45 ಲಕ್ಷ ಹೊಸ ಸೇರ್ಪಡೆಯಾಗಿದೆ. ಜೂನ್‌ನಲ್ಲಿ 4.82 ಲಕ್ಷ ಹೊಸ ಸೇರ್ಪಡೆಯಾಗಿತ್ತು. ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಚೇತರಿಕೆ ಉಂಟಾಗಿರುವುದನ್ನು ಇದು ಬಿಂಬಿಸಿದೆ.

THE ECONOMIC TIMES 22 Sep 2020, 9:37 am
ಹೊಸದಿಲ್ಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಮಂಡಳಿ ಇಪಿಎಫ್‌ಒದ ಖಾತೆಗೆ ಕಳೆದ ಜುಲೈನಲ್ಲಿ 9.45 ಲಕ್ಷ ಹೊಸ ಸೇರ್ಪಡೆಯಾಗಿದೆ. ಜೂನ್‌ನಲ್ಲಿ 4.82 ಲಕ್ಷ ಹೊಸ ಸೇರ್ಪಡೆಯಾಗಿತ್ತು. ಕೋವಿಡ್‌ ಬಿಕ್ಕಟ್ಟಿನ ನಡುವೆ ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಚೇತರಿಕೆ ಉಂಟಾಗಿರುವುದನ್ನು ಇದು ಬಿಂಬಿಸಿದೆ.
Vijaya Karnataka Web epfo


2020ರ ಫೆಬ್ರವರಿಯಲ್ಲಿ 10.21 ಲಕ್ಷಕ್ಕೆ ಏರಿಕೆಯಾಗಿದ್ದ ಹೊಸ ಪಿಎಫ್‌ ಸದಸ್ಯರ ಸಂಖ್ಯೆಯು ಮಾರ್ಚ್ನಲ್ಲಿ 5.72 ಲಕ್ಷಕ್ಕೆ ಇಳಿದಿತ್ತು. ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಏಪ್ರಿಲ್‌ನಲ್ಲಿ ಮೈನಸ್‌ 61,807ಕ್ಕೆ ಕುಸಿದಿತ್ತು. ಅಂದರೆ ಏಪ್ರಿಲ್‌ನಲ್ಲಿ ಹೊಸ ಸೇರ್ಪಡೆಗಿಂತ ಬಿಟ್ಟು ಹೋದವರ ಸಂಖ್ಯೆಯೇ ಹೆಚ್ಚಿತ್ತು.

ಈ ಎಲ್ಲ ಲೆಕ್ಕಾಚಾರಗಳನ್ನು ಪರಿಗಣಿಸಿದರೆ ಮಾಸಿಕ ಸರಾಸರಿ 7 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗುತ್ತಿದ್ದಾರೆ. 2019-20ರಲ್ಲಿ ಹೊಸ ಸೇರ್ಪಡೆ 78.58 ಲಕ್ಷ ಇತ್ತು. 2018-19ರಲ್ಲಿ 61.12 ಲಕ್ಷವಿತ್ತು.

ಇಪಿಎಫ್‌ v/s ಎನ್‌ಪಿಎಫ್‌: ಜನತೆ ಮೆಚ್ಚಿದ ಯೋಜನೆ ಯಾವುದು? ಏಕೆ?

88,652 ಕೋಟಿ ರೂ. ತೆರಿಗೆ ರಿಫಂಡ್‌
ಆದಾಯ ತೆರಿಗೆ ಇಲಾಖೆಯು ಈ ವರ್ಷ 25 ಲಕ್ಷ ತೆರಿಗೆದಾರರಿಗೆ ಒಟ್ಟು 88,652 ಕೋಟಿ ರೂ.ಗಳ ತೆರಿಗೆ ರಿಫಂಡ್‌ ಮಾಡಿದೆ. ಇದರಲ್ಲಿ28,180 ಕೋಟಿ ರೂ. ಗಳನ್ನು 23.05 ಲಕ್ಷ ತೆರಿಗೆದಾರರಿಗೆ ಮತ್ತು 60,472 ಕೋಟಿ ರೂ. ಕಾರ್ಪೋರೇಟ್‌ ತೆರಿಗೆ ರಿಫಂಡ್‌ಗಳನ್ನು 1.58 ಲಕ್ಷ ತೆರಿಗೆದಾರರಿಗೆ ಸಲ್ಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ