ಆ್ಯಪ್ನಗರ

ಇಪಿಎಫ್‌ಒ ಆಡಳಿತಾತ್ಮಕ ಶುಲ್ಕ ಕಡಿತ

ಉದ್ಯೋಗಿಗಳ ನಿವೃತ್ತಿ ನಿಧಿ ಮಂಡಳಿ ಇಪಿಎಫ್‌ಒ ಉದ್ಯೋಗಿಗಳ ವೇತನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಶುಲ್ಕವನ್ನು ಏಪ್ರಿಲ್‌ 1ರಿಂದ ಶೇ0...

Vijaya Karnataka Web 25 Mar 2017, 8:06 am

ಹೊಸದಿಲ್ಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಮಂಡಳಿ ಇಪಿಎಫ್‌ಒ ಉದ್ಯೋಗಿಗಳ ವೇತನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಶುಲ್ಕವನ್ನು ಏಪ್ರಿಲ್‌ 1ರಿಂದ ಶೇ.0.65ಕ್ಕೆ ಕಡಿತಗೊಳಿಸಲು ನಿರ್ಧರಿಸಿದೆ.

ಈ ನಡೆಯಿಂದ ಸುಮಾರು 6 ಲಕ್ಷ ಮಂದಿ ಉದ್ಯೋಗದಾತರಿಗೆ ಒಟ್ಟಾಗಿ ವಾರ್ಷಿಕ 1,000 ಕೋಟಿ ರೂ. ಉಳಿತಾಯವಾಗಲಿದೆ.

ಇಪಿಎಫ್‌ಒದ ಟ್ರಸ್ಟಿಗಳ ಮಂಡಳಿಯು ಆಡಳಿತಾತ್ಮಕ ಶುಲ್ಕವನ್ನು ಈಗಿನ ಶೇ.0.85ರಿಂದ ಶೇ.0.65ಕ್ಕೆ ತಗ್ಗಿಸಲು ನಿರ್ಧರಿಸಿದೆ. ಇಪಿಎಫ್‌ಒ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿತ್ತು. 2017ರ ಏಪ್ರಿಲ್‌ 1ರಿಂದ ಹೊಸ ಆಡಳಿತಾತ್ಮಕ ಶುಲ್ಕ ಅನ್ವಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ